More

    ಹವಾಮಾನ ಮುನ್ಸೂಚನೆ ಕೇಂದ್ರ ಆರಂಭ

    ಹಳಿಯಾಳ: ಭವಿಷ್ಯದಲ್ಲಿ ಪ್ರಬಲ ಇಂಧನ, ವಿಪುಲ ಉದ್ಯೋಗಾವಕಾಶ ಸೃಷ್ಟಿಸುವ ಸೋಲಾರ್ ಶಕ್ತಿ ಪರಿಣಾಮಕಾರಿ ಬಳಕೆಗಾಗಿ ಶಾಸಕ ಆರ್.ವಿ. ದೇಶಪಾಂಡೆ ಅವರು ಮುಂದಾಗಿದ್ದಾರೆ.

    ಮೊದಲ ಹಂತದಲ್ಲಿ ರೈತರಿಗಾಗಿ ದೇಶಪಾಂಡೆ ಖಾಸಗಿ ಕೈಗಾರಿಕೆ ತರಬೇತಿ ಕೇಂದ್ರದ ಆವರಣದಲ್ಲಿ ಸೋಲಾರ್ ಹವಾಮಾನ ಮುನ್ಸೂಚನೆ ಘಟಕ ಆರಂಭಿಸಿದ್ದಾರೆ. ಎರಡನೇ ಹಂತದಲ್ಲಿ ವಿದ್ಯಾರ್ಥಿಗಳಿಗೆ ಸೋಲಾರ್ ಟೆಕ್ನಿಷಿಯನ್ ಕೋರ್ಸ್ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.

    ಸೋಲಾರ್ ಬಳಕೆ ಮೊದಲ ಹಂತವಾಗಿ ಡಿಐವಿಟಿ ತರಬೇತಿ ಕೇಂದ್ರದಲ್ಲಿ ಆರಂಭಿಸಿದ ಸೋಲಾರ್ ಚಾಲಿತ IOT (Internet of Things) ತಂತ್ರಜ್ಞಾನ ಮೂಲಕ ಹವಾಮಾನ ಮಾಹಿತಿಯನ್ನು ಮೊಬೈಲ್ ಫೋನ್ ಮೂಲಕ ಪಡೆಯಬಹುದಾಗಿದೆ. ಈ ಕೇಂದ್ರದಲ್ಲಿ ತಾಲೂಕಿನ ತಾಪಮಾನ, ಹವಾಮಾನದ ಆರ್ದ್ರತೆ, ಮಳೆ ಪ್ರಮಾಣ, ಸೋಲಾರ್ ರೇಡಿಯೇಷನ್ ಹಾಗೂ ಗಾಳಿ ವೇಗ, ದಿಕ್ಕು, ಪರಿಶುದ್ಧತೆ, ಒತ್ತಡ ಮತ್ತಿತರ ಮಾಹಿತಿಯನ್ನು ಎಕ್ಕಖ ಮೂಲಕ ಮೊಬೈಲ್ ಫೋನ್​ನಲ್ಲಿ ಪಡೆಯಬಹುದು. ಅಲ್ಲದೆ, ಮೊಬೈಲ್​ಫೋನ್​ನಲ್ಲಿ http://www.deshpandeiti.in ಎಂದು ಟೈಪಿಸಿ ಪಡೆಯಬಹುದು.

    ಹವಾಮಾನ ಮೂನ್ಸೂಚನೆ ಮಾಹಿತಿ ಘಟಕ ಆರಂಭಿಸಿದ್ದರಿಂದ ರೈತರಿಗೆ ಅನುಕೂಲವಾಗಲಿದೆ. ಹವಾಮಾನ ನಿಖರವಾಗಿ ಗಮನಿಸಿ ಬೇಸಾಯ ಪದ್ಧತಿ ನವೀಕರಣಗೊಳಿಸಲು ಸಹಾಯವಾಗಲಿದೆ.

    | ಮಂಜುನಾಥ ರೆಡೆಕರ, ಪ್ರಗತಿ ಪರ ರೈತ

    ರಾಜ್ಯದಲ್ಲಿ ಸೋಲಾರ್ ಟೆಕ್ನಾಲಜಿ ಆಧಾರಿತ ತರಬೇತಿ ಕೇಂದ್ರಗಳು ವಿರಳವಾಗಿವೆ. ಉತ್ತರ ಕರ್ನಾಟಕದಲ್ಲಿ ಮೊದಲ ಕೇಂದ್ರ ನಮ್ಮದಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ತರಬೇತಿ ಆರಂಭಿಸಲಿದ್ದೇವೆ.

    | ದಿನೇಶ ಆರ್. ನಾಯ್ಕ, ಡಿಐವಿಟಿ ಪ್ರಾಚಾರ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts