More

    ಹೆಲ್ಮೆಟ್ ಧರಿಸದಿದ್ದರೆ ಬೀಳುತ್ತೆ ದಂಡ

    ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹೆಲ್ಮೆಟ್, ಮಾಸ್ಕ್ ಧರಿಸದೆ ಸಂಚರಿಸುವ ವಾಹನ ಸವಾರರನ್ನು ಪೊಲೀಸರು ಗುರುವಾರ ತಡೆದು ತಿಳಿವಳಿಕೆ, ಎಚ್ಚರಿಕೆ ನೀಡಿದರು. ಪ್ರಸ್ತುತ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಪಿಐ ವಿಕಾಸ ಪಿ.ಎಲ್., ಪಿಎಸ್​ಐ ಶಿವಯೋಗಿ ಲೋಹಾರ ನೇತೃತ್ವದಲ್ಲಿ ಪೊಲೀಸರು ಹೆಲ್ಮೆಟ್ ಧರಿಸದ ಬೈಕ್ ಸವಾರರನ್ನು ತಡೆದು ತಿಳಿವಳಿಕೆ ಹೇಳಿ ದಂಡ ವಿಧಿಸಿದರು.

    ನಾಲ್ಕು ಚಕ್ರಗಳ ವಾಹನಗಳ ದಾಖಲೆ ಪತ್ರಗಳನ್ನು ಪರಿಶೀಲಿಸಿದರು. ಕಾಗದ ಪತ್ರಗಳು, ಲೈಸೆನ್ಸ್ ಹೊಂದಿರದ ವಾಹನ ಸವಾರರಿಗೆ ನೋಟಿಸ್ ನೀಡಿದರು. ಕರೊನಾ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಸಹ ಕಡ್ಡಾಯವಾಗಿದೆ. ನಿಯಮ ಮೀರಿದವರಿಗೆ ಸೆ. 26ರಿಂದ ದಂಡ ವಿಧಿಸುವುದಾಗಿ ಎಚ್ಚರಿಸಿದ್ದಾರೆ.

    ಸಿಪಿಐ ವಿಕಾಸ್ ಪಿ.ಎಲ್. ಅವರು ಪತ್ರಿಕೆಯೊಂದಿಗೆ ಮಾತನಾಡಿ, ಬಹುತೇಕ ಅಪಘಾತಗಳಲ್ಲಿ ಹೆಲ್ಮೆಟ್ ಇಲ್ಲದ್ದರಿಂದಲೇ ಪ್ರಾಣಹಾನಿ ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಜನರ ಹಿತದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಬೈಕ್ ಸವಾರರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ ಕಾನೂನು ಪ್ರಕಾರ ದಂಡ ವಸೂಲಿ ಮಾಡಲಾಗುವುದು. ಪಾಲಕರು ಅಪ್ರಾಪ್ತ ಮಕ್ಕಳು, ವಿದ್ಯಾರ್ಥಿಗಳಿಗೆ ವಾಹನ ಚಾಲನೆಗೆ ಅವಕಾಶ ನೀಡಬಾರದು. ಬೈಕ್ ಸವಾರರು ವಾಹನಗಳ ಎಲ್ಲ ದಾಖಲೆಗಳ ದ್ವಿಪ್ರತಿಗಳನ್ನು ಹೊಂದಿರಬೇಕು. ಬೈಕ್​ನಲ್ಲಿ ಟ್ರಿಪಲ್ ರೈಡಿಂಗ್ ಕಂಡರೆ ವಾಹನ ವಶಪಡಿಸಿಕೊಳ್ಳಲಾಗುವುದು. ಇದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ತಿಳಿಸಿದರು.

    ಅಪರಾಧ ವಿಭಾಗದ ಪಿಎಸ್​ಐ ಪಿ.ಎಂ. ಬಡಿಗೇರ, ಎಎಸ್​ಐ ವೈ.ಎಸ್. ಕೂಬಿಹಾಳ, ಎಸ್.ಎಚ್. ಬೆಟಗೇರಿ, ಟಿ.ಕೆ. ರಾಥೋಡ, ಆರ್.ಎಸ್. ನಿಂಗೋಜಿ, ಎಂ.ಆರ್. ಮಟ್ಟಿ, ಪಾಂಡುರಂಗರಾವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts