More

    ಒಕ್ಕೆಲೆಬ್ಬಿಸಿರುವುದನ್ನು ಖಂಡಿಸಿ ರೈತರ ಪ್ರತಿಭಟನೆ

    ಚಿತ್ರದುರ್ಗ:ವಿವಿ ಸಾಗರ ಹಿನ್ನೀರಿನಿಂದಾಗಿ ಭೂಮಿ ಕಳೆದುಕೊಂಡಿರುವ ರೈತರ ಸಾಮೂಹಿಕ ಕೃಷಿಗೆ ತೊಡಗಿ ಗುಡಿಸಲು ನಿರ್ಮಿಸಿದ್ದ ಹೊಸದುರ್ಗ ತಾಲೂಕು ರೈತರ ಒಕ್ಕೆಲೆಬ್ಬಿಸಿರುವ ಕ್ರಮ ಖಂಡಿಸಿ ರಾಜ್ಯರೈತ ಸಂಘದ ಕಾರ‌್ಯಕರ್ತರು ಸೋಮವಾರ ಡಿಸಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
    ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅವರ ಕುಮ್ಮಕ್ಕಿನಿಂದ ರೈತರನ್ನು ಒಕ್ಕೆಲೆಬ್ಬಿಸಿರುವ ಹಾಗೂ ಸ್ಥಳದಲ್ಲಿದ್ದ ರೈತ ಸಂಘದ ಫೆಕ್ಸ್‌ನ್ನು ಕಿತ್ತು ಹಾಕಿರುವ ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಹಿನ್ನೀರು ಸಂತ್ರಸ್ಥರಿಗೆ ಜಮೀನು ಹಾಗೂ ವಸತಿ ಸೌಲಭ್ಯ ಕಲ್ಪಿಸಬೇಕು.
    ಬರಗಾಲ ಹಿನ್ನೆಲೆ,ಮಧ್ಯಂತರ ಬೆಳೆವಿಮೆ ಪರಿಹಾರದಲ್ಲಿ ಸರ್ಕಾರ ನಿಯಮ ಉಲ್ಲಂಘಿಸಿದ್ದು, ಪ್ರತಿ ಎಕರೆಗೆ 20 ಸಾವಿರ ರೂ.ಬರ ಪ ರಿಹಾರ ಮತ್ತು ಬೆಳೆ ವಿಮೆ ಮೊತ್ತ ಬಿಡುಗ ಡೆ ಮಾಡಬೇಕು. ಅಕ್ರಮ-ಸಕ್ರಮ ಪಂಪ್‌ಸೆಟ್‌ಗೆ ಹಣಕಟ್ಟಿರುವ ರೈತರಿಗೆ ಮೂಲ ಸೌಕರ್ಯ ಒದಗಿಸಬೇಕು ಹಾಗೂ 2023 ಸೆಪ್ಟೆಂಬರ್ 22ರಿಂದ ನೋಂದಾಯಿಸದೇ ಇರುವ ರೈತರಿಗೆ, ಅವರೇ ವಿದ್ಯುತ್ ಸರಬರಾಜು ವೆಚ್ಚ ಭರಿ ಸಬೇಕೆಂಬ ನೀತಿ ಕೈ ಬಿಡ ಬೇಕು, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಚುರುಕಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿಸಿಗೆ ಮನವಿ ಸಲ್ಲಿಸಿದರು.
    ಸಚಿವರಿಗೆ ಮನವಿ
    ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಘೋಷಿಸಿರುವ 5300 ಕೋಟಿ ರೂ.ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಯೋಜನೆ ಕಾಮಗಾರಿ ಚುರುಕಾಗಬೇಕು ಹಾಗೂ ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಸಂಸದರ ಕಚೇರಿ ಎದುರು ಜೂ.16ರಿಂದ ನಿರಂತರ ಧರಣಿ ನಡೆಸುವುದಾಗಿ ತಿಳಿಸಿದರು. ರೈತರ ಮನವಿ ಆಲಿಸಿದ ಸಚಿವರು ಅಬ್ಬಿನಹೊಳೆ ಬಳಿಯ ಭೂ ಸ್ವಾಧೀನ ಸಮಸ್ಯೆಯನ್ನು ಶೀಘ್ರ ಇತ್ಯರ್ಥ ಪಡಿಸಲು ಫೆಬ್ರವರಿ ಅಂತ್ಯದೊಳಗೆ ಅನುದಾನ ಬಿಡುಗಡೆ ಮಾಡಿಸುವ ಭರವಸೆ ನೀಡಿದರು.
    ರಾಜ್ಯರೈತ ಸಂಘದ ಕಾರ‌್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ,ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts