More

    ಹುಮನಾಬಾದ್​ನಲ್ಲಿ ಹಾಡಹಗಲೆ ಮಾರಕಾಸ್ತ್ರಗಳಿಂದ ಹೆದರಿಸಿ ಚಿನ್ನಾಭರಣ ದರೋಡೆ

    ಹುಮನಾಬಾದ್: ಪಟ್ಟಣದಲ್ಲಿ ಮಂಗಳವಾರ ಹಾಡಹಗಲೆ ಮನೆಯೊಂದಕ್ಕೆ ನುಗ್ಗಿದ ಇಬ್ಬರು ಖದೀಮರು ಮಾರಕಾಸ್ತ್ರಗಳಿಂದ ಮಹಿಳೆಯರನ್ನು ಬೆದರಿಸಿ ಸುಮಾರು 9 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

    ಕಲ್ಲೂರ ರಸ್ತೆಯ ರಾಷ್ಟ್ರೀಯ ಹೆದ್ದಾರಿ-65ರ ಸವರ್ೀಸ್ ರಸ್ತೆಯಲ್ಲಿರುವ ಜೆಸ್ಕಾಂ ಅಧಿಕಾರಿ ಅರವಿಂದ ಧುಮಾಳೆ ಅವರ ಮನೆಯಲ್ಲಿ ದರೋಡೆ ನಡೆದಿದೆ. ಮಧ್ಯಾಹ್ನ 1ರ ಸುಮಾರಿಗೆ ಬೈಕ್ನಲ್ಲಿ ಹೆಲ್ಮೆಟ್ ಧರಿಸಿ ಬಂದು ಮನೆ ಎದುರು ನಿಲ್ಲಿಸಿ ಒಳಪ್ರವೇಶಿಸಿದ ಇಬ್ಬರು, ತಾಯಿ, ಪತ್ನಿ ಮತ್ತು ಕೆಲಸದವಳಿಗೆ ಮಾರಕಾಸ್ತ್ರ ತೋರಿಸಿ ಮೈಮೇಲಿದ್ದ ಗಂಟನ್, ಪಾಟಲಿ ಸೇರಿ 17.5 ತೊಲ ಚಿನ್ನಾಭರಣ ದೋಚಿದ್ದಾರೆ.

    ಚೋರರು ಹೊರಹೋಗುತ್ತಲೇ ಮಹಿಳೆಯರು ಹೊರಬಂದು ಕಳ್ಳರು ಕಳ್ಳರು ಎಂದು ಕೂಗಿದ್ದಾರೆ. ಅಷ್ಟರಲ್ಲಿ ದರೋಡೆಕೋರರು ಬೈಕ್ನಲ್ಲಿ ಪರಾರಿಯಾಗಿದ್ದು, ಕೆಲವರು ಬೆನ್ನಟಿದರೂ ಸಿಗಲಿಲ್ಲ. ಓಡುವ ರಬಸದಲ್ಲಿ ಅವರ ಬ್ಯಾಗ್ ಒಂದು ಬಿಟ್ಟಿದ್ದು, ಅದರಲ್ಲಿ ಮಚ್ಚು, ಚಾಕು ಪತ್ತೆಯಾಗಿವೆ. ಮಹಿಳೆಯರ ಮೇಲೆ ಯಾವುದೇ ರೀತಿಯ ಹಲ್ಲೆ ನಡೆಸಿಲ್ಲ. ಕಳ್ಳರ ಪೈಕಿ ಒಬ್ಬ ಹೆಲ್ಮೆಟ್ ಹಾಕಿಕೊಂಡಿದ್ದರೆ, ಇನ್ನೊಬ್ಬ ಕ್ಯಾಪ್ ಧರಿಸಿದ್ದ. 25-30 ವರ್ಷ ವಯಸ್ಸಿನವರಾಗಿದ್ದು, ಹಿಂದಿ ಮಾತನಾಡುತ್ತಿದ್ದರು ಎನ್ನಲಾಗಿದೆ.

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡದೊಂದಿಗೆ ಎಸ್ಪಿ ಡೆಕ್ಕಾ ಕಿಶೋರಬಾಬು, ಹೆಚ್ಚುವರಿ ಎಸ್ಪಿ ಮಹೇಶ ಮೆಘಣ್ಣನವರ, ಎಸಿಪಿ ಶಿವಾಂಸು ರಜಪೂತ, ಸಿಪಿಐ ಶರಣಬಸಪ್ಪ ಕೋಡ್ಲಾ, ಪಿಎಸ್ಐ ಮಂಜನಗೌಡ ಪಾಟೀಲ್, ಅಪರಾಧ ವಿಭಾಗದ ಪಿಎಸ್ಐ ಸುರೇಶ ಹಜ್ಜರಗಿ, ಸಂಚಾರ ಪಿಎಸ್ಐ ಬಸವರಾಜ ಹೇರೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಳ್ಳರ ಕೃತ್ಯಕ್ಕೆ ಬೆಚ್ಚಿದ ಜನತೆ: ಹಾಡಹಗಲೆ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹೆಣ್ಮಕ್ಕಳಿಗೆ ಹೆದರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿರುವುದು ಜನರಲ್ಲಿ ಭಯ ಮೂಡಿಸಿದೆ. ಮನೆಗಳಿಗೆ ಬೀಗ ಇದ್ದಾಗ ಕಳ್ಳತನ ನಡೆಯುವುದು ಸಹಜ. ಆದರೆ ಮನೆಯಲ್ಲಿ ಸದಸ್ಯರು ಇದ್ದರೂ ನುಗ್ಗಿ ಬೆದರಿಸಿ ಒಡವೆಗಳನ್ನು ಕೊಂಡೊಯ್ದಿರುವುದು ಹಾಗೂ ಇತ್ತೀಚೆಗೆ ಹುಮನಾಬಾದ್ನಿಂದ ದುಬಲಗುಂಡಿಗೆ ದ್ವಿಚಕ್ರ ವಾಹನದಲ್ಲಿ ಪತಿಯೊಂದಿಗೆ ತೆರಳುತ್ತಿದ್ದಾಗ ಚೀನಕೇರಾ ಕ್ರಾಸ್ ಬಳಿ ಹಿಂಭಾಗದಿಂದ ಬೈಕ್ನಲ್ಲಿ ಬಂದ ಇಬ್ಬರು ಕೊರಳಲ್ಲಿನ 4 ತೊಲ ಗಂಟನ್ ಕಿತ್ತುಕೊಂಡು ಪರಾರಿಯಾಗಿರುವ ಘಟನೆಯಿಂದ ಜನರಲ್ಲಿ ಆತಂಕ ಹೆಚ್ಚಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts