More

    ಹಿರೇಹಾಳ ಸಸ್ಯ ಪಾಲನೆ ಕೇಂದ್ರಕ್ಕೆ ಜೀವಕಳೆ

    ರೋಣ: ಲಕ್ಷಾಂತರ ರೂ. ಖರ್ಚು ಮಾಡಿ ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ನಿರ್ಮಾಣ ಮಾಡಿದ್ದ ಸಸ್ಯ ಪಾಲನಾ ಕೇಂದ್ರ ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವ ಕುರಿತು ‘ವಿಜಯವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ಸಸ್ಯ ಪಾಲನಾ ಕೇಂದ್ರಕ್ಕೆ ಜೀವಕಳೆ ಬಂದಿದೆ.

    ಮಾ. 4 ರ ‘ವಿಜಯವಾಣಿ’ ಸಂಚಿಕೆಯಲ್ಲಿ ‘ಸಸ್ಯ ಪಾಲನೆ ಮಾಡದ ಕೇಂದ್ರ’ ಶೀರ್ಷಿಕೆಯಡಿ ಪ್ರಕಟವಾದ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು, 1.50 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಸವನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸಿದ್ದಾರೆ, ನೆಲ್ಲೂರ ಸಸ್ಯ ಪಾಲನಾ ಕೇಂದ್ರದಿಂದ ಸುಮಾರು ಐದು ಸಾವಿರಕ್ಕೂ ಹೆಚ್ಚು ವಿವಿಧ ಜಾತಿಯ ಸಸಿಗಳನ್ನು ತಂದಿಟ್ಟಿದ್ದಾರೆ. ನಿರ್ವವಣೆ ಇಲ್ಲದೆ ತುಕ್ಕು ಹಿಡಿದಿದ್ದ ಕೊಳವೆ ಬಾವಿಯನ್ನು ದುರಸ್ತಿಗೊಳಿಸಿ ಸಸಿಗಳಿಗೆ ನೀರುಣಿಸಲಾಗುತ್ತಿದೆ.

    ಸಸ್ಯ ಪಾಲನಾ ಕೇಂದ್ರ ಪಾಳುಬಿದ್ದಿರುವ ಕುರಿತು ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿತ್ತು. ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ, ಯಾವಾಗ ‘ವಿಜಯವಾಣಿ’ ಯಲ್ಲಿ ವರದಿ ಪ್ರಕಟವಾಯಿತೋ ಆಗಿನಿಂದಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದ್ದ ಸಸ್ಯ ಪಾಲನಾ ಕೇಂದ್ರಕ್ಕೆ ಜೀವ ಕಳೆ ತಂದಿದ್ದಾರೆ.

    | ಭೀಮಪ್ಪ ಮಾದರ ಗ್ರಾಪಂ ಸದಸ್ಯ ಹಿರೇಹಾಳ

    ನಮ್ಮ ಇಲಾಖೆಯ ಲೋಪದೋಷಗಳನ್ನು ಎತ್ತಿ ತೋರಿಸುವ ವಿಜಯವಾಣಿ ವರದಿ ಸ್ವಾಗತಾರ್ಹ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಪಾಳು ಬಿದ್ದಿದ್ದ ಹಿರೇಹಾಳ ಗ್ರಾಮದ ಸಸ್ಯ ಪಾಲನಾ ಕೇಂದ್ರವನ್ನು ಒಂದು ಮಾದರಿಯ ಕೇಂದ್ರವನ್ನಾಗಿ ಪರಿವರ್ತಿಸಿ ತೋರಿಸುತ್ತೇವೆ.

    | ಆರ್.ಎಸ್. ನಾಗಶೆಟ್ಟಿ ಡಿಎಫ್​ಒ

    ದಾಂಡೇಲಿಯಿಂದ ವರ್ಗಾವಣೆಗೊಂಡು ಬಂದಿದ್ದೇನೆ, ನಮ್ಮ ಡಿಎಫ್​ಒ ನನ್ನನ್ನು ಹಿರೇಹಾಳ ಗ್ರಾಮದ ಸಸ್ಯ ಪಾಲನೆ ಕೇಂದ್ರದ ಜವಾಬ್ದಾರಿ ನೀಡಿ ಸಮಗ್ರ ಅಭಿವೃದ್ಧಿ ಪಡಿಸುವಂತೆ ಸೂಚಿಸಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಇದನ್ನು ಒಂದು ಮಾದರಿ ಸಸ್ಯ ಪಾಲನಾ ಕೇಂದ್ರವನ್ನಾಗಿ ಪರಿವರ್ತಿಸುತ್ತೇನೆ

    | ಬಿ.ಎಸ್. ಪಾಗದ ಸಾಮಾಜಿಕ ವಲಯ ಸಹಾಯಕ ಅರಣ್ಯಾಧಿಕಾರಿ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts