More

    ಹರೀನಹಳ್ಳಿಯಲ್ಲಿ ಸಂಭ್ರಮದ ತೆಪ್ಪೋತ್ಸವ

    ಹನಗೋಡು: ಹದಿನೈದು ವರ್ಷಗಳ ನಂತರ ತುಂಬಿದ ಹರೀನಹಳ್ಳಿಯ ದೊಡ್ಡ ಕೆರೆಯಲ್ಲಿ ಗ್ರಾಮಸ್ಥರು ಶನಿವಾರ ಗ್ರಾಮದೇವತೆ ಶ್ರೀಮುತ್ತುರಾಯಸ್ವಾಮಿಯ ತೆಪ್ಪೋತ್ಸವ ನಡೆಸಿ, ಬಾಗಿನ ಅರ್ಪಿಸಿ ಸಂಭ್ರಮಿಸಿದರು.

    ಹೋಬಳಿಯ ಹರೀನಹಳ್ಳಿಯ ದೊಡ್ಡ ಕೆರೆಯಲ್ಲಿ ಮಾದಹಳ್ಳಿ ಉಕ್ಕಿನಕಂತೆ ಮಠದ ಶ್ರೀಸಾಂಬ ಸದಾಶಿವ ಸ್ವಾಮೀಜಿ ಅವರ ಸಾನಿಧ್ಯದಲ್ಲಿ, ಕರ್ಣಕುಪ್ಪೆ ಗ್ರಾಪಂ ಸಹಯೋಗದಲ್ಲಿ ಅಲಂಕೃತ ತೆಪ್ಪದಲ್ಲಿ ಗ್ರಾಮದೇವತೆ ಮುತ್ತುರಾಯಸ್ವಾಮಿಯ ಉತ್ಸವ ಮೂರ್ತಿಯನ್ನಿಟ್ಟು ತೆಪ್ಪೋತ್ಸವ ನಡೆಸಿದರು.
    ಗ್ರಾಮದ ಮಹಿಳೆಯರು ತುಂಬಿದ ಕೆರೆಯಲ್ಲಿ ಗಂಗೆ ಪೂಜೆ ನಡೆಸಿ ಬಾಗಿನ ಅರ್ಪಿಸಿದರು. ಹದಿನಾರು ಎಕರೆ ವಿಸ್ತೀರ್ಣದ ಈ ದೊಡ್ಡ ಕೆರೆ ತುಂಬಿರುವುದರಿಂದ ಸುಮಾರು 100 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಲಿದೆ. ಅಲ್ಲದೆ ಸುತ್ತಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ವೃದ್ಧಿಸಲಿದ್ದು, ಈ ಭಾಗದ ನೀರಿನ ಸಮಸ್ಯೆ ನೀಗಿಸಿದೆ ಎಂದು ತಾಲೂಕು ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷ ಹರೀನಹಳ್ಳಿ ಕುಮಾರಸ್ವಾಮಿ ಸೇರಿದಂತೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದರು.


    ಗ್ರಾಮದ ಯಜಮಾನ ಮಹದೇವಪ್ಪ, ಗ್ರಾಪಂ ಸದಸ್ಯರಾದ ರಾಣಿ ರವಿಕುಮಾರ್, ಪುಟ್ಟಮ ್ಮಮಲ್ಲಿಕಾರ್ಜುನ, ಹೆಮ್ಮಿಗೆ ಪಾಪಣ್ಣ, ಕುಮಾರಸ್ವಾಮಿ, ಪಿಡಿಒ ರಾಮಣ್ಣ, ಭಾಗ್ಯಾ ಮಹೇಶ್, ಅರ್ಚಕ ನಟೇಶಾರಾಧ್ಯ, ಮುಖಂಡರಾದ ಪ್ರಭಾಕರ ಆರಾಧ್ಯ, ಕಣಗಾಲು ರಾಘವೇಂದ್ರ ಸೇರಿದಂತೆ ಗ್ರಾಮಸ್ಥರು ತೆಪ್ಪೋತ್ಸವದ ವೇಳೆ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts