More

    ಹಿಂದು ವಿರೋಧಿ ನೀತಿ ಕೈಬಿಡಿ


    ಯಾದಗಿರಿ: ರಾಜ್ಯ ಸರಕಾರ ಹಿಂದು ಕಾರ್ಯಕರ್ತರ ಮೇಲೆ ನಡೆಸುತ್ತಿರುವ ದೌರ್ಜನ್ಯ ಹಾಗೂ ದಮನಕಾರಿ ನೀತಿಯನ್ನು ತಡೆಯುವಂತೆ ಒತ್ತಾಯಿಸಿ ಶ್ರೀರಾಮ ಸೇನೆ ಸಂಘಟನೆಯಿಂದ ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

    ಕಕ ವಿಭಾಗೀಯ ಅಧ್ಯಕ್ಷ ವಿಜಯ ಪಾಟೀಲ್ ಮಾತನಾಡಿ, ರಾಜ್ಯದಲ್ಲಿ ಖಾನ್ಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ 6 ತಿಂಗಳಿನಿಂದ ಹಿಂದು ಸಂಘಟನೆಗಳು ಹಾಗೂ ಕಾರ್ಯಕರ್ತರ ಮೇಲೆ ಕಿರುಕುಳ, ಸುಳ್ಳು ಮೊಕದ್ದಮೆ, ಜೈಲುವಾಸ ವಿಧಿಸುವ ಮೂಲಕ ದಮನಕಾರಿ ನೀತಿ ಅನುಸರಿಸುತ್ತಿದೆ. ಪೊಲೀಸ್ ಇಲಾಖೆಯನ್ನು ಈ ಸಕರ್ಾರ ದುರ್ಬಳಕೆ ಮಾಡಿಕೊಂಡು ದ್ವೇಷದ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

    ದೊಡ್ಡಬಳ್ಳಾಪುರದಲ್ಲಿ ಅಕ್ರಮವಾಗಿ 35 ಟನ್ ಗೋಮಾಂಸ ವಾಹನ ಹಿಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ರಮೇಶಗೌಡ, ಬೆಂಗಳೂರು ಮಹಾನಗರ ಸೇರಿದಂತೆ 16 ಗೋ ರಕ್ಷಕರಿಗೆ 48 ದಿವಸ ಜೈಲು ಶಿಕ್ಷೆ ವಿಧಿಸಿದೆ. ರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕರಿಗೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾ ಪ್ರವೇಶ ನಿಬರ್ಂಧಿಸಲಾಗಿದೆ. ರಾಮ ಸೇನಾ ಅಧ್ಯಕ್ಷ ಗಂಗಾಧರಗೆ ಚಿಕ್ಕಮಗಳೂರು ಜಿಲ್ಲೆ ಪ್ರವೇಶ ನಿಬರ್ಂಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇನ್ನೂ ಹಲವಾರು ಅಹಿತಕರ, ಹಿಂದು ವಿರೋಧಿ ದುರ್ಘಟನೆಗಳು ನಡೆಯುತ್ತಲೇ ಇದ್ದು, ಇಡೀ ರಾಜ್ಯದಲ್ಲಿ ಹಿಂದು ಇಂಥ ಸ್ಥಿತಿಯಲ್ಲಿ ಬದಕುತ್ತಿದ್ದು ರೊಚ್ಚಿಗೆದ್ದು ರಸ್ತೆಗಿಳಿಯುವ ಮೊದಲು ತಾವು ರಾಜ್ಯ ಸರಕಾರಕ್ಕೆ ಹಿಂದು ವಿರೋಧಿ ನಡೆಯನ್ನು ತಕ್ಷಣವೇ ನಿಲ್ಲಿಸಲು ಆದೇಶಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts