More

    ಹಾಲು ಉತ್ಪಾದಕರ ಪ್ರಗತಿಗೆ ಬದ್ಧ

    ಮದ್ದೂರು: ನಮ್ಮ ಸರ್ಕಾರ ಹಾಲು ಉತ್ಪಾದಕ ರೈತರಿಗೆ ಅನುಕೂಲವಾಗವ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಲು ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದರು.

    ತಾಲೂಕಿನ ತರಮನಕಟ್ಟೆ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು. ಆ. 1 ರಿಂದ ಗ್ರಾಹಕರು ಖರೀದಿ ಮಾಡುವ ಹಾಲಿನ ದರವನ್ನು 3 ರೂ. ಹೆಚ್ಚು ಮಾಡಿ ಆ ಹಣವನ್ನು ನೇರವಾಗಿ ರೈತರಿಗೆ ತಲುಪುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಕೆಎಂಎಫ್ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

    ಸಹಕಾರ ಸಂಘಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಮೂಲಕ ರೈತರಿಗೆ ಸರ್ಕಾರ ಹಲವು ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ಅವುಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

    ಎಂಪಿಸಿಎಸ್ ಅಧ್ಯಕ್ಷೆ ಭಾಗ್ಯಮ್ಮ ಮರಿಸ್ವಾಮಿ, ಉಪಾಧ್ಯಕ್ಷೆ ಟಿ.ಸಿ. ಕುಮಾರ, ಮನ್‌ಮುಲ್ ನಿರ್ದೇಶಕ ಕದಲೂರು ರಾಮಕೃಷ್ಣ, ನಿವೃತ ಜಿಲ್ಲಾಧಿಕಾರಿ ಸಿ. ಕೃಷ್ಣೇಗೌಡ, ಕಟ್ಟಡದ ಭೂಮಿ ದಾನಿ ನಿಂಗಮ್ಮ, ಬಿ. ತಿಮ್ಮೇಗೌಡ, ಹಾಲು ಪರೀಕ್ಷಕ ಟಿ. ಶರತ್ ಕುಮಾರ್, ಶಿವರಾಮು, ಪುಟ್ಟಸ್ವಾಮಿ, ಶಂಕರ್, ಸುಂದರ್ ಇತರರಿದ್ದರು.

    ಎಣ್ಣೆ ರೇಟು ಏಕೆ ಜಾಸ್ತಿ ಆಯಿತಣ್ಣಾ : ಕೃಷಿ ಸಚಿವ ಚಲುವರಾಯಸ್ವಾಮಿ ವೇದಿಕೆಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ‘ ಎಲ್ಲಾ ಸರಿ ಅಣ್ಣಾ… ಎಣ್ಣೆ ರೇಟ್ ಯಾಕ್ ಜಾಸ್ತಿ ಮಾಡಿದ್ರೀ… ಎಂದು ಸಭಿಕರೊಬ್ಬರು ಪ್ರಶ್ನಿಸಿದರು. ಇದಕ್ಕೆ ನಗುತ್ತಲೇ ಉತ್ತರಿಸಿದ ಸಚಿವ ಚಲುವರಾಯಸ್ವಾಮಿ, ‘ಹೌದಪ್ಪಾ … ಎಣ್ಣೆ ರೇಟು ಜಾಸ್ತಿ ಮಾಡಿದ್ದರಿಂದಲೇ ಇದೆಲ್ಲ ಭಾಗ್ಯಗಳನ್ನು ಕೊಡ್ತಿರೋದು. ಹೆಂಗಸರು ಎಣ್ಣೆ ರೇಟ್ ಜಾಸ್ತಿ ಮಾಡಿ ನಮಗೆಲ್ಲಾ ಸೌಲಭ್ಯ ಕೊಡಿ ಅಂದಿದ್ರು, ಅದಕ್ಕೆ ಕೊಟ್ಟಿದ್ದೀವಿ ಸುಮ್ಕಿರಪ್ಪಾ … ಎಂದು ಹಾಸ್ಯ ಚಟಾಕಿ ಹಾರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts