More

    ಹಿಂದುಗಳಿಂದ ಕಲ್ಲಿನ ಚೈತನ್ಯಕ್ಕೆ ಪೂಜೆ

    ಎನ್.ಆರ್.ಪುರ: ಹಿಂದುಗಳು ಕಲ್ಲಿನ ವಿಗ್ರಹಕ್ಕೆ ನಮಸ್ಕರಿಸಲ್ಲ, ಪೂಜಿಸಲ್ಲ. ಆ ಕಲ್ಲಿನ ಚೈತನ್ಯಕ್ಕೆ ಪೂಜಿಸುತ್ತಾನೆ ಎಂದು ಗೌರಿಗದ್ದೆಯ ಅವಧೂತ ವಿನಯ ಗುರೂಜಿ ಹೇಳಿದರು.</p><p>ಸುಂಕದಕಟ್ಟೆಯಲ್ಲಿ ಸುಂಕದಕಟ್ಟೆ ಯುವಕ ಸಂಘದ 17ನೇ ವರ್ಷದ ಗಣೇಶೋತ್ಸವ ಅಂಗವಾಗಿ ಬುಧವಾರ ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದು ಧರ್ಮದಲ್ಲಿ ಪ್ರತಿಯೊಂದರಲ್ಲೂ ದೇವರನ್ನು ಕಾಣುತ್ತೇವೆ. ದೇವರು ಬೆಳಕಿನ ಮೂಲಕ ಕತ್ತಲೆಯನ್ನು ದೂರ ಮಾಡುತ್ತ್ತಾನೆ ಎಂದರು.

    ಗ್ರಾಮದಲ್ಲಿ ಧರ್ಮ ಮತ್ತು ರಾಜಕಾರಣ ಒಂದಾದರೆ ಮಾತ್ರ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಹಿಂದುಗಳು ಕಲ್ಲಲ್ಲಿರುವ ಚೇತನಕ್ಕೆ ನಮಸ್ಕಾರ ಮಾಡುತ್ತಾರೆ. ಬೆಳಕು ಕಾಣಲು ಕತ್ತಲನ್ನು ದೂರ ಮಾಡಬೇಕು. ಗಣಪತಿ ಹಬ್ಬ ಜಾರಿಗೆ ತಂದದ ಬಾಲಗಂಗಾಧರ ತಿಲಕ್, ಜಾತಿ, ಮತ ಮರೆತು ಒಂದೇ ವೇದಿಕೆಯಲ್ಲಿ ಜಗತ್ತಿಗೆ ಪಾಠ ಮಾಡಿದ್ದಾರೆ. ಸ್ವತಂತ್ರ ಪೂರ್ವದಿಂದ ಮಠಗಳಿಂದ ಶಾಲೆ, ಅನ್ನದಾನಗಳು ನಡೆಯುತ್ತಿವೆ ಎಂದರು.

    ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಧಾರ್ವಿುಕ ಕ್ಷೇತ್ರಗಳು ಅಭಿವೃದ್ಧಿ ಹೊಂದಿದಾಗ ಆ ಭಾಗದ ಪ್ರದೇಶ ಅಭಿವೃದ್ಧಿಯಾಗುತ್ತದೆ. ಸರ್ಕಾರ ಮಠ, ಮಂದಿರಗಳ ಅಭಿವೃದ್ಧಿಗೆ ಅನುದಾನ ನೀಡಬೇಕು. ಮಠ, ಮಂದಿರಗಳು ಅಭಿವೃದ್ಧಿಯಾದರೆ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

    ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಮಾತನಾಡಿ, ತಾಲೂಕಿನ ಬಸ್ತಿಮಠ ಹಾಗು ಗೌರಿಗದ್ದೆಯ ಮಠಗಳು ಧಾರ್ವಿುಕ ಕೆಲಸಕ್ಕೆ ಸೀಮಿತವಾಗದೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts