More

    ಹನುಮಂತ ದೇವರ ಮೂರ್ತಿ ಕಳವು

    ಲಕ್ಷೆ್ಮೕಶ್ವರ: ತಾಲೂಕಿನ ಸೂರಣಗಿ ಗ್ರಾಪಂ ವ್ಯಾಪ್ತಿಯ ದೊಡ್ಡೂರ- ಸುವರ್ಣಗಿರಿ ತಾಂಡಾ- ಯಲ್ಲಾಪುರ ಮಾರ್ಗದಲ್ಲಿ ಮರಡಿ ಹನುಮಂತ ದೇವರ ದೇವಸ್ಥಾನದಲ್ಲಿನ ಮೂರ್ತಿಯನ್ನೇ ಖದೀಮರು ಕದ್ದೊಯ್ದಿದ್ದಾರೆ.

    ಶನಿವಾರ ಬೆಳಗ್ಗೆ ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತರು, ಗುಡಿಯಲ್ಲಿ ದೇವರ ಮೂರ್ತಿ ಇಲ್ಲದ್ದನ್ನು ಕಂಡು ಗಾಬರಿಯಾದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, 11 ರೂಪಾಯಿ ಕಾಣಿಕೆ ಮತ್ತು ಅಲ್ಲಲ್ಲಿ ಲಿಂಬೆಹಣ್ಣು ಇಡಲಾಗಿದೆ. ಮೂಢನಂಬಿಕೆ, ಕೆಲವರ ಸಲಹೆ- ಸೂಚನೆ ಮೇರೆಗೆ ಮೂರ್ತಿ ತೆಗೆದುಕೊಂಡು ಹೋಗಿರಬಹುದು ಮತ್ತೆ ತಂದಿಡಬಹುದು ಎಂಬ ಮಾತುಗಳು ಕೇಳಿ ಬಂದಿವೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

    ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಪಡೆದರು. ದೇವಸ್ಥಾನ ಕಮಿಟಿ ಅಧ್ಯಕ್ಷ ಶಂಕ್ರಪ್ಪ ಶೀರನಹಳ್ಳಿ, ಉಪಾಧ್ಯಕ್ಷ ಸಕ್ರಪ್ಪ ನಾಯಕ, ಪ್ರಧಾನ ಕಾರ್ಯದರ್ಶಿ ಶರಣಪ್ಪ ಇಚ್ಚಂಗಿ, ಶಶಿಕಾಂತ ಕಾರಭಾರಿ, ಆನಂದ ಪೂಜಾರ, ಚಂದ್ರಪ್ಪ ಮೂಲಿಮನಿ ಹಾಗೂ ಗ್ರಾಮಸ್ಥರು, ಮೂರ್ತಿ ಕಳ್ಳರನ್ನು ಪತ್ತೆ ಮಾಡಿ, ಮೂರ್ತಿ ಮರು ಪ್ರತಿಷ್ಠಾಪಿಸಬೇಕು ಎಂದು ಮನವಿ ಮಾಡಿದರು.

    ಪುರಾತನ ದೇವಸ್ಥಾನ ಇತ್ತೀಚೆಗೆ ಬಹಳ ಪ್ರಸಿದ್ಧಿಯಾಗಿದ್ದರಿಂದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ದೇವಸ್ಥಾನದ ಅಭಿವೃದ್ಧಿಗೆ ಗ್ರಾಮಸ್ಥರು, ಭಕ್ತರು ಮುಂದಾಗಿದ್ದರು. ಹೊರವಲಯದಲ್ಲಿರುವ ದೇವಸ್ಥಾನದಲ್ಲಿನ ಸಣ್ಣ ಆಭರಣಗಳು, ಘಂಟೆಗಳ ಕಳವು ಸಾಮಾನ್ಯವಾಗಿತ್ತು. ಆದರೆ, ಈ ಬಾರಿ ಖದೀಮರು ನಾಲ್ಕೈದು ಅಡಿ ಎತ್ತರದ ದೇವರ ಮೂರ್ತಿಯನ್ನೇ ಕದ್ದೊಯ್ದಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts