More

    ಹಲ್ಲೆ, ಹತ್ಯೆ ನಡೆದರೂ ಮೌನವೇಕೆ?

    ಆಲ್ದೂರು: ಸಕಲೇಶಪುರದಲ್ಲಿ ದಲಿತ ಯುವಕನ ಮೇಲಿನ ಹಲ್ಲೆ ಹಾಗೂ ರಾಜಸ್ಥಾನದಲ್ಲಿ ದಲಿತ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಅಂಬೇಡ್ಕರ್ ಹೋರಾಟ ವೇದಿಕೆ ಹಾಗೂ ದಲಿತ ಸಂಘಟನೆ ಸೋಮವಾರ ಪಟ್ಟಣದಲ್ಲಿ ಪಂಜಿನ ಮೆರವಣಿಗೆ ನಡೆಸಿತು. ಪಟ್ಟಣದ ಬಸ್ ನಿಲ್ದಾಣದಲ್ಲಿ ಮೆರವಣಿಗೆ ಆರಂಭವಾಗಿ ಪ್ರಮುಖ ವೃತ್ತಗಳಲ್ಲಿ ಸಾಗಿ ಮರಳಿ ಬಸ್ ನಿಲ್ದಾಣ ತಲುಪಿತು. ಅಂಬೇಡ್ಕರ್ ಹೋರಾಟ ವೇದಿಕೆ ಗೌರವ ಅಧ್ಯಕ್ಷ ಹೊನ್ನಪ್ಪ ಮಾತನಾಡಿ, ದೇಶ ಭಕ್ತರು ಎಂದು ಕರೆದುಕೊಳ್ಳುವ ಬಜರಂಗದಳ, ಆರ್​ಎಸ್​ಎಸ್ ಮುಖಂಡರು ರಾಜಸ್ಥಾನದ ಘಟನೆಯನ್ನು ಏಕೆ ಖಂಡಿಸಲಿಲ್ಲ? ಸಕಲೇಶಪುರದಲ್ಲಿ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ್ದರೂ ಮೌನವಾಗಿದ್ದಾರೆ. ಡಾ. ಅಂಬೇಡ್ಕರ್ ಅವರ ವಿರುದ್ಧ ಅವಹೇಳಕಾರಿ ಪೋಸ್ಟ್​ಗಳನ್ನು ಹಾಕುತ್ತಿದ್ದು ಬಜರಂಗದಳದ, ಆರ್​ಎಸ್​ಎಸ್ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದರು.

    ಕಾರ್ಯದರ್ಶಿ ಹೆಡದಾಳ್ ಕುಮಾರ್ ಮಾತನಾಡಿ, ದಲಿತರ ಸಿಟ್ಟು ರಟ್ಟೆಗೆ ಬಂದರೆ ಕಿಡಿಗೇಡಿಗಳಿಗೆ ಉಳಿಗಾಲವಿಲ್ಲ. ಬಜರಂಗದಳ ಹಾಗೂ ಆರ್​ಎಸ್​ಎಸ್ ವಿರುದ್ಧದ ಹೋರಾಟಕ್ಕೆ ಪಂಜಿನ ಮೆರವಣಿಗೆ ಮೂಲಕ ಚಾಲನೆ ನೀಡಲಾಗಿದೆ ಎಂದು ಹೇಳಿದರು. ಜೆಡಿಎಸ್ ಮುಖಂಡ ಲಕ್ಷ್ಮಣ್ ಮಾತನಾಡಿ, ಸಂವಿಧಾನವನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಹಾಗಾಗಿ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಪಕ್ಷಗಳು ನಮ್ಮನ್ನು ಮತ ಬ್ಯಾಂಕ್​ಗಳನ್ನಾಗಿ ಮಾಡಿಕೊಂಡು ರಾಜಕೀಯ ಮಾಡುತ್ತಿವೆ. ಶೇ.85ರಷ್ಟಿರುವ ನಮಗೆ ಅಧಿಕಾರ ಸಿಗುತಿಲ್ಲ, ಅದೆಲ್ಲ ಕೇವಲ ಶೇ.15ರಷ್ಟಿರುವವರ ಕೈಯಲಿದೆ ಎಂದು ಕಿಡಿಕಾರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts