More

    ಹುತಾತ್ಮ ಸೈನಿಕರಿಗೆ ಎಬಿವಿಪಿಯಿಂದ ಶ್ರದ್ಧಾಂಜಲಿ

    ಹಿರೇಕೆರೂರ: ಪುಲ್ವಾಮಾ ದಾಳಿಯಲ್ಲಿ ಭಾರತೀಯ ಸೈನಿಕರು ಹುತಾತ್ಮರಾಗಿ ಇಂದಿಗೆ ಒಂದು ವರ್ಷ ಕಳೆದಿದ್ದರ ನೆನಪಿಗಾಗಿ ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಎಬಿವಿಪಿಯಿಂದ ಸೈನಿಕರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

    ಜಿಲ್ಲಾ ಎಬಿವಿಪಿ ಪ್ರಮುಖ ಹಾಲೇಶರಾವ್ ಹಲಗೇರಿ ಮಾತನಾಡಿ, ಉಗ್ರರ ಪಾಪಿ ಕೃತ್ಯದಿಂದ ಕಾಶ್ಮೀರದ ಪುಲ್ವಾಮಾ ಬಳಿ ಬಾಂಬ್ ದಾಳಿಗೆ ನಮ್ಮ ವೀರಯೋಧರು ಬಲಿಯಾಗಿ ಇಂದಿಗೆ ಒಂದು ವರ್ಷವಾಗಿದೆ. ಇದನ್ನು ಪ್ರತಿಯೊಬ್ಬ ಭಾರತೀಯರೂ ನೆನಪಿನಲ್ಲಿಡಬೇಕಾದ ಕರಾಳ ದಿನವಾಗಿದೆ. ಈ ಕೃತ್ಯದ ವಿರುದ್ಧ ದಿಟ್ಟತನ ಹಾಗೂ ಕಟು ನಿರ್ಧಾರವನ್ನು ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿಯವರು, ಸೈನಿಕರು ಧೃತಿಗೆಡದಂತೆ ಹುರಿದುಂಬಿಸಿ ಸೇಡು ತೀರಿಸಿಕೊಂಡಿದ್ದಾರೆ. ಪಾಕಿಸ್ಥಾನದಲ್ಲಿ ಉಗ್ರರ ನೆಲೆಗಳನ್ನು ಅವರ ದೇಶಕ್ಕೆ ಹೋಗಿ ಸದೆಬಡಿಯುವ ಮೂಲಕ ಈ ದಾಳಿಯಲ್ಲಿ ವೀರಮರಣವನ್ನಪ್ಪಿದ ಸೈನಿಕರ ಆತ್ಮಕ್ಕೆ ಗೌರವ ತಂದುಕೊಡುವ ಕಾರ್ಯಮಡಿದ್ದು, ವಿಶ್ವವೇ ಈ ಕಾರ್ಯಕ್ಕೆ ದಂಗು ಬಡಿದಿತ್ತು. ಪ್ರತಿಯೊಬ್ಬ ಭಾರತೀಯರು ಸೈನಿಕರಂತೆ ದೇಶಾಭಿಮಾನವನ್ನು ಬೆಳೆಸಿಕೊಂಡು, ತಾಯಿ ನಾಡಿನ ನೆಲ, ಜಲ, ಪ್ರಾಣ ರಕ್ಷಣೆಗೆ ಮುಂದಾಗಬೇಕು ಎಂದರು.

    ಕೃಷಿ ಸಚಿವ ಬಿ.ಸಿ. ಪಾಟೀಲ ಸ್ಥಳಕ್ಕಾಗಮಿಸಿ, ಹುತಾತ್ಮ ಯೋಧ ಮತ್ತು ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

    ಎಬಿವಿಪಿ ನಗರಾಧ್ಯಕ್ಷ ಎಸ್.ಹೊಸಗೌಡರ, ನಗರ ಕಾರ್ಯದರ್ಶಿ ಕಾರ್ತಿಕ್ ಕುರಬರ, ಮಂಜು ಕೊಳ್ಳೇರ, ಸುನಿಲ್ ದೊಡ್ಮನಿ, ಶೇಷಾಂಕ ಹಳ್ಳೂರ, ಕಿರಣ ಮಡಿವಾಳರ, ಗಣೇಶ ಕರಿಗಾರ, ಮೌನೇಶ ಕಮ್ಮಾರ, ಶ್ರೀಕಾಂತ ಸುಣಗಾರ ಹಾಗೂ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts