More

    ಹಿಂದು ಧರ್ಮದ ಬಗ್ಗೆ ಅಪಪ್ರಚಾರ ಸಲ್ಲದು

    ಯಾದಗಿರಿ: ಸನಾತನ ಧರ್ಮ ನಮ್ಮ ಪರಂಪರೆಯ ದ್ಯೋತಕವಾಗಿದ್ದು, ಧರ್ಮದ ಬಗ್ಗೆ ಅಪಪ್ರಚಾರ ಮಾಡಿದರೆ ಸಹಿಸಲಾಗುವುದಿಲ್ಲ ಎಂದು ಧರ್ಮ ಜಾಗರಣ ಪ್ರವಕ್ತಾರ ಸ್ವತಂತ್ರ ಸಿಂಧೆ ಎಚ್ಚರಿಕೆ ನೀಡಿದರು.

    ಬುಧವಾರ ಶಹಾಪುರದ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗದಳದಿಂದ ಶೌರ್ಯ ಜಾಗರಣ ಯಾತ್ರೆ ಅಂಗವಾಗಿ ಆಯೋಜಿಸಿದ್ದ ಶೋಭಯಾತ್ರೆಯಲ್ಲಿ ಮಾತನಾಡಿ, ರಾಷ್ಟ್ರ ವಿರೋಧಿ, ಧರ್ಮ ವಿರೋಧಿ ಶಕ್ತಿಗಳು ಒಂದಾಗಿ ದೇಶ ಒಡೆಯುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹೀಗಾಗಿ ನಮ್ಮ ಸಮಾಜ ಎಚ್ಚರಿಕೆಯಿಂದ ಇರಬೇಕಾಗಿದೆ. ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸದಾಕಾಲ ದೇಶ, ಧರ್ಮ ರಕ್ಷಣೆಯ ಬಗ್ಗೆ ಮುಂಚೂಣಿಯಲ್ಲಿದೆ ಎಂದರು.

    ಎಂಥದ್ದೆ ಸಂದರ್ಭ ಬಂದರೂ ನಾವು ಹೆದರುವುದಿಲ್ಲ, ರಾಷ್ಟ್ರದ ಸಾರ್ವಭೌಮತೆ ನಮ್ಮ ಧ್ಯೇಯ, ಶೌರ್ಯ ಜಾಗರಣ ದಿವಸದ ನಿಮಿತ್ತ ಹಿಂದು ಸಮಾಜ ಜಾಗೃತಿ ಕಾರ್ಯ ಯೋಜನೆ ಹಾಕಿಕೊಂಡಿದೆ. ಸಮಾಜದ ಮುಖಂಡರು ಪೂಜ್ಯರು ಸಹಕಾರ ನೀಡುವ ಮೂಲಕ ಉತ್ಸಾಹ ತುಂಬಬೇಕು ಎಂದು ಮನವಿ ಮಾಡಿದರು.

    ಕುಂಬಾರ ಓಣಿ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯರು ಮಾತನಾಡಿ, ಇಡೀ ಜಗತ್ತಿಗೆ ಪ್ರೇರಣೆ ನೀಡಿದ ದೇಶ ಭಾರತ. ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ ಮೌಲ್ಯಗಳನ್ನು ನೀಡಿದ ಕೊಡುಗೆ ನಮ್ಮ ದೇಶಕ್ಕಿದೆ. ಭಾರತ ಮತ್ತು ಸನಾತನ ಧರ್ಮದ ಬೇರುಗಳ ಗಟ್ಟಿಯಾಗಿವೆ ಎಂಬುದು ಅರಿತುಕೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts