More

    ಹುಕ್ಕಾ ಬಾರ್ ಮೇಲೆ ಪೊಲೀಸ್ ದಾಳಿ

    ಹುಬ್ಬಳ್ಳಿ: ಕೆಫೆ ಹೆಸರಲ್ಲಿ ಹುಕ್ಕಾ ಬಾರ್ ನಡೆಸುತ್ತಿದ್ದ ಇಲ್ಲಿನ ವಿದ್ಯಾನಗರ ಜಯನಗರದ ಕಲಬುರ್ಗಿ ಗಾರ್ಡನ್ ಬಳಿಯ ಮಳಿಗೆ ಮೇಲೆ ವಿದ್ಯಾನಗರ ಠಾಣೆ ಪೊಲೀಸರು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಭಾನುವಾರ ದಾಳಿ ನಡೆಸಿ, ಎರಡು ಹುಕ್ಕಾ ಮಷಿನ್ ಹಾಗೂ 10 ತಂಬಾಕು ಪ್ಯಾಕೆಟ್​ಗಳನ್ನು ವಶಪಡಿಸಿಕೊಂಡಿದ್ದಾರೆ.

    ಅರ್ಬನ್ ರೂಟ್ಸ್ ಕೆಫೆ ಮೇಲೆ ದಾಳಿ ನಡೆದಿದೆ. ಮಷಿನ್​ಗಳ ಮೂಲಕ ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ವಿದ್ಯಾನಗರ ಠಾಣೆ ಇನ್ಸ್ ಪೆಕ್ಟರ್ ಆನಂದ ಒನಕುದ್ರೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿದೆ. ಕೆಫೆ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕೋಟ್ಪಾ, ಎನ್​ಡಿಪಿಎಸ್, ಕೆಪಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವಶಪಡಿಸಿಕೊಂಡ ಹುಕ್ಕಾ ನಶೆಯ ವಸ್ತುಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್​ಎಸ್​ಎಲ್)ಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಎರಡನೇ ಬಾರಿ ದಾಳಿ
    ಏಳೆಂಟು ತಿಂಗಳ ಹಿಂದೆ ಅರ್ಬನ್ ರೂಟ್ಸ್ ಕೆಫೆ ಮೇಲೆ ವಿದ್ಯಾನಗರ ಠಾಣೆ ಪೊಲೀಸರು ಹಾಗೂ ಮಹಾನಗರ ಪಾಲಿಕೆಯವರು ದಾಳಿ ನಡೆಸಿ ಹಲವು ಹುಕ್ಕಾ ಮಷಿನ್​ಗಳನ್ನು ವಶಪಡಿಸಿಕೊಂಡಿದ್ದರು. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕೋಟ್ಪಾದಡಿ ಪ್ರಕರಣ ದಾಖಲಾಗಿತ್ತು. ಸದ್ಯ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಈವರೆಗೆ ಬಂದ್ ಆಗಿದ್ದ ಕೆಫೆ ವಾರದಿಂದೀಚೆಗೆ ಆರಂಭವಾಗಿತ್ತು. ಹುಕ್ಕಾ ಬಾರ್ ನಡೆಸಲು ಅನುಮತಿ ಕೋರಿ ಕೆಫೆ ಮಾಲೀಕ ಪಾಲಿಕೆಗೆ ಅರ್ಜಿಯನ್ನೂ ಸಲ್ಲಿಸಿದ್ದರು ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts