More

    ಹೆದ್ದಾರಿಯಲ್ಲಿ ಹಂಪ್ಸ್ ನಿರ್ಮಾಣಕ್ಕೆ ಆಗ್ರಹ


    ಯಾದಗಿರಿ: ಹೆದ್ದಾರಿಯಲ್ಲಿ ಹಂಪ್ ನಿರ್ಮಾಣಕ್ಕಾಗಿ ಆಗ್ರಹಿಸಿ ಇಲ್ಲಿನ ಚಿತ್ತಾಪುರ ರಸ್ತೆಯಲ್ಲಿರುವ ಡಾನ್ಬಾಸ್ಕೋ ಶಾಲೆಯ ಮಕ್ಕಳು ಜಿಲ್ಲಾಕಾರಿ ಕಚೇರಿ ಮುಂದೆ ದಿಢೀರ್ ಪ್ರತಿಭಟನೆ ನಡೆಸಿದರು.

    ಶಾಲೆಯ ಮುಂದೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ವೇಗವಾಗಿ ಬರುವ ವಾಹನಗಳಿಂದ ರಸ್ತೆ ಅಪಘಾತಗಳು ಹೆಚ್ಚಾಗುತ್ತಿದ್ದು, ಗುರುವಾರ ರಸ್ತೆ ಅಪಘಾತದಲ್ಲಿ ಶಾಲೆಯ ವಿದ್ಯಾರ್ಥಿ ತೀವ್ರ ಗಾಯಗೊಂಡಿದ್ದಾನೆ. ಇಂಥ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ನಮಗೆ ರಕ್ಷಣೆ ನೀಡುವ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

    ರಸ್ತೆ ಅಪಘಾತ ಹೆಚ್ಚಾಗುತ್ತಿದ್ದು, ವಿದ್ಯಾಥರ್ಿಗಳ ಭಯದಲ್ಲಿಯೇ ಸಂಚರಿಸುವಂತಾಗಿದೆ. ಶಾಲೆಯ ಮುಂದೆ ಹಂಪ್ಸ್ಗಳನ್ನು ನಿರ್ಮಾಣಬೇಕು. ಝಿಬ್ರಾ ಕ್ರಾಸಿಂಗ್ ಲೈನ್ ಹಾಕಬೇಕು. ಬೆಳಗ್ಗೆ ಮತ್ತು ಸಂಜೆಯ ಶಾಲೆಯ ವೇಳೆಯಲ್ಲಿ ಸಂಚಾರಿ ಪೊಲೀಸರನ್ನು ನಿಯೋಜಿಸುವ ಮೂಲಕ ಮಕ್ಕಳ ರಕ್ಷಣೆಗೆ ಮಂದಾಗಬೇಕು. ಗ್ರಾಮೀಣ ಭಾಗದಿಂದ ಆಗಮಿಸುವ ಮಕ್ಕಳಿಗೆ ಶಾಲೆಯ ಬಳಿ ಬಸ್ಗಳ ನಿಲುಗಡೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಕಾರಿ ಸ್ನೇಹಲ್, ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು. ಫಾದರ್ ಜಿತಿನ್, ವಿದ್ಯಾಥರ್ಿಗಳ ಸಂಘದ ಮುಖ್ಯಸ್ಥೆ ಶ್ರಾವಣಿ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts