More

    ಹಾನಿಗೊಳಗಾದ ಮನೆಗಳನ್ನು ಸಮೀಕ್ಷೆ ನಡೆಸಿ


    ಯಾದಗಿರಿ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳನ್ನು ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸಂಬಂಸಿದ ಇಲಾಖೆ ಅಕಾರಿಗಳಿಗೆ ಜಿಲ್ಲಾಕಾರಿ ಡಾ.ಸುಶೀಲಾ ಬಿ., ನಿದರ್ೇಶನ ನೀಡಿದ್ದಾರೆ.
    ಸೋಮವಾರ ಶಹಾಪುರ ತಾಲೂಕಿನ ಮದ್ದರಕಿ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದ ಹಾನಿಗೊಳಗಾದ ಮನೆಗಳ ಪರಿಶೀಲನೆ ಮಾಡಿ ಮಾತನಾಡಿ, ಗ್ರಾಪಂ ಅಭಿವೃದ್ಧಿ ಅಕಾರಿಗಳು, ಗ್ರಾಮ ಲೆಕ್ಕಿಗರು ಮನೆಗಳ ಜಂಟಿ ಸಮೀಕ್ಷೆ ಮಾಡಬೇಕು. ಶಹಾಪುರ ತಾಲೂಕಿನಲ್ಲಿ ಒಟ್ಟು 27 ಮನೆಗಳು ಮಳೆಯಿಂದ ಹಾನಿಯಾಗಿವೆ. ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ನಗರ ಮತ್ತು ಗ್ರಾಮೀಣ ಭಾಗದ ಹಳ್ಳ, ಕೆರೆ, ನದಿಯ ನೀರಿನ ಒಳ ಹರಿವು ಹೆಚ್ಚಾಗುವ ಸಾಧ್ಯತೆಗಳಿರುತ್ತದೆ. ಕಾರಣ ಜನರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.
    ನಂತರ ಗ್ರಾಮದ ಬಾಪೂಜಿ ಕೇಂದ್ರಕ್ಕೆ ಭೇಟಿ ನೀಡಿ ಗೃಹಲಕ್ಷ್ಮೀ ಯೋಜನೆಯಡಿ ಅಜರ್ಿ ಸಲ್ಲಿಸುತ್ತಿರುವ ಅರ್ಹ ಫಲಾನುಭವಿಗಳ ಕುರಿತು ಮಾಹಿತಿ ಪಡೆದರು. ಫಲಾನುಭವಿಗಳಿಗೆ ಸಕರ್ಾರವೇ ಸಂದೇಶ ಕಳುಹಿಸಲಿದ್ದು, ಅಂಥವರು ಮಾತ್ರ ನಿಗದಿತ ಕೇಂದ್ರಕ್ಕೆ, ಸರಿಯಾದ ಸಮಯಕ್ಕೆ ತೆರಳಿ ಅಜರ್ಿ ಸಲ್ಲಿಸಬೇಕು ಎಂದರು.

    ಈ ಯೋಜನೆಯಡಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ನೋಂದಾಯಿಸುವ ಫಲಾನುಭವಿಯು ಯಾವುದೇ ಶುಲ್ಕ ಪಾವತಿಸುವಂತಿಲ್ಲ ಎಂಬುದು ತಿಳಿಸಬೇಕೆಂದು ಕೇಂದ್ರದ ಸಿಬ್ಬಂದಿಗೆ ತಿಳಿಸಿದರು. ತಹಸಿಲ್ದಾರ ಉಮಾಕಾಂತ ಹಳ್ಳಿ ಸೇರಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts