More

    ಹೆಬ್ಬಾಳೆ ಸೇತುವೆ ಸಂಪೂರ್ಣ ಮುಳುಗಡೆ

    ಕಳಸ: ಕಳಸ- ಹೊರನಾಡು ಮಾರ್ಗದ ಭದ್ರಾ ನದಿ ಹೆಬ್ಬಾಳೆ ಸೇತುವೆ ಸೋಮವಾರ ಮತ್ತೆ ಮುಳುಗಡೆಯಾಗಿದೆ. ಕಾರ್ಲೆಯಲ್ಲಿ ಹಳ್ಳ ಉಕ್ಕಿ ಹರಿದಿದ್ದರಿಂದ ಕಾಲುಸಂಕ ಮುಳುಗಡೆಯಾಗಿ ಎಂಟು ಕುಟುಂಬಗಳ ಸಂಪರ್ಕ ಕಡಿತವಾಗಿದೆ.

    ಕಳೆದ ಮಳೆಗೆ ಸೇತುವೆ ಕೊಚ್ಚಿಹೋಗಿದ್ದರಿಂದ ಕಾರ್ಲೆ ಗ್ರಾಮಸ್ಥರೇ ಸೇರಿ ಕಾಲುಸಂಕ ನಿರ್ವಿುಸಿಕೊಂಡಿದ್ದರು. ಆದರೆ ಹಳ್ಳ ಮೈದುಂಬಿ ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿದೆ. ಹೊಸ ಸೇತುವೆ ಮಂಜೂರಾಗಿದ್ದು, ಮಳೆಗಾಲ ಮುಗಿದ ಕೂಡಲೇ ಆರಂಭಿಸುವ ಸಾಧ್ಯತೆ ಇದೆ.

    ಅತಿವೃಷ್ಟಿ ಪ್ರದೇಶಗಳ ವೀಕ್ಷಣೆಗೆ ತೆರಳಿದ್ದ ಶಾಸಕ ಎಂ.ಪಿ.ಕುಮಾರಸ್ವಾಮಿ ಹೆಬ್ಬಾಳೆ ಸೇತುವೆ ಮುಳುಗಿದ್ದರಿಂದ ವಾಪಸಾದರು. ತಾಲೂಕಿನ ಕವನಳ್ಳ ಗ್ರಾಮದಲ್ಲಿ ಮನೆ ಕುಸಿದಿತ್ತು. ಅಲ್ಲದೆ ರಸ್ತೆ ಸಂಪರ್ಕವೂ ಕಡಿತಗೊಂಡಿತ್ತು. ವೀಕ್ಷಣೆಗಾಗಿ ಎಂ.ಪಿ.ಕುಮಾರಸ್ವಾಮಿ ಕವನಳ್ಳಕ್ಕೆ ಹೊರಟಿದ್ದರು. ಹೆಬ್ಬಾಳೆ ಸೇತುವೆ ಬಳಿ ಒಂದು ತಾಸು ಕಾದರೂ ನೀರು ಇಳಿಕೆಯಾಗದ ಹಿನ್ನೆಲೆಯಲ್ಲಿ ವಾಪಸಾದರು.

    ಕಳಸ-ಕುದುರೆಮುಖ ರಸ್ತೆ ನೆಲ್ಲಿಬೀಡು ಎಂಬಲ್ಲಿ ಜಲಾವೃತವಾಗಿದ್ದರಿಂದ ಕೆಲ ಗಂಟೆಗಳ ಕಾಲ ಸಂಪರ್ಕ ಕಡಿತಗೊಂಡಿತ್ತು. ಇದರಿಂದ ಕಾರ್ಕಳ, ಮಂಗಳೂರು, ಉಡುಪಿ ಕಡೆ ಪ್ರಯಾಣಿಸುವವರು ತೊಂದರೆ ಅನುಭವಿಸಿದರು. ಸೋಮವಾರ ಸಂಜೆ ನಂತರ ಮಳೆ ಹೆಚ್ಚಾಗಿದ್ದರಿಂದ ಸೇತುವೆ ಸಂಪೂರ್ಣ ಮುಳುಗಿತ್ತು. ಇದರಿಂದ ಪ್ರವಾಸಿಗರು ಕಳಸ ಮತ್ತು ಹೊರನಾಡಲ್ಲೇ ವಾಸ್ತವ್ಯ ಮಾಡಬೇಕಾಯಿತು.

    ಮರಸಣಿಗೆ ಗ್ರಾಪಂ ವ್ಯಾಪ್ತಿಯ ಗಾಳಿಗಂಡಿಯ ಮಂಜುಳಾ ಎಂಬುವವರ ಮನೆ ಗೋಡೆ ಕುಸಿದಿದೆ. ಕಲಶೇಶ್ವರ ದೇವಸ್ಥಾನದ ಕಟ್ಟೆಯ ಒಂದು ಬದಿ ಹಾನಿಗೀಡಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts