More

    ಹಾದಿಯ ಅಕ್ಕಪಕ್ಕ ಗಿಡಗಂಟಿ ಹಿಂಡು

    ಕುಮಟಾ: ತಾಲೂಕಿನ ಮಿರ್ಜಾನ ಪಂಚಾಯಿತಿ ವ್ಯಾಪ್ತಿಯಲ್ಲಿ ಬ್ರಹ್ಮೂರು ರಸ್ತೆಯನ್ನು ವರ್ಷಕ್ಕೊಮ್ಮೆಯಾದರೂ ನಿರ್ವಹಣೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಹಾಗೂ ಕಡಕೋಡ್ ಬಳಿಯ ಅಪಾಯಕಾರಿ ತಿರುವನ್ನು ಸರಿಪಡಿಸಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ.

    ಬ್ರಹ್ಮೂರಿಗೆ ಸಂರ್ಪಸುವ ಮುಖ್ಯ ರಸ್ತೆ ಇದಾಗಿದ್ದು ಎಲ್ಲಿಯೂ ರಸ್ತೆ ಬದಿ ಗಟಾರ ಹಾಗೂ ಪೊದೆಪೊದೆಯಾಗಿ ಬೆಳೆದ ಗಿಡಗಂಟಿ ಸ್ವಚ್ಛಗೊಳಿಸುವ ಕೆಲಸ ಮಾಡುವುದೇ ಇಲ್ಲ. ಸಾಕಷ್ಟು ತಿರುವು ಮರುವುಗಳಿಂದ ಕೂಡದ ದಟ್ಟ ಅರಣ್ಯದ ನಡುವಿನ ಈ ರಸ್ತೆ ನಿರ್ವಹಣೆಯ ಕೊರತೆಯಿಂದ ಅಪಾಯಕಾರಿಯಾಗಿ ಪರಿಣಮಿಸಿದೆ.

    ಅಪಾಯಕಾರಿ ತಿರುವು: ಕಡಕೋಡ್ ಬಳಿ ಅತ್ತಿಮರದ ಘಟ್ಟದಲ್ಲಿ ಸಿಗುವ ಕಡಿದಾದ ತಿರುವಿನಲ್ಲಿ ರಸ್ತೆಯೂ ಕಿರಿದಾಗಿದೆ. ಸಾಮಾನ್ಯವಾಗಿ ಎದುರಿನಿಂದ ನಾಲ್ಕು ಚಕ್ರದ ವಾಹನ ಬಂದರೂ ದ್ವಿಚಕ್ರ ವಾಹನಿಗರು ರಸ್ತೆ ಬಿಟ್ಟು ಬದಿಗೆ ಸರಿಯಬೇಕಾದ ಅನಿವಾರ್ಯತೆ ಇದೆ. ಡಾಂಬರು ರಸ್ತೆಯು ಅಂಚಿನಲ್ಲಿ ಒಂದಡಿ ಅಳವಿದೆ. ಗಿಡಗಂಟಿಗಳೂ ಬೆಳೆದಿವೆ ಹೀಗಾಗಿ ಇಲ್ಲಿ ಹಲವು ಬಾರಿ ದ್ವಿಚಕ್ರ ವಾಹನಿಗರು ಅಪಘಾತಕ್ಕೊಳಗಾಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.

    ಸಮಸ್ಯೆಯ ಗಂಭೀರತೆ ಅರಿತು ಕೂಡಲೇ ಅತ್ತಿಮರದ ಘಟ್ಟದ ತಿರುವನ್ನು ಸರಿಪಡಿಸಬೇಕು. ಉಳಿದಂತೆ ಸಂಪೂರ್ಣ ಬ್ರಹ್ಮೂರು ರಸ್ತೆಯ ನಿರ್ವಹಣೆ ಮಾಡಬೇಕು ಎಂದು ಬ್ರಹ್ಮೂರು, ನಾಗೂರು ಭಾಗದ ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಅತ್ತಿಮರದ ಘಟ್ಟದ ಬಳಿ ಅಪಘಾತಗಳಾಗುತ್ತಿವೆ. ಇತ್ತೀಚೆಗೆ ಒಬ್ಬರು ತೀರಾ ಗಂಭೀರವಾಗಿ ಗಾಯಗೊಂಡಿದ್ದರು. ಇಲ್ಲಿನ ಕಡಿದಾದ ತಿರುವನ್ನು ನೇರಗೊಳಿಸುವ ಜೊತೆಗೆ ರಸ್ತೆ ಅಂಚನ್ನು ಸಮತಟ್ಟು ಮಾಡಬೇಕು.

    | ಯೋಗೀಶ ನಾಯ್ಕ, ಕಡಕೋಡ್

    ಚುನಾವಣೆ ನೀತಿಸಂಹಿತೆ ಜಾರಿ ಇರುವುದರಿಂದ ಗಿಡಗಂಟಿ ಸ್ವಚ್ಛತೆ ಕಾಮಗಾರಿಗೆ ಕಾರ್ಯಾದೇಶ ನೀಡಲು ಸಾಧ್ಯವಾಗಿಲ್ಲ. ಸದ್ಯವೇ ಬ್ರಹ್ಮೂರು ರಸ್ತೆ ನಿರ್ವಹಣೆ ಕಾಮಗಾರಿ ಕೈಗೊಳ್ಳಲಾಗುವುದು.

    | ಶಶಿಕಾಂತ್ ಕೊಳೆಕರ್, ಎಇಇ, ಪಿಡಬ್ಲು್ಯಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts