More

    ಹಳೇ ಸೇತುವೆ ಕೆಡವದಂತೆ ಒತ್ತಾಯ

    ಕುಡಚಿ: ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ರೈಲ್ವೆ ಇಲಾಖೆಯಿಂದ ನಿರ್ಮಿಸಲು ಉದ್ದೇಶಿಸಿರುವ ಓವರ್ ಬ್ರಿಡ್ಜ್ ಕಾಮಗಾರಿ ಪೂರ್ಣಗೊಳ್ಳುವವರೆಗೂ ಹಳೆಯ ಸೇತುವೆ ತೆರವುಗೊಳಿಸದಂತೆ (ಕೆಡವದಂತೆ) ಒತ್ತಾಯಿಸಿ ಸಾರ್ವಜನಿಕರು ಉಪತಹಸೀಲ್ದಾರ್ ಮೂಲಕ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.

    ಹೊಸ ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಮೊದಲು ಹಳೇ ಸೇತುವೆ ಕೆಡವಿದರೆ ಸಂಚರಿಸುವ ಜನರಿಗೆ ಮತ್ತು ಶಾಲಾ-ಕಾಲೇಜಗಳ ವಿದ್ಯಾರ್ಥಿಗಳಿಗೆ ನಿತ್ಯವೂ ತೊಂದರೆಯಾಗುತ್ತದೆ. ಪಟ್ಟಣದ ಮುಖ್ಯ ಸೇತುವೆಯಾಗಿ ಬಾಗಲಕೋಟೆ, ಮುಧೋಳ, ಮಹಾಲಿಂಗಪುರ, ಜಮಖಂಡಿ ಸೇರಿ ಅನೇಕ ಊರುಗಳಿಗೆ ಸಂಪರ್ಕಿಸುವ ಬಸ್‌ಗಳು ಇದೇ ಸೇತುವೆ ಮೂಲಕ ಸಂಚರಿಸುತ್ತವೆ ಎಂದು ತಿಳಿಸಿದರು.

    ಕುಡಚಿ ಪಟ್ಟಣದ ಸುತ್ತಲಿನ ಗ್ರಾಮಗಳಾದ ಶಿರಗೂರ, ಗುಂಡೆವಾಡಿ, ಪರಮಾನಂದವಾಡಿ, ಸಿದ್ದಾಪುರ, ಖೇಮಲಾಪುರ, ಸುಟ್ಟಟ್ಟಿ ನಿಲಜಿ, ಯಲ್ಪಾರಟ್ಟಿ ಗ್ರಾಮಗಳಿಗೆ ಈ ಸೇತುವೆ ಮುಖ್ಯವಾಗಿದ್ದು, ಹಳೇ ಸೇತುವೆ ನಾಶ ಮಾಡುವುದಕ್ಕಿಂತ ಮುನ್ನ ಹೊಸ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

    ಅಲ್ಲಾವುದ್ದೀನ್ ರೋಹಿಲೆ, ಸಾದಿಕ್ ಸಜ್ಜನ್, ಹಮಿದೋದ್ದಿನ್ ರೋಹಿಲೆ, ಮುಸ್ತಾಕ್ ಬಾಕಶಿರಾಜ್, ಮುಷ್ಪಾಕ್ ಜಿನ್ನಾಬಡೆ, ಸಾದಿಕ ರೋಹಿಲೆ, ಶ್ರೀಶೈಲ ದರೂರೆ, ರತ್ನಾಜಿ ಕದ್ದು, ಶಕೀರ್ ಪಾಳೇಗಾರ, ಪಿಎಸ್‌ಐ ಮಾಳಪ್ಪ ಪೂಜೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts