More

    ಹಸು,ಕುರಿ ಸಾಕಲು ರಿಯಾಯಿತಿ ಬಡ್ಡಿ ದರದಲ್ಲಿ ಆರ್ಥಿಕ ನೆರವು

    ಚಿತ್ರದುರ್ಗ: ಸರ್ಕಾರದ ವಿವಿಧ ಯೋಜನೆಗಳಡಿ ಸಾಲ ಮಂಜೂರು ಮಾಡಲು ಬ್ಯಾಂಕ್‌ಗಳು ಸಿಬಿಲ್‌ಸ್ಕೋರ್ ಪರಿಗಣಿಸಬಾರದೆಂದು ಕೇಂದ್ರದ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆ ರಾಜ್ಯಸಚಿವ ಎ.ನಾರಾಯಣ ಸ್ವಾಮಿ ಹೇಳಿದರು.
    ಜಿಪಂದಲ್ಲಿ ಸೋಮವಾರ ಏರ್ಪಡಿಸಿದ್ದ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ವ್ಯಾಪ್ತಿ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ,ಹಿಂದುಳಿದ ವರ್ಗ,ಸಫಾಯಿ ಕರ್ಮಚಾರಿ ಹಾಗೂ ಅಂಗವಿಕಲರ ರಾಷ್ಟ್ರೀಯ ಹಣಕಾಸು ಹಾಗೂ ಅಭಿವೃದ್ಧಿ ನಿಗಮಗಳ ಅನು ದಾನದಡಿ ನೀಡುವ ಸಾಲ ಸೌಲಭ್ಯ ಅನುಷ್ಠಾನ ಕುರಿತಂತೆ ಚಿತ್ರದುರ್ಗ,ತುಮಕೂರು,ದಾವಣಗೆರೆ ಜಿಲ್ಲೆಗಳ ಜಿಲ್ಲಾಮಟ್ಟದ ರಾಜ್ಯಸರ್ಕಾ ರದ ಅಧಿಕಾರಿಗಳು,ಬ್ಯಾಂಕ್‌ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು,ವಿವಿಧ ಯೋಜನೆಗಳಡಿ ಸಾಲ ವಿತರಿ ಸಲು ಫಲಾನುಭವಿಗಳ ಸಿಬಿಲ್‌ಸ್ಕೋರ್ ಪರಿಗಣಿಸಬಾರದು ಹಾಗೂ ಹಾಲು ಉತ್ಪಾದಕ ಸಂಘಗಳ ಸಹಯೋಗದಲ್ಲಿ ಹಸು,ಕುರಿ ಸಾಕಲು ವಿವಿಧ ಸಮುದಾಯಗಳಿಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಒದಗಿಸ ಬೇಕೆಂದರು.
    ಸ್ವಾತಂತ್ರೃಬಂದು ಇಷ್ಟು ವರ್ಷಗಳಾಗಿದ್ದರೂ ದಲಿತರು,ಹಿಂದುಳಿದ ವರ್ಗಗಳ ಆರ್ಥಿಕ ಸ್ವಾವಲಂಬನೆಗೆ ನೆರವಾಗದ ನಿಗಮಗಳು, ಬ್ಯಾಂಕ್‌ಗಳ ಬಗ್ಗೆ ತಮಗೆ ಅಸಮಾಧಾನವಿದೆ. ನಾನಿಲ್ಲಿ ಭಾಷಣ ಮಾಡಲು ಬಂದಿಲ್ಲ. ಕೇಂದ್ರದ ಈ ಯೋಜನೆಗಳ ಬಗ್ಗೆ ಬ್ಯಾಂಕ್‌ಗಳು ಈ ಕುರಿತು ಸಾರ್ವಜನಿಕರಿಗೆ ಸಮರ್ಪಕವಾಗಿ ಮಾಹಿತಿ ನೀಡುತ್ತಿಲ್ಲ.
    ನಿಗಮಗಳು ಬ್ಯಾಂಕ್‌ಗಳಲ್ಲಿಟ್ಟಿರುವ ಹಣದ ಬಳಕೆ ಆಗಿಲ್ಲ. ಸಿಬಿಲ್‌ಸ್ಕೋರ್,ಸಾಲ ಮರುಪಾವತಿ ಅರ್ಹತೆ ಮತ್ತಿತರ ನೆಪಗಳಲ್ಲಿ ಸಾ ಲ ದ ಅರ್ಜಿಗಳನ್ನು ಬ್ಯಾಂಕುಗಳು ತಿರಸ್ಕರಿಸುತ್ತಿವೆ ಎಂಬ ದೂರುಗಳಿವೆ. ಸಿಬಿಲ್‌ಸ್ಕೋರ್,ಆಸ್ತಿ ಭದ್ರತೆ ಬಯಸುವುದು,ಯೋಜನೆಗಳ ಆಶ ಯಕ್ಕೆ ವಿರುದ್ಧವಾಗಿದೆ.
    ಕೇಂದ್ರ ಸರ್ಕಾರ ಪ್ರತಿ ವರ್ಷ ಸಾಲಸೌಲಭ್ಯ ಯೋಜನೆಗೆ ಅನುದಾನ ಮೀಸಲಿಡುತ್ತದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲು ಪಿಸದಿದ್ದರೆ ನಿಗಮಗಳಲ್ಲಿರುವ ಠೇವಣಿ ಹಿಂಪಡೆದು ಜನರಿಗೆ ಜನರಿಗೆ ತಲುಪಿಲು ಪರ್ಯಾಯ ಬೇರೆ ಮಾರ್ಗ ಹುಡುಕ ಬೇಕಾಗುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳನ್ನು ಎಚ್ಚರಿಸಿದರು.
    ಹಾಲುಉತ್ಪಾದಕ ಸಂಘಗಳ ಸಹಯೋಗದಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಹಸು ಸಾಕಾಣಿಕೆಗೆ ರಿಯಾಯಿತಿ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡಬೇಕು. ಹೊಸದಾಗಿ ಕುರಿ,ಮೇಕೆ ಸಾಕಲು ಬಯಸುವಂಥವರಿಗೂ 25,50 ಕುರಿಗಳನ್ನು ಸಾಕಲು ಸಾಲ ಕೊಡ ಬೇಕು. ಅನಗತ್ಯ ದಾಖಲೆಗಳನ್ನು ಕೇಳಬಾರದು. ಪ್ರತಿ ಬ್ಯಾಂಕ್‌ಶಾಖೆಗೂ ಗುರಿ ನಿಗದಿಪಡಿಸ ಬೇಕೆಂದರು.
    ಪಿಎಂ ಸ್ವನಿಧಿಯ 2ನೇ ಹಾಗೂ 3ನೇ ಹಂತದ ಸಾಲಸೌಲಭ್ಯ ಮಂಜೂರಿಗೂ ತೊಡಕು ಉಂಟಾಗುತ್ತಿದೆ. ಸಾಲ ಹಿಂದಿರುಗಿಸಿದರೂ ಬ್ಯಾಂಕ್ ಸಲ್ಲದ ನೆಪದಲ್ಲಿ ಸಾಲ ಮಂಜೂರು ಮಾಡುತ್ತಿಲ್ಲ. ಈ ಕುರಿತು ಬ್ಯಾಂಕುಗಳು ಗಮನ ಹರಿಸಬೇಕು. ಕೇಂದ್ರದ ಪಿಎಂ ವಿಶ್ವಕರ್ಮ ಯೋಜನೆಯಡಿ ಹೆಚ್ಚು ಜನರನ್ನು ನೋಂದಾಯಿಸಿ,ಕುಶಲಕರ್ಮಿಗಳಿಗೆ ತರಬೇತಿಯೊಂದಿಗೆ ಸಾಲ ಸೌಲಭ್ಯ ನೀಡಬೇಕು. ಇದಕ್ಕಾಗಿ ಕಾ ಲಮಿತಿ ಹಾಕಿಕೊಳ್ಳ ಬೇಕು. ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗೆ ಹಾಗೂ ಅವರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
    ಪಿಎಂ ವಿಶ್ವಕರ್ಮ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಲ್ಲಿ 2543,ತುಮಕೂರು ಜಿಲ್ಲೆಯಲ್ಲಿ 4500ಕ್ಕೂ ಹೆಚ್ಚು ನೋಂದಣಿಯಾಗಿ ದ್ದು,ಇದಕ್ಕಾಗಿ ಗ್ರಾಪಂಮಟ್ಟದಲ್ಲಿ ಆಂದೋಲನ ನಡೆಸಲಾಗುತ್ತಿದೆ ಅಧಿಕಾರಿಗಳು ಮಾಹಿತಿ ನೀಡಿದರು. ಯೋಜನೆಗಳ ಅನುಷ್ಠಾನಕ್ಕೆ ನೋ ಡಲ್ ಬ್ಯಾಂಕ್‌ಗಳನ್ನು ಗುರುತಿಸಲಾಯಿತು.
    ಚಿತ್ರದುರ್ಗ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು,ತುಮಕೂರು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ,ತುಮಕೂರು ಜಿಪಂ ಸಿಇಒ ಜಿ.ಪ್ರಭು,ದಾವಣಗೆರೆ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್,ಪರಿಶಿಷ್ಟ ಜಾತಿ ರಾಷ್ಟ್ರೀಯ ಹಣಕಾಸು ಹಾಗೂ ಅಭಿವೃದ್ಧಿ ನಿಗಮದ ರಂಜನೀಶ್ ಕುಮಾರ್‌ಜೆನ್ವಾ,ರಾಜ್ಯಮಟ್ಟದ ಬ್ಯಾಂಕರ್ ಸಮಿತಿ ಪ್ರಧಾನ ವ್ಯವಸ್ಥಾಪಕ ಪ್ರವೀಣ್‌ಕುಮಾರ್,ಕರ್ನಾಟಕ ಗ್ರಾಮೀಣ ಬ್ಯಾಂಕ್‌ಪ್ರಧಾನ ವ್ಯವಸ್ಥಾಪಕ ಜಿ.ಆರ್.ದಿಲ್‌ಬಾಬು,ಚಿತ್ರದುರ್ಗ ಲೀಡ್‌ಬ್ಯಾಂಕ್ ಮ್ಯಾನೇಜರ್ ಎಸ್.ತಿಪ್ಪೇಶ್ ಮತ್ತಿತರರು ಇದ್ದರು.
    (ಸಿಟಿಡಿ 16 ಸೆಂಟ್ರಲ್ ಮಿನಿಸ್ಟರ್)
    ಚಿತ್ರದುರ್ಗದಲ್ಲಿ ಸೋಮವಾರ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹಣಕಾಸು ಹಾಗೂ ಅಭಿ ವೃದ್ಧಿ ನಿಗಮಗಳ ಅನುದಾನದಡಿ ನೀಡುವ ಸಾಲಸೌಲಭ್ಯ ಅನುಷ್ಠಾನ ಕುರಿತಂತೆ ಪ್ರಗತಿ ಪರಿಶೀಲನಾ ಸಭೆ ಜರುಗಿತು. ಜಿಆರ್‌ಜೆ ದಿವ್ಯಾ ಪ್ರಭು,ಕೆ.ಶ್ರೀನಿವಾಸ,ಜಿ.ಪ್ರಭು,ಪಿ.ಎನ್.ಲೋಕೇಶ್,ರಂಜನೀಶ್‌ಕುಮಾರ್‌ಜೆನ್ವಾ,ಪ್ರವೀಣ್‌ಕುಮಾರ್,ಕರ್ನಾಟಕ ಗ್ರಾಮೀಣ ಬ್ಯಾಂಕ್‌ಪ್ರಧಾನ ವ್ಯವಸ್ಥಾಪಕ ಜಿ.ಆರ್.ದಿಲ್‌ಬಾಬು ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts