More

    ಹಾಲಸಿದ್ಧನಾಥರ ಜಾತ್ರೆಗೆ ಅದ್ದೂರಿ ಚಾಲನೆ, ವಿವಿಧ ಕಾರ್ಯಕ್ರಮ

    ನಿಪ್ಪಾಣಿ, ಬೆಳಗಾವಿ: ಲಕ್ಷಾಂತರ ಜನರ ಶ್ರದ್ಧಾ ಕೇಂದ್ರವಾಗಿರುವ ತಾಲೂಕಿನ ಕುರ್ಲಿ-ಅಪ್ಪಾಚಿವಾಡಿ ಗ್ರಾಮಗಳಲ್ಲಿ ಹಾಲಸಿದ್ಧನಾಥರ ಜಾತ್ರೆ ಮಂಗಳವಾರದಿಂದ ಪ್ರಾರಂಭವಾಯಿತು. ಜಾತ್ರೆ ಅಂಗವಾಗಿ ಎರಡು ಗ್ರಾಮಗಳಲ್ಲಿ ಬೆಳಗ್ಗೆ ಅಭಿಷೇಕ, ಮಹಾಮಂಗಳಾರತಿ ಜರುಗಿದವು. ನಂತರ ಕುರ್ಲಿ ಗ್ರಾಮದ ಹಾಲಸಿದ್ಧನಾಥರ ಮಂದಿರದಿಂದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಸಿದ್ಧನಾಥರ ಪಲ್ಲಕ್ಕಿ ಉತ್ಸವ ನಂತರ ಕುರ್ಲಿಯ ಮಂದಿರಕ್ಕೆ ಬಂದು ಮುಕ್ತಾಯವಾಯಿತು.

    ನಂತರ ಡೊಳ್ಳುವಾದನದೊಂದಿಗೆ ಮಂದಿರದ ಪ್ರದಕ್ಷಿಣೆ ಜರುಗಿತು. ಪ್ರದಕ್ಷಿಣೆಗೆ ಭಕ್ತರು ಉತ್ತತ್ತಿ, ಕೊಬ್ಬರಿ, ಭಂಡಾರ ಸಮರ್ಪಿಸಿದರು. ಹಾಲಸಿದ್ಧನಾಥ ಮಹಾರಾಜ್ ಕೀ ಜೈ ಘೋಷಣೆಗಳು ಮೊಳಗಿದವು. ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಹಾಲಸಿದ್ಧನಾಥ ಸಹಕಾರಿ ಕಾರ್ಖಾನೆ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಸಂಚಾಲಕ ರಾಜಾರಾಮ ಖೋತ, ಬೆಲ್ಲದ ಬಾಗೇವಾಡಿ ಅರ್ಬನ್ ಅಧ್ಯಕ್ಷ ಪವನ ಕತ್ತಿ, ಅರಿಹಂತ ಸಮೂಹದ ನಿರ್ದೇಶಕ ಅಭಿನಂದನ ಪಾಟೀಲ, ಬಾಬುರಾವ ಖೋತ, ಬಾಪು ಪೂಜಾರಿ, ಸಂಜಯ ಶಿಂಥ್ರೆ, ವಿಜಯ ಶಿಂಥ್ರೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts