More

    ಹಳಿಯಾಳದಲ್ಲಿ ಕ್ರಿಸ್ಮಸ್ ಉತ್ಸವಕ್ಕೆ ಚಾಲನೆ

    ಹಳಿಯಾಳ: ಕ್ರಿಸ್ಮಸ್ ಸಿದ್ಧತೆ ಅಂಗವಾಗಿ ಆಚರಿಸುವ ನಾಲ್ಕು ಸಪ್ತಾಹಗಳ ಎಡ್ವೆಂಟ್ (ಆಗಮನ ಕಾಲದ) ಆಧ್ಯಾತ್ಮಿಕ ಸಿದ್ಧತಾ ಕಾರ್ಯಗಳಿಗೆ ಪಟ್ಟಣದ ಮಿಲಾಗ್ರಿಸ್ ಚರ್ಚ್​ನಲ್ಲಿ ಭಾನುವಾರ ಧಾರ್ವಿುಕ ಪೂಜಾವಿಧಿ ಮೂಲಕ ಶಾಸ್ತ್ರೋಕ್ತವಾಗಿ ಚಾಲನೆ ನೀಡಲಾಯಿತು. ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಪೂಜಾ ವಿಧಿಗಳು ಜರುಗಿದವು.

    ಎಡ್ವೆಂಟ್ ಆಚರಣೆಯ ಸಾನ್ನಿಧ್ಯ ವಹಿಸಿದ್ದ ಮಿಲಾಗ್ರಿಸ್ ಚರ್ಚ್ ಪ್ರಧಾನ ಗುರು ಜ್ಞಾನಪ್ರಕಾಶರಾವ್ ಮಾತನಡಿ, ಕ್ರಿಸ್ಮಸ್ ಆಚರಣೆಗೆ ಇದೊಂದು ಮಹತ್ತರ ಘಟ್ಟವಾಗಿದೆ. ಒಮ್ಮೆ ಜಗಜ್ಯೋತಿ ಕ್ರಿಸ್ತರ ಆಗಮನವಾಗಿದ್ದು, ಮತ್ತೊಂದು ಆಗಮನಕ್ಕಾಗಿ ಅಧ್ಯಾತ್ಮಿಕವಾಗಿ ಸಿದ್ಧವಾಗುವುದೇ ಈ ಎಡ್ವೆಂಟ್ ಆಚರಣೆ ಸಮಯವಾಗಿದೆ ಎಂದರು. ಸಹಾಯಕ ಗುರು ಸಂತೋಷ, ಕಾರ್ವೆಲ್ ಕಾನ್ವೆಂಟ್​ನ ಸಿಸ್ಟರ್ ಶೀತಲ್, ಪಟ್ಟಣದ ಕ್ರೈಸ್ತ ಧರ್ವಿುಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts