More

    ಹಳ್ಳಿಗಳಿಂದಲೇ ಕನ್ನಡದ ಉಳಿವು


    ಯಾದಗಿರಿ: ಕಲ್ಯಾಣ ಕನರ್ಾಟಕ ಪ್ರದೇಶದ ಇತಿಹಾಸದ ಅಧ್ಯಯನಕ್ಕೆ ಅತ್ಯಂತ ಸೂಕ್ತವಾಗಿದ್ದು ರಾಷ್ಟ್ರಕೂಟರ ಕುರುಹುಗಳು ಕವಿರಾಜಮಾರ್ಗ ರಚಿಸಿದ ನೃಪತುಂಗನ ನೆನಪುಗಳು ಈ ನೆಲದಲ್ಲಿ ಹಚ್ಚ ಹಸಿರಾಗಿವೆ ಎಂದ ನಾಡಿನ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ ಪ್ರತಿಪಾದಿಸಿದರು.
    ಸೋಮವಾರ ತಾಲೂಕಿನ ಸಗರ ಗ್ರಾಮದ ಕರಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಕಸಾಪದಿಂದ ಆಯೋಜಿಸಿದ್ದ ಶಹಾಪುರ ತಾಲೂಕಿನ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡಿನ ಸಾಹಿತ್ಯ ಅತ್ಯಂತ ಸಂಪತ್ಭರಿತ ಹಾಗೂ ಶ್ರೀಮಂತವಾದದು. ಇದಿಂಗೂ ಕನ್ನಡ ಉಳಿದಿದೆ ಎಂದರೆ ಅದು ಹಳ್ಳಿಗಳಿಂದ ಎಂದು ಹೇಳಿದರು.
    ಕವಿಯೊಬ್ಬ ಬರೆಯುತ್ತಾನೆ ಕನ್ನಡ ನಾಡಿನಲ್ಲಿ ನನ್ನನ್ನು ಮತ್ತೊಮ್ಮೆ ಕಲ್ಲು, ಮಣ್ಣು, ಗಿಡ, ಮರ, ಪ್ರಾಣಿ, ಪಕ್ಷಿ, ಕ್ರೀಮಿ ಕೀಟ ಹೀಗೆ ಏನನ್ನಾದರೂ ಸರಿ ಹುಟ್ಟಿಸು ಎಂದು. ಕಾರಣ ನಮ್ಮ ನಾಡು ಎಲ್ಲದಕ್ಕೂ ಬದುಕು ಕೊಟ್ಟದೆ. ಶರಣರ, ದಾಸರ, ಸೂಫಿ-ಸಂತರ ನೆಲವಿದು. ಬಂದವರಿಗೆ ಅನ್ನ ನೀಡುವ ನೆಲ, ನೀರು ಕೇಳಿದರೆ ಹಾಲು ನೀಡುವ ಮನ ನಮ್ಮ ಜನರಲ್ಲಿದೆ ಎಂದು ತಿಳಿಸಿದರು.
    ಇಂದಿನ ಸಾಮಾಜಿಕ ಮಾಧ್ಯಮಗಳು, ಮೊಬೈಲ್ ಹಾಗೂ ಇಂಟರ್ನೆಟ್ನ ಹಾವಳಿಯಿಂದ ಕನ್ನಡ ಭಾಷೆ ಹಾಳಾಗುತ್ತಿದೆ ಎಂಬುದನ್ನು ನಾಡಿನ ಜನ ಅರಿತುಕೊಳ್ಳಬೇಕಿದೆ. ಅವುಗಳ ಬಳಕೆಯಿಂದ ಕನ್ನಡ ಮರೆಯಾಗುತ್ತಿದೆ. ಇಂದು ನಮ್ಮ ನೆಲದ ಸಂಸ್ಕೃತಿ ಹಾಳಾಗುತ್ತಿದೆ. ದೇಶದಲ್ಲಿ 8 ಸಾವಿರ ಇದ್ದ ವೃದ್ಧಾಶ್ರಮಗಳು ಇಂದು 28 ಸಾವಿರಕ್ಕೆ ಏರಿಕೆಯಾಗಿವೆ ಎಂದು ಆತಂಕ ವ್ಯಕ್ತಪಡಿಸಿದ ಕುಂವೀ, ಅವಿಭಕ್ತ ಕುಟುಂಬದ ಪರಂಪರೆ ದಿನದಿಂದ ದಿನಕ್ಕೆ ನಶಿಸುತ್ತಿರುವುದು ಮಾನವೀಯ ಮೌಲ್ಯಗಳು ಪತನಗೊಳ್ಳುತ್ತಿವೆ ಎಂಬ ಸಂಕೇತ ತೋರಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ನಾನು ಸಾಹಿತ್ಯ ಓದಿಕೊಂಡವನಲ್ಲ. ಹೀಗಾಗಿ ಸಾಹಿತ್ಯದ ಬಗ್ಗೆ ಹೇಳುವುದಿಲ್ಲ. ಆದರೆ, ಕನ್ನಡ ಶಾಲೆಗಳ ಉಳಿಯಬೇಕಾದರೆ ಖಾಸಗಿ ಶಾಲೆಗಳಲ್ಲಿನ ಸೌಲಭ್ಯಗಳು ನಮ್ಮ ಮಕ್ಕಳಿಗೆ ಸಿಗುವಂತಾಗಬೇಕು. ಸಕರ್ಾರಿ ಶಾಲೆಗಳಲ್ಲಿನ ಶಿಕ್ಷಕರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದಾಗ ಮಾತ್ರ ಕನ್ನಡ ಉಳಿಯುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.
    ಇದೇ ವೇಳೆ ಸೌಹಾರ್ದ ಸಂಸ್ಕೃತಿ ಸ್ಮರಣ ಸಂಚಿಕೆಯನ್ನು ಸಚಿವರು ಬಿಡುಗಡೆಗೊಳಿಸಿದರು. ಡಾ.ದೇವೀಂದ್ರಪ್ಪ ಹಡಪದರ ಕನ್ನಡ ನುಡಿಮುತ್ತುಗಳು, ಡಾ.ನಾಗರಾಜ ದೊರೆ ಅವರ ವಚನಭಾಷೆ ಕೃತಿಗಳು ಲೋಕಾರ್ಪಣೆಗೊಳಿಸಲಾಯಿತು. ಪರಿಷತ್ತಿನ ತಾಲೂಕಾಧ್ಯಕ್ಷ ಡಾ.ರವೀಂದ್ರನಾಥ ಹೊಸ್ಮನಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts