More

    ಹೆಸ್ಕಾಂ ಆವರಣದಲ್ಲಿ ಕಾರ್ವಿುಕ ದಿನಾಚರಣೆ

    ಹಾವೇರಿ: ನಗರದ ಹೆಸ್ಕಾಂ ಕಚೇರಿ ಆವರಣದಲ್ಲಿರುವ ಕಾರ್ವಿುಕ ಸ್ಮಾರಕದ ಬಳಿ ಹೆಸ್ಕಾಂ ನೌಕರರ ಸಂಘದ ಸ್ಥಳೀಯ ಸಮಿತಿ ಆಶ್ರಯದಲ್ಲಿ ವಿಶ್ವ ಕಾರ್ವಿುಕ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು.

    ಕಾರ್ವಿುಕ ಸ್ಮಾರಕಕ್ಕೆ ಪುಷ್ಪಾರ್ಪಣೆ ಮಾಡಿದ ಕವಿಪ್ರನಿ ನೌಕರರ ಸಂಘದ ಉಪಕಾರ್ಯದರ್ಶಿ ವಿಜಯಕುಮಾರ ಮುದಕಣ್ಣನವರ ಸಮಾರಂಭಕ್ಕೆ ಚಾಲನೆ ನೀಡಿದರು.

    ಲಾಕ್​ಡೌನ್ ಸಮಯದಲ್ಲಿ ಜನಸಮುದಾಯಕ್ಕೆ, ಪೊಲೀಸ್ ಹಾಗೂ ವೈದ್ಯಕೀಯ ವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೌಕರರು ಸೇವೆ ಸಲ್ಲಿಸಿದ್ದಾರೆ. ಬೇಸಿಗೆಯ ಬೇಗೆಯಲ್ಲಿ ಮನೆಯಲ್ಲಿ ಬೇಯುತ್ತಿದ್ದ ಜನಸಾಮಾನ್ಯರಿಗೆ ಟಿವಿ, ಕಂಪ್ಯೂಟರ್ ಸೇರಿ ನಿತ್ಯೋಪಯೋಗಿ ವ್ಯವಸ್ಥೆಗೆ ಧಕ್ಕೆ ಬರದಂತೆ ಇಲಾಖೆ ಕೆಲಸ ಮಾಡಿದ್ದನ್ನು ಸಮಾಜಕ್ಕೆ ತಿಳಿಯಪಡಿಸಬೇಕಾಗಿದೆ ಎಂದರು.

    ಸ್ಥಳೀಯ ಸಮಿತಿ ಸಹಕಾರ್ಯದರ್ಶಿ ಬಸವರಾಜ ಕೋಟಿ ಮಾತನಾಡಿ, ಕಳೆದ 20 ವರ್ಷಗಳಿಂದ ಸಂಭ್ರಮದಿಂದ ಆಚರಿಸಲಾಗುತ್ತಿದ್ದ ಕಾರ್ವಿುಕ ದಿನವನ್ನು ಈ ಬಾರಿ ಕರೊನಾ ಕಾರಣಕ್ಕಾಗಿ ಅತ್ಯಂತ ಸರಳವಾಗಿ ಆಚರಿಸಲಾಗುತ್ತಿದೆ. ಮನೆಮನೆಗೆ ತೆರಳಿ ಸೇವೆ ನೀಡುತ್ತಿರುವ ನಮ್ಮ ಲೈನ್​ವೆುನ್ ಕಾರ್ವಿುಕ ವರ್ಗದ ಶ್ರಮವನ್ನು ಈ ಸಮಯದಲ್ಲಿ ಸ್ಮರಿಸಬೇಕಾಗುತ್ತದೆ ಎಂದರು.

    ಸಮಿತಿ ಮಾಜಿ ಸಂಘಟನಾ ಕಾರ್ಯದರ್ಶಿ ಸಿ.ಎ. ಕೂಡಲಮಠ, ಸಿ.ಎನ್. ಬಡ್ನಿ, ಲೆಕ್ಕಾಧಿಕಾರಿ ಅಮಾನುಲ್ಲಾ, ಕೇಂದ್ರ ಸಮಿತಿ ಸದಸ್ಯ ಅಶೋಕ ಸಾಳುಂಕೆ, ಸ್ಥಳೀಯ ಸಮಿತಿಯ ಅಧ್ಯಕ್ಷ ಎಂ.ಎಸ್. ಕುಮ್ಮೂರ, ಹಿರಿಯ ಬಂಡಾಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿದರು.

    ಸಿ.ಎಂ. ದೊಡ್ಡಮನಿ, ಕೆ.ಎನ್ ಜಾನ್ವೇಕರ್, ಆರ್.ಎಫ್. ಕಾಳೆ, ಎಂ.ಕೆ. ತರಿಕೇರಿ, ಶಿವಪ್ರಕಾಶ ಶೆಟ್ಟರ, ಸುಶೀಲಾ ಗುಳೇದಗುಡ್ಡ, ಎಸ್.ವಿ. ಕುಲಕರ್ಣಿ, ಎಚ್.ಎಸ್. ದೇವಗಿರಿ, ಶಂಕರ ಕಾಳಶೆಟ್ಟಿ ಇತರರಿದ್ದರು. ನಂತರ ನೌಕರರಿಗೆ ಮಾಸ್ಕ್​ಗಳನ್ನು ವಿತರಿಸಲಾಯಿತು. ಎ.ಕೆ. ಯಮನೂರ ಸ್ವಾಗತಿಸಿದರು. ಕೆ.ಎನ್. ಅಗಡಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts