More

    ಹಡಪದ ಅಪ್ಪಣ್ಣ ಕೊಡುಗೆ ಅಪಾರ

    ಶಾಸಕ ವಿಶ್ವಾಸ ವೈದ್ಯ ಶ್ಲಾಘನೆ 889ನೇ ಜಯಂತಿ ಆಚರಣೆ

    ಮುನವಳ್ಳಿ: ವಚನಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದಿದ ಶಿವಶರಣ ಹಡಪದ ಅಪ್ಪಣ್ಣ ಪಾತ್ರ ಹಿರಿದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
    ಪಟ್ಟಣದ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಹಡಪದ ಅಪ್ಪಣ್ಣ ಸಂಘ ಹಾಗೂ ಹಡಪದ ಸಮುದಾಯದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣನವರ 889ನೇ ಜಯಂತಿ ಉದ್ಘಾಟಿಸಿ ಅವರು ಮಾತನಾಡಿ, ಕಾಯಕನಿಷ್ಠ ಮೆರೆದ ಹಡಪದ ಅಪ್ಪಣ್ಣ ಹಾದಿಯಲ್ಲಿ ಎಲ್ಲರೂ ಸಾಗಬೇಕು. ಹಡಪದ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
    ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ ಹಾಗೂ ಪಿಕೆಪಿಎಸ್ ಅಧ್ಯಕ್ಷ ಅಂಬರೀಷ ಯಲಿಗಾರ ಮಾತನಾಡಿ, ಶರಣರು ಹಾಕಿಕೊಟ್ಟ ದಾರಿಯಲ್ಲಿ ಎಲ್ಲರೂ ಸಾಗಿ ಬದುಕು ಸಾರ್ಥಕಗೊಳಿಸಿಕೊಳ್ಳಬೇಕು ಎಂದರು.
    ಹಡಪದ ಅಪ್ಪಣ್ಣ ಸಮುದಾಯದ ರಾಜ್ಯಾಧ್ಯಕ್ಷ ಸಿದ್ದಣ್ಣ ಹಡಪದ ಮಾತನಾಡಿ, ಸಮುದಾಯ ಎಲ್ಲ ರಂಗದಲ್ಲಿಯೂ ಹಿಂದೆ ಇದ್ದು, ಸರ್ಕಾರ 2ಎ ಮೀಸಲಾತಿ ದೊರಕಿಸಿಕೊಡಬೇಕು ಎಂದರು.
    ತಂಗಡಿಯ ಹಡಪದ ಅಪ್ಪಣ್ಣದೇವರ ಸಂಸ್ಥಾನಮಠದ ಅನ್ನದಾನ ಭಾರತಿ ಅಪ್ಪಣ್ಣ ಸ್ವಾಮೀಜಿ ಮಾತನಾಡಿ, ಹಡಪದ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಲು ನಿರಂತರ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಕುಮಾರೇಶ್ವರ ಆಲೂರಮಠದಿಂದ ಕುಂಭಮೇಳ ಹಾಗೂ ವಿವಿಧ ವಾಧ್ಯಮೇಳದೊಂದಿಗೆ ಬೆಳ್ಳಿರಥದಲ್ಲಿ ಹಡಪದ ಅಪ್ಪಣ್ಣ ಭಾವಚಿತ್ರದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿದರು. ಪುರಸಭೆ ಸದಸ್ಯ ಸಿ.ಬಿ.ಬಾಳಿ, ಉದ್ಯಮಿ ವೀರೇಶ ಬ್ಯಾಹಟ್ಟಿ, ಚಂದ್ರು ಜಂಬ್ರಿ, ಡಾ.ಬಿ.ಎಚ್.ಭೈರಕದಾರ, ಕುತುಬುದ್ದೀನ್ ಅಮೀನಾಯ್ಕ, ಹಮೀದ್ ಹುಕ್ಕೇರಿ, ಸಮುದಾಯದ ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ, ಜಿಲ್ಲಾಧ್ಯಕ್ಷ ಸುರೇಶ ಹಡಪದ, ಸೋಮು ರೈನಾಪೂರ, ಹಡಪದ ಅಪ್ಪಣ್ಣ ಸಂಘದ ಗೌರವಾಧ್ಯಕ್ಷ ಈರಣ್ಣ ಉಜ್ಜಿನಕೊಪ್ಪ, ಅಧ್ಯಕ್ಷರಾದ ಹಣಮಂತ ಹಡಪದ, ಉಪಾಧ್ಯಕ್ಷ ರಮೇಶ ನಾವಿ, ಪ್ರಧಾನ ಕಾರ್ಯದರ್ಶಿ ಸೋಮು ಉಜ್ಜಿನಕೊಪ್ಪ, ಕಾರ್ಯದರ್ಶಿ ಅಣ್ಣಪ್ಪ ಮಾಲದಿನ್ನಿ, ಪ್ರಶಾಂತ ಉಜ್ಜಿನಕೊಪ್ಪ, ಯಲ್ಲಪ್ಪ ಹಡಪದ, ರವಿ ಹಡಪದ, ರವಿ ಮೂಡಲಗಿ, ಶಂಕರ ಮುರನಾಳ, ಬಾಳು ಹೊಸಮನಿ, ಮಂಜುನಾಥ ಹಡಪದ ಇತರರು ಇದ್ದರು.
    ಮುನವಳ್ಳಿಯಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿಯನ್ನು ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಿದರು. ಮುರುಘೇಂದ್ರ ಶ್ರೀಗಳು, ಅಂಬರೀಷ ಯಲಿಗಾರ, ಪಂಚನಗೌಡ ದ್ಯಾಮನಗೌಡರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts