More

    ರಸ್ತೆ ಹದಗೆಟ್ಟು ಸಂಚಾರಕ್ಕೆ ತೊಡಕು

    ಕೊಳ್ಳೇಗಾಲ: ಒಳಚರಂಡಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ವೇಳೆ ಅದಗೆಟ್ಟಿದ್ದ ಪಟ್ಟಣದ ಕಲಿಯೂರು-ಮುಳ್ಳೂರು ಮುಖ್ಯ ರಸ್ತೆ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ತೋಡಿಕೊಂಡಿದ್ದಾರೆ.

    ಪಟ್ಟಣದ 10ನೇ ವಾರ್ಡ್ ವ್ಯಾಪ್ತಿಯ ದೊಡ್ಡ ನಾಯಕರ ಬೀದಿಯಲ್ಲಿ ಹಾಯ್ದು ಹೋಗಿರುವ ಮುಖ್ಯ ರಸ್ತೆ ಶ್ರೀವಿನಾಯಕ ದೇವಾಲಯದಿಂದ ಭೀಮನಗರದ ಪಶ್ಚಿಮ ದ್ವಾರದ ವರೆಗೂ ಗುಂಡಿ ಬಿದ್ದು ಹಾಳಾಗಿದೆ. ಈ ರಸ್ತೆ ಮಲೆ ಮಹದೇಶ್ವರ ಬೆಟ್ಡ -ಶ್ರೀರಂಗ ಪಟ್ಟಣ ಸಂಪರ್ಕ ಕಲ್ಪಿಸುವ ಹೆದ್ದಾರಿ ಆಗಿದ್ದು, ನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತದೆ. ಈ ಮಾರ್ಗವಾಗಿ ಕಾವೇರಿಪುರ ಮಾರ್ಗವಾಗಿ ಮಂಡ್ಯ, ಮೈಸೂರು, ಬೆಂಗಳೂರು ಸಂಪರ್ಕಿಸಬಹುದಾದ್ದರಿಂದ ಬಾರಿ ವಾಹನಗಳ ಸಂಚಾರವವೂ ಅಧಿಕವಾಗಿದೆ.

    ಈಗಿದ್ದರೂ ಈ ರಸ್ತೆಯ ದುರಸ್ತಿಗೆ ಸಂಬಂಧಪಟ್ಟವರು ಮುಂದಾಗದಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ. ಕಳೆದ ವರ್ಷ ಒಳಚರಂಡಿ ಪೈಪ್ ಲೈನ್ ಅಳವಡಿಸಲು ಈ ಸಿಸಿ ರಸ್ತೆಯನ್ನು ಅಗೆದು ಕಾಮಗಾರಿ ನಡೆಸಲಾಗಿತ್ತು. ನಂತರ ಕಾಮಗಾರಿ ಮಾಡಿದವರು ತಕ್ಷಣ ತೆಗೆದ ಗುಂಡಿಗೆ ತೇಪೆ ಹಾಕುವ ಕೆಲಸ ಮಾಡಬೇಕಿತ್ತು. ಆದರೆ ಕಾಮಗಾರಿ ಮುಗಿದು ಒಂದು ವರ್ಷವಾದರೂ ಈ ರಸ್ತೆಯನ್ನು ಸರಿಪಡಿಸುವ ಕೆಲಸಕ್ಕೆ ಒಳಚರಂಡಿ ಮಂಡಳಿ ಕೈ ಹಾಕಿಲ್ಲ. ಇದರಿಂದ ವಾಹನ ಸವಾರರು ಸರ್ಕಸ್ ಮಾಡಿಕೊಂಡ ವಾಹನಗಳನ್ನು ಚಲಾಯಿಸಬೇಕಿದೆ.

    ಈ ಬಗ್ಗೆ ಪತ್ರಿಕೆಯಲ್ಲಿ ವರದಿ ಬಿತ್ತರಿಸುವ ಮೂಲಕ ಮಂಡಳಿ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು.
    ಆಗ ಒಳಚರಂಡಿ ಮಂಡಳಿ ಎಇಇ ಚಿನ್ನಸ್ವಾಮಿ, ಇನ್ನೆರಡು ದಿನಗಳಲ್ಲಿ ಗುಂಡಿ ಬಿದ್ದ ರಸ್ತೆಗೆ ಪ್ಯಾಚ್ ಹಾಕುವ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದ್ದರು. ಆದರೆ ಇನ್ನು ಕಾಮಗಾರಿ ಕೈ ಗೆತ್ತಿಕೊಂಡಿಲ್ಲ. ಇದರು ನಾಗರಿಕರ ಅಸಮಾಧನಕ್ಕೆ ಕಾರಣವಾಗಿದೆ.

    ರಸ್ತೆ ದುರಸ್ತಿಗೆ ಈಗಾಗಲೆ ಸೂಚನೆ ನೀಡಿದ್ದೇನೆ. ಒಳಚರಂಡಿ ಮಂಡಳಿ ಅಧಿಕಾರಿಗಳಿಗೆ ಮತ್ತೊಮ್ಮೆ ತಾಕೀತು ಮಾಡಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಸೂಚನೆ ನೀಡುತ್ತೇನೆ.
    ಎ.ಆರ್.ಕೃಷ್ಣಮೂರ್ತಿ, ಕೊಳ್ಳೇಗಾಲ ಶಾಸಕ.

    ಕಳೆದ ವಾರವೆ ಕಾಮಗಾರಿ ಮಾಡುವುದಾಗಿ ಒಳಚರಂಡಿ ಮಂಡಳಿ ಅಧಿಕಾರಿಗಳು ತಿಳಿಸಿದ್ದರು. ಇದೀಗ ವಿಳಂಬ ಮಾಡುತ್ತಿದ್ದಾರೆ. ಈ ಬಗ್ಗೆ ಶಾಸಕರ ಗಮನ ಸೆಳೆದು ಕ್ರಮಹಿಸುತ್ತೇನೆ.
    ಎ.ರಮೇಶ್, ನಗರಸಭೆ ಆಯುಕ್ತ, ಕೊಳ್ಳೇಗಾಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts