More

    ವಸತಿ ಯೋಜನೆ ಪೂರ್ಣಗೊಳಿಸದಿದ್ರೆ ಅಮಾನತಿಗೆ ಪತ್ರ; ಪಿಡಿಒಗಳಿಗೆ ಶಾಸಕಿ ಕೆ.ಪೂರ್ಣಿಮಾ ಎಚ್ಚರಿಕೆ

    ಹಿರಿಯೂರು: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಒಂದು ವಾರದಲ್ಲಿ ವಸತಿ ಯೋಜನೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಎಲ್ಲ ಪಿಡಿಒಗಳ ಅಮಾನತ್ತಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಶಾಸಕಿ ಕೆ.ಪೂರ್ಣಿಮಾ ಎಚ್ಚರಿಸಿದರು.

    ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಸತಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ವಸತಿ ಯೋಜನೆಗಳಲ್ಲಿ ಪಿಡಿಒಗಳ ಕರ್ತವ್ಯ ನಿರ್ವಹಣೆ ಕುರಿತಂತೆ ವ್ಯಾಪಕ ದೂರುಗಳು ಕೇಳಿ ಬಂದಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ವಸತಿ ಯೋಜನೆ ಫಲಾನುಭವಿಗಳ ಅಗತ್ಯ ದಾಖಲೆ ಸಲ್ಲಿಸುವಲ್ಲಿ ವಿವಿಧ ಗ್ರಾಪಂ ಪಿಡಿಒಗಳು ವಿಳಂಬ ಮಾಡುತ್ತಿರುವುದೇಕೆ? ಎಂದು ತರಾಟೆಗೆ ತೆಗೆದುಕೊಂಡರು. ಮಾನವೀಯತೆ ದೃಷ್ಟಿಯಿಂದ ಇಲ್ಲಿಯವರೆಗೆ ಕ್ರಮ ಕೈಗೊಂಡಿಲ್ಲ. ಇದೇರೀತಿ ವರ್ತಿಸಿದರೆ ಕಠಿಣ ಕ್ರಮ ಖಚಿತ ಎಂದು ಶಾಸಕರು ಸೂಚಿಸಿದರು.

    ಈ ವೇಳೆ ಯರಬಳ್ಳಿ ಗ್ರಾಪಂ ಪಿಡಿಒ ಬಸವರಾಜ್ ಶಾಸಕರ ಜತೆ ವಾಗ್ವಾದ ನಡೆಸಿದರು. ನನ್ನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ವಸತಿ ಯೋಜನೆ ಫಲಾನುಭವಿಗಳು ಸಕಾಲಕ್ಕೆ ದಾಖಲೆ ಕೊಡುತ್ತಿಲ್ಲ ಎಂದು ಸಭೆಯ ಗಮನಕ್ಕೆ ತಂದರು.

    ಜನಸ್ನೇಹಿ ಆಡಳಿತಕ್ಕೆ ತಾಕೀತು:

    ಕೆಲ ಪಿಡಿಒಗಳು ಗ್ರಾಪಂ ಕಚೇರಿಗೆ ಬರುವ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವುದಿಲ್ಲ. ಸೌಜನ್ಯಯುತವಾಗಿ ನಡೆದುಕೊಳ್ಳುವುದಿಲ್ಲ ಎಂಬ ದೂರು ಕೇಳಿ ಬಂದಿದೆ. ಈ ವರ್ತಿಸದೆ ಜನಸ್ನೇಹಿ ಆಡಳಿತ ನೀಡಬೇಕು. ಸರ್ಕಾರದ ಮಟ್ಟದಲ್ಲಿ ಹೋರಾಡಿ ಅಲೆಮಾರಿ ಯೋಜನೆಯಡಿ 4444 ಮನೆಗಳನ್ನು ಮಂಜೂರು ಮಾಡಿಸಲಾಗಿದೆ. ಬಡವರ ಸೂರಿನ ಕನಸನ್ನು ಸಕಾಲಕ್ಕೆ ನನಸಾಗಿಸಲು ಪಿಡಿಒಗಳು ಸಹಕರಿಸಬೇಕು ಎಂದು ಶಾಸಕಿ ಪೂರ್ಣಿಮಾ ತಾಕೀತು ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts