More

    ಹಾಲಿನ ದರ ಪ್ರತಿ ಲೀಟರ್​ಗೆ 50 ಪೈಸೆ ಹೆಚ್ಚಳ

    ಬೆಳಗಾವಿ: ಬೆಳಗುಂದಿ ಕ್ರಾಸ್​ನ ಉಚಗಾಂವ ಗಣೇಶ ಹಾಲು ಉತ್ಪಾದಕರ ಕೇಂದ್ರದಿಂದ ಗೌರಿ&ಗಣೇಶ ಹಬ್ಬದ ನಿಮಿತ್ತ ಎಮ್ಮೆ ಹಾಲು, ಆಕಳು ಹಾಲಿನ ದರ ಪ್ರತಿ ಲೀಟರ್​ಗೆ 50 ಪೈಸೆ ಮತ್ತೆ ಹೆಚ್ಚಿಸಲಾಗಿದೆ.

    ಬೆಳಗುಂದಿ ಕ್ರಾಸ್​ ಉಚಗಾಂವ ಗಣೇಶ ಹಾಲು ಉತ್ಪಾದಕರ ಕೇಂದ್ರದಲ್ಲಿ ಭಾನುವಾರ ಹಾಲಿನ ದರ ಹೆಚ್ಚಳ ಬಗ್ಗೆ ಚರ್ಚೆ ಮಾಡಿದ ಬಳಿಕ, ದರ ಹೆಚ್ಚಳದ ಬಗ್ಗೆ ಮಾಲೀಕರಾದ ಪ್ರೊ. ಉಮೇಶ (ಪ್ರವಿಣ) ದೇಸಾಯಿ ಅವರು ಮಾಹಿತಿ ನೀಡಿದರು. ಬಹಳಷ್ಟು ರೈತರು ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉಪಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಹಾಲಿನ ದರ ಹೆಚ್ಚಳ ಮಾಡಿರುವುದರಿಂದ ಹೆಚ್ಚಿನ ರೈತರಿಗೆ ಅನುಕೂಲವಾಗಲಿದೆ.

    ಇದೇ ವರ್ಷ ಯುಗಾದಿಯಲ್ಲಿ ಹಾಲಿನ ದರ ಹೆಚ್ಚಳ ಮಾಡಲಾಗಿತ್ತು. ಈಗ ಮತ್ತೆ ದರ ಹೆಚ್ಚಿದ್ದರಿಂದ ರೈತರು ಸಂತಸವಾಗಿದ್ದಾರೆ ಎಂದರು. ಕೇಂದ್ರದಿಂದ ಪ್ರತಿ ಲೀಟರ್​ ಎಮ್ಮೆ ಹಾಲಿನ ದರ 47ರೂ., ಆಕಳು ಹಾಲಿನ ದರ 31.50 ರೂ. ನೀಡಲಾಗುತ್ತಿದೆ. ಇದರ ಜತೆಗೆ ಎಮ್ಮೆ ಹಾಲಿಗೆ 2 ರೂ., ಆಕಳು ಹಾಲಿಗೆ 1 ರೂ. ಅನ್ನು ಬೋನಸ್​ ಆಗಿ ನೀಡಲಾಗುತ್ತಿದೆ.

    ಪ್ರತಿ ಬುಧವಾರ ವಾರದ ಹಣ ನೀಡಲಾಗುತ್ತಿದೆ ಎಂದು ವ್ಯವಸ್ಥಾಪಕ ಸುಧಾಕರ ಕರಟೆ ತಿಳಿಸಿದ್ದಾರೆ. ಸಂಗ್ರಾಮ ಮೊಹಿತೆ, ಚೇತನ ತರಳೆ, ಸುರೇಖಾ ಕಾಂಬಳೆ, ಭಾಗ್ಯಶ್ರೀ ಜಾಧವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts