More

    ಹುಬ್ಬಳ್ಳಿ ತಾಲೂಕಿನಲ್ಲಿ ಶೇ. 94 ಬಿತ್ತನೆ

    ಹುಬ್ಬಳ್ಳಿ: ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮು ಉತ್ತಮವಾಗಿದ್ದು, ಶೇ. 94ರಷ್ಟು ಕ್ಷೇತ್ರದಲ್ಲಿ ಬಿತ್ತನೆಯಾಗಿದೆ. ಬೆಳೆಗಳು ಉತ್ತಮವಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿವೆ.

    ತಾಲೂಕಿನಲ್ಲಿ 34,448 ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಇತ್ತು. ವಾಸ್ತವದಲ್ಲಿ 32,458 ಹಕ್ಟೇರ್ ಬಿತ್ತನೆಯಾಗಿದೆ. ಆದರೆ, ಕೆಲವೆಡೆ ರೋಗ ಹಾಗೂ ಕೀಟಬಾಧೆ ಕಂಡು ಬಂದಿದ್ದು, ನಿಯಂತ್ರಣಕ್ಕೆ ಕೃಷಿ ಇಲಾಖೆ ಸಲಹೆ ನೀಡಿದೆ.

    ಮುಂಗಾರಿನ ಪ್ರಮುಖ ಬೆಳೆಗಳಾದ ಸೋಯಾಬೀನ್, ಹೆಸರು, ಉದ್ದು, ಶೇಂಗಾ, ಗೋವಿನಜೋಳ ಹಾಗೂ ಹತ್ತಿ ಬೆಳೆಗಳಿಗೆ ಕೀಟಬಾಧೆ ಎದುರಾಗಿದೆ. ಕೃಷಿ ವಿಶ್ವವಿದ್ಯಾಲಯದ ಶಿಫಾರಸಿನಂತೆ ಪೀಡೆ ನಾಶಕ ಬಳಸಲು ರೈತರಲ್ಲಿ ಕೃಷಿ ಇಲಾಖೆ ಕೋರಿದೆ.

    ಹೆಸರು ಹಾಗೂ ಉದ್ದಿನ ಬೆಳೆಗೆ ಸಸ್ಯ ಹೇನು ಥ್ರೀಪ್ಸ್ ಕೀಟಗಳ ??? ಕಾಟ ಶುರುವಾಗಿದೆ. ಚಿಗುರು ಎಲೆ ಮತ್ತು ಕಾಯಿಗಳಿಂದ ರಸ ಹೀರುತ್ತಿವೆ. ಅವುಗಳ ಹತೋಟಿಗೆ 1 ಮಿಲಿ ಲೀಟರ್ ಮಿಥೈಲ್ ಪ್ಯಾರಾಥಿಯನ್ 50 ಇಸಿ ಅಥವಾ 1 ಮಿ.ಲೀ. ಮಾನೊಕ್ರೊಟೊಪಾಸ್ 36 ಎಸ್​ಎಲ್ ಅಥವಾ 1.7 ಮಿ.ಲೀ. ಡೈಮಿಥೋಯಟ್ 30 ಇಸಿ ಬೆರೆಸಿ ಸಿಂಪಡಿಸಬೇಕು.

    ಕರಿಮೂತಿ ಹುಳುವಿನ ನಿರ್ವಹಣೆಗೆ ಬೆಳೆಗೆ 35 ಮತ್ತು 50 ದಿನಗಳಿದ್ದಾಗ 0.5 ಮಿ.ಲೀ. ಲ್ಯಾಮಡಾ ಸೈಲೋಥ್ರಿನ್ 5 ಇಸಿ ಅಥವಾ 2 ಮಿ.ಲೀ. ಪ್ರೊಫೆಪಾಸ್ 50 ಇಸಿ ಅಥವಾ 0.5 ಮಿ.ಲೀ. ಫೇನವಲರೆಟ್ 20 ಇಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

    ನಂಜು ರೋಗ ಬಾಧಿತ ಎಲೆಗಳ ಮೇಲೆ ದಟ್ಟ ಮತ್ತು ತಿಳಿ ಹಳದಿ ಬಣ್ಣದ ಮಚ್ಚೆಗಳು ಕಾಣಿಸುತ್ತಿವೆ. ಗಿಡಗಳು ಕುಳ್ಳಗಿದ್ದು, ರೋಗ ತೀವ್ರವಾಗಿದ್ದರೆ ಕಾಯಿ ಬಿಡುವುದಿಲ್ಲ. ಹಾಗಾಗಿ ರೋಗಕ್ಕೆ ತುತ್ತಾದ ಸಸ್ಯಗಳನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸಿ ಕಿತ್ತು ಮಣ್ಣಿನಲ್ಲಿ ಹೂಳಬೇಕು.

    ಬೂದಿ ರೋಗ ಹತೋಟಿಗೆ ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಹೆಕ್ಸಾಕೊನಾಜೋಲ್ 5 ಇಸಿ ಅಥವಾ 1 ಮಿ.ಲೀ. ಪ್ರೊಪಿಕೊನಾಜೋಲ್ 25 ಇಸಿ ಅಥವಾ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 1 ಗ್ರಾಂ ಕಾರ್ಬನ್ ಡೈಜಿಮ್ ಶಿಲೀಂಧ್ರ ನಾಶಕ ಬೆರೆಸಿ ಸಿಂಪಡಿಸಬೇಕು.

    ಸೋಯಾಬೀನ್ ಎಲೆ ತಿನ್ನುವ ಕೀಡೆ ಹಾಗೂ ಕಾಯಿ ಕೊರೆಯುವ ಹುಳ ನಿರ್ವಹಣೆಗಾಗಿ 1 ಮಿ.ಲೀ. ಬಿ.ಟಿ. ಪ್ರತಿ ಲೀಟರ್ ನೀರಿಗೆ ಅಥವಾ 2 ಗ್ರಾಂ ಜೈವಿಕ ಶಿಲೀಂಧ್ರ ನಾಶಕ ಮೆಟರೈಜಿಯಂ ಬೆರೆಸಿ 35 ದಿನಗಳಾದಾಗ ಸಿಂಪಡಿಸಬೇಕು.

    ಶೇಂಗಾಕ್ಕೆ ಸ್ಪೋಡಾಪ್ಪೆರಾ ಮತ್ತು ಎಲೆ ಸುರುಳಿ ಪೂಚಿ ಹುಳುವಿನ ನಿರ್ವಹಣೆಗೆ 1 ಗ್ರಾಂ ಅಸಿಪೇಟ್ 75 ಎಸ್​ಸಿ ಅಥವಾ 1 ಮಿ.ಲೀ. ಮಾನೋಕ್ರೊಟೊಪಾಸ್ 36 ಎಸ್​ಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

    ಗೋವಿನ ಜೋಳದ ಕಾಂಡಕೊರಕ ಮತ್ತು ಲದ್ದಿ ಹುಳು ಹತೋಟಿಗೆ 0.2 ಮಿ.ಲೀ. ಸ್ಪೈನೊಸೈಡ್ 45 ಎಸ್​ಸಿ ಅಥವಾ 0.2 ಗ್ರಾಂ ಇಮಾಮೆಕ್ಟಿನ್ ಬೆಂಝೋಯೆಟ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

    ಹತ್ತಿಯ ರಸ ಹೀರುವ ಕೀಟಗಳ ನಿರ್ವಹಣೆಗೆ ಶೇ. 5ರ ಬೇವಿನ ಬೀಜದ ಕಶಾಯ ಅಥವಾ ಬೇವಿನ ಕೀಟನಾಶಕ ಅಥವಾ ಅಂತರವ್ಯಾಪಿ ಕೀಟನಾಶಕಗಳಾದ 0.1 ಗ್ರಾಂ ಫಿಪ್ರೊನಿಲ್ 80 ಡಬ್ಲುಜಿ ಅಥವಾ 0.07 ಗ್ರಾಂ ಕ್ಲೋಥೈನಿಡಿಯಾನ್ 50ಡಬ್ಲುಜಿ ಅಥವಾ 0.2 ಗ್ರಾಂ ಆಸಿಟಾಮಿಪ್ರೖೆಡ್ 20 ಎಸ್​ಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ ಸಂರ್ಪಸಲು ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ ಪ್ರಕಟಣೆಯಲ್ಲಿ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts