More

    ಹಾನಗಲ್ಲನಲ್ಲಿ ಹೋಳಿಹಬ್ಬ 15ರಂದು

    ಹಾನಗಲ್ಲ: ಹಾನಗಲ್ಲಿನಲ್ಲಿ ಮಾ. 15ರಂದು ಭಾನುವಾರ ಹೋಳಿಹಬ್ಬ ಆಚರಣೆ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಕದಂಬ ಯುವಶಕ್ತಿ ಸಂಘಟನೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

    ಮಾ. 13ರಂದು ರಾತ್ರಿ 8ಕ್ಕೆ ಹಲಿಗೆ ಬಾರಿಸುವ ಸ್ಪರ್ಧೆ ಏರ್ಪಡಿಸಲಾಗಿದ್ದು, ವಿಜೇತರಿಗೆ ಮೂರು ಬಹುಮಾನಗಳನ್ನು ನೀಡಲಾಗುತ್ತಿದೆ. ರಾತ್ರಿ 9ಕ್ಕೆ ಸ್ಥಳೀಯ ಉದಯ ಕಲಾ ಬಳಗದಿಂದ ಹಾಸ್ಯಸಂಜೆ ಕಾರ್ಯಕ್ರಮ. 14 ರಂದು ಬೆಳಗ್ಗೆ 11ಕ್ಕೆ ಪಟ್ಟಣದ ಪ್ರಸನ್ನ ಮಾರುತಿ ದೇವಸ್ಥಾನದ ಸಮೀಪ ಮಹಿಳೆಯರಿಗಾಗಿ ಮಡಿಕೆ ಒಡೆಯುವ ಸ್ಪರ್ಧೆ ಮತ್ತು ಮ್ಯೂಸಿಕಲ್ ಚೇರ್ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ 6ಕ್ಕೆ ತಾರಕೇಶ್ವರ ದೇವಸ್ಥಾನದ ಎದುರು ವೈಯಕ್ತಿಕ ಹಾಗೂ ಗುಂಪು ವೇಷ- ಭೂಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

    ಜೀವಂತ ರತಿ-ಮನ್ಮಥ
    ಮಾ. 13ರಂದು ಸಂಜೆ 7ಕ್ಕೆ ಪಟ್ಟಣದ ತಾರಕೇಶ್ವರ ದೇವಸ್ಥಾನದ ಎದುರು ಜೀವಂತ ರತಿ- ಮನ್ಮಥರನ್ನು ನಗಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಕಲಾವಿದ ಮಹೇಶ ಎಸ್. ಕೊಲ್ಲಾಪುರ ಹಾಗೂ ಮಾಲತೇಶ ತುಮರಿಕೊಪ್ಪ ಜೀವಂತ ರತಿ- ಮನ್ಮಥರಾಗಿ ಪಾಲ್ಗೊಳ್ಳಲಿದ್ದಾರೆ. ಇವರನ್ನು ನಗಿಸುವವರಿಗೆ 25 ಸಾವಿರ ನಗದು ಹಾಗೂ 15 ತೊಲ ಬೆಳ್ಳಿ ಆಭರಣ ಮತ್ತು ಗೃಹೋಪಯೋಗಿ ವಸ್ತುಗಳ ಬಹುಮಾನ ಘೊಷಿಸಲಾಗಿದೆ. 15 ವರ್ಷಗಳಿಂದ ಪಾಲ್ಗೊಳ್ಳುತ್ತಿರುವ ಈ ಜೋಡಿಯನ್ನು ನಗಿಸಲು ಈವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ ಎಂಬುದು ಇಲ್ಲಿನ ವಿಶೇಷ.

    ಮೆರವಣಿಗೆ
    ಸಂಜೆ 7ಕ್ಕೆ ಪಟ್ಟಣದ ಹೊಸ ಬಸ್ ನಿಲ್ದಾಣ ಸಮೀಪದ ಗಣಪತಿ ದೇವಸ್ಥಾನದಿಂದ ಬೇಡರ ವೇಷ, ಸ್ಥಬ್ಧ ಚಿತ್ರಗಳು, ಕಲಾತ್ಮಕ ವೇಷ- ಭೂಷಣಗಳನ್ನೊಳಗೊಂಡ ಕಲಾವಿದರಿಂದ ತಾರಕೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಯಲಿದೆ. ರಾತ್ರಿ 9ಕ್ಕೆ ರಂಗಿನರಾತ್ರಿ ಅಂಗವಾಗಿ ಕಲಾವಿದ ದೀಪಕ ಕಲಾಲ ತಂಡದಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ. ಪಿ.ಎನ್. ಡಾನ್ಸ್ ಕಲಾ ತಂಡದಿಂದ ಡಾನ್ಸ್​ಗಳು ಪ್ರದರ್ಶನಗೊಳ್ಳಲಿವೆ ಎಂದು ಸಂಘಟಕ ಕದಂಬ ಯುವಶಕ್ತಿಯ ಅಧ್ಯಕ್ಷ ಗುರುರಾಜ ನಿಂಗೋಜಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts