More

    ಹೆಮು ಕಲಾನಿ ಚೌಕ್ ಬಳಿ ಕಸದ ರಾಶಿ

    ಬೆಳಗಾವಿ: ನಗರದ ಹೆಮು ಕಲಾನಿ ಚೌಕ್ ಬಳಿ ಮುಖ್ಯರಸ್ತೆ ಬದಿಯಲ್ಲೇ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಪದಾರ್ಥ ಎಸೆಯಲಾಗುತ್ತಿದ್ದು, ದುರ್ವಾಸನೆ ಹೆಚ್ಚಿದೆ. ಕಸ ವಿಲೇವಾರಿ ಪ್ರಕ್ರಿಯೆ ಸರಿಯಾಗಿ ನಡೆಯದ್ದರಿಂದ ಕಾಯಿಲೆ ಹರಡುವ ಭೀತಿ ಸ್ಥಳೀಯರನ್ನು ಕಾಡುತ್ತಿದೆ.

    ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಿಂದ ಮುಖ್ಯ ಅಂಚೆ ಕಚೇರಿ, ರೈಲ್ವೆ ನಿಲ್ದಾಣ, ಕ್ಯಾಂಪ್ ಪ್ರದೇಶ ಮತ್ತಿತರ ಬಡಾವಣೆಗಳಿಗೆ ಜನರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಈ ರಸ್ತೆ ಸದಾ ಜನದಟ್ಟಣೆಯಿಂದ ಕೂಡಿರುತ್ತದೆ. ಆದರೆ, ರಸ್ತೆಬದಿ ಜನರು ಎಸೆಯುತ್ತಿರುವ ಕಸದಿಂದಾಗಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿದೆ.

    ಮಳೆಯಾದರೆ ತ್ಯಾಜ್ಯ ಪದಾರ್ಥಗಳೆಲ್ಲ ರಸ್ತೆ ಮೇಲೆ ಹರಿದು ಬರುತ್ತಿವೆ. ಇಲ್ಲಿನ ಅಸ್ವಚ್ಛತೆಯಿಂದಾಗಿ ಸೊಳ್ಳೆಗಳ ಕಾಟವೂ ಹೆಚ್ಚುತ್ತಿದೆ. ಜಾನುವಾರುಗಳು ಇಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಸೇವನೆ ಮಾಡುತ್ತಿದ್ದು, ಅವುಗಳ ಜೀವಕ್ಕೂ ತೊಡಕಾಗುತ್ತಿದೆ. ಮಹಾನಗರ ಪಾಲಿಕೆ ಇತ್ತ ಗಮನ ಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಮಳೆಗಾಲ ಸಮೀಪಿಸುತ್ತಿರುವುದರಿಂದ ಅಧಿಕಾರಿಗಳು ಈಗಿನಿಂದಲೇ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಈ ವೃತ್ತದ ಬಳಿ ಕಸ ಸಂಗ್ರಹಿಸಲು ಕಂಟೇನರ್ ಅಳವಡಿಸಬೇಕು. ಆಗಾಗ ಈ ಪರಿಸರದಲ್ಲಿ ಕೀಟನಾಶಕ ಸಿಂಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಹೆಮು ಕಲಾನಿ ಚೌಕ್ ಬಳಿ ಬಿದ್ದಿರುವ ಕಸ ವಿಲೇವಾರಿಗೆ ಸೂಚಿಸಲಾಗುವುದು. ಅಲ್ಲದೆ, ಸಾಮುದಾಯಿಕ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
    | ಕೆ.ಎಚ್. ಜಗದೀಶ ಆಯುಕ್ತ, ಮಹಾನಗರ ಪಾಲಿಕೆ, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts