More

    ಹಾನಿಗೆ ಅಧಿಕಾರಿಗಳೇ ಹೊಣೆ

    ಚಿಂಚೋಳಿ: ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ ನಾಗರಾಳ ಜಲಾಶಯದ ನೀರನ್ನು ನದಿಗೆ ಬೀಡಲಾಗಿದೆ. ಆದ್ದರಿಂದ ಇದೀಗ ಆಗಿರುವ ಹಾನಿಗೆ ಜಲಾಶಯದ ಅಧಿಕಾರಿಗಳೆ ಹೊಣೆಯಾಗಿದ್ದಾರೆ. ಸರ್ಕಾರ ಸೂಕ್ತ ಕ್ರಮ ಕೈಗೊಂಡು, ಜನತೆಗೆ ಪರಿಹಾರ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸಂಜೀವನ ಯಾಕಾಪುರ ಒತ್ತಾಯಿಸಿದ್ದಾರೆ.
    ನಾಗರಾಳ ಜಲಾಶಯದ ನೀರು ಬಿಟ್ಟಿರುವುದರಿಂದ ಹಾನಿಗೊಳಗಾದ ಚಿಮ್ಮನಚೋಡ, ತಾಜಲಾಪುರ, ಗಾರಂಪಳ್ಳಿ ಸೇರಿ ವಿವಿಧ ಗ್ರಾಮಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ನೀರು ನುಗ್ಗಿದ ಮನೆಗಳ ಜನರಿಗೆ ಹಾಗೂ ಬೆಳೆ ಹಾನಿ ಸಂಭವಿಸಿದ ರೈತರಿಗೆ ಸಾಂತ್ವನ ಹೇಳಿದರು. ಅಲ್ಲದೆ ಸೂಕ್ತ ಪರಿಹಾರ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದರು. ಪ್ರಮುಖರಾದ ಬಂಡಾರೆಡ್ಡಿ, ಸಂಗಾರೆಡ್ಡಿ, ರಾಮರೆಡ್ಡಿ, ಗೌರಿಶಂಕರ ಉಪ್ಪಿನ್ ಇತರರಿದ್ದರು.

    ಈಗಾಗಲೇ ಕರೊನಾ ವೈರಸ್ನಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಜನತೆಗೆ ಪ್ರವಾಹ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ. ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಲಿದೆ. ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಸಕರು, ಸಂಸದರೊಂದಿಗೆ ಮುಖ್ಯಮಂತ್ರಿ ಬಳಿ ನಿಯೋಗ ತೆರಳಿ ಈ ಭಾಗದ ರೈತರು, ಜನ ಸಾಮಾನ್ಯರಿಗೆ ಸೂಕ್ತ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು.
    | ಸಂಜೀವನ ಯಾಕಾಪುರ, ಜಿಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts