More

    ಹಗಲು ದರೋಡೆಕೋರರ ಬಂಧನ

    ಹುಮನಾಬಾದ್: ಪಟ್ಟಣದ ಕಲ್ಲೂರ ಬೈಪಾಸ್ ರಸ್ತೆಯ ಮನೆಗೆ ಕಳೆದ ಜುಲೈ 19ರಂದು ಹಾಡಹಗಲೇ ನುಗ್ಗಿ ದರೋಡೆ ನಡೆಸಿರುವ ಘಟನೆಯನ್ನು ಇಲ್ಲಿನ ಪೊಲೀಸರು ಚಾಕಚಕ್ಯತೆಯಿಂದ ಭೇದಿಸಿದ್ದಾರೆ. ಈ ಸಂಬಂಧ ಮೂವರು ದರೋಡೆಕೋರರನ್ನು ಗುರುವಾರ ಬಂಧಿಸಿ ಅವರಿಂದ 17 ತೊಲ ಬಂಗಾರದ ಆಭರಣ, ಎರಡು ಬೈಕ್ ವಶಪಡಿಸಿಕೊಂಡಿದ್ದಾರೆ.

    ಬಸವಕಲ್ಯಾಣ ತಾಲೂಕಿನ ಗೋಕುಳ ಗ್ರಾಮದವರಾದ ಗ್ರಾಪಂ ಮಾಜಿ ಅಧ್ಯಕ್ಷ ವಿಠೋಬಾ ಗುರುನಾಥ ಧರಿ(34), ಸಂಜೀವಕುಮಾರ ಬಸವರಾಜ ಗಡಿಗೌಡಗಾಂವ(24), ಶೇಖ್ಆಸೀಫ್ ಶೇಖ್ ಜಮೀರ್ಮಿಯ್ಯಾ ಮುಲ್ಲಾನೋರ (24) ಬಂಧಿತರು.

    ಜುಲೈ 19ರಂದು ಮಧ್ಯಾಹ್ನ 12.40ರ ಹೊತ್ತಿಗೆ ಪಟ್ಟಣದ ಹೌಸಿಂಗ್ ಬೋಡರ್್ ಕಾಲನಿಯ ನಿರ್ಮಲಾಬಾಯಿ ಅಜರ್ುನರಾವ ಧುಮಾಳೆ ಹಾಗೂ ಅವರ ಸೊಸೆ ಮನೆಯಲ್ಲಿದ್ದಾಗ ಮೂವರು ದರೋಡೆಕೋರರು ನುಗ್ಗಿದ್ದರು. ಚಾಕೂವಿನಿಂದ ಹೆದರಿಸಿ ನಿರ್ಮಲಾಬಾಯಿ ಅವರು ತೊಟ್ಟಿದ್ದ 4 ತೊಲ ಬಂಗಾರದ ಪಾಟ್ಲಿ, 4 ತೊಲ ಬಂಗಾರದ ಗಂಟನ ಸರ ಹಾಗೂ ಸೊಸೆ ರಶ್ಮಿ ಅವರಲ್ಲಿದ್ದ 4.5 ತೊಲ ಬಂಗಾರದ ಗಂಟನ ಸರ, ಬಂಗಾರದ 5 ತೊಲ ಬಳೆಗಳು ಸೇರಿ 8.75 ಲಕ್ಷ ರೂ. ಮೌಲ್ಯದ 17.5 ತೊಲ ಬಂಗಾರದ ಒಡವೆ ದೋಚಿ ಪರಾರಿಯಾಗಿದ್ದರು.

    ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯಶಸ್ವಿ ಕಾಯರ್ಾಚರಣೆ ನಡೆಸಿದ್ದಾರೆ. ದರೋಡೆಕೋರರ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್, ಎಎಸ್ಪಿ ಶಿವಾಂಶು ರಜಪೂತ ಮಾರ್ಗದರ್ಶನದಲ್ಲಿ ಸಿಪಿಐ ಶರಣಬಸಪ್ಪ ಕೋಡ್ಲಾ, ಅಪರಾಧ ವಿಭಾಗದ ಪಿಎಸ್ಐ ಸುರೇಶ ಹಜ್ಜಗರ್ೆ, ಪಿಎಸ್ಐಗಳಾದ ಮಂಜನಗೌಡ ಪಾಟೀಲ್, ಬಸವರಾಜ ಇತರರು ದರೋಡೆಕೋರರಿಗೆ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಸಿಬ್ಬಂದಿ ರಮೇಶ, ಭಗವಾನ ಬಿರಾದಾರ, ಮಲ್ಲಪ್ಪ ಬೋರಗಿ, ಇಕೇಶ ಶಿವಾನಂದ, ಸೂರ್ಯಕಾಂತ, ಬಾಲಾಜಿ, ಬಾಬುರಾವ, ಷಣ್ಮುಕಯ್ಯ ಕಲ್ಲೂರ, ವಿವೇಕ, ರಾಘವೇಂದ್ರ, ನವೀನ್, ಇಫರ್ಾನ್, ಆರೀಫ್ ಇತರರು ತಂಡದಲ್ಲಿದ್ದರು.

    ಎಸ್ಪಿಯಿಂದ ನಗದು ಬಹುಮಾನ: ಪ್ರಕರಣ ಭೇದಿಸುವಲ್ಲಿ ಹುಮನಾಬಾದ್ ಪೊಲೀಸರು ಯಶಸ್ವಿಯಾಗಿದ್ದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರಬಾಬು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಟ್ಟಣದ ಪೊಲೀಸ್ ಠಾಣೆಗೆ ಗುರುವಾರ ಭೇಟಿ ನೀಡಿದ ಅವರು, ಕಾಯರ್ಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನಗದು ಬಹುಮಾನ ನೀಡಿ ಬೆನ್ನು ತಟ್ಟಿ, ಶ್ಲಾಘಿಸಿದರು.

    ಇಲಾಖೆಗೆ ಸವಾಲಾಗಿದ್ದ ಪ್ರಕರಣ: ಈ ಪ್ರಕರಣ ಪೊಲೀಸ್ ಇಲಾಖೆಗೆ ಸವಾಲಾಗಿತ್ತು. ಇದನ್ನು ಭೇದಿಸಲು ವಿಶೇಷ ತಂಡ ರಚಿಸಿ ತನಿಖೆ ತೀವ್ರಗೊಳಿಸಲಾಗಿತ್ತು. ಆರಂಭದಲ್ಲಿ ಯಾವುದೇ ಸುಳಿವು ಇರಲಿಲ್ಲ. ಸಿಸಿ ಕ್ಯಾಮರಾ, ಮೊಬೈಲ್ ಟವರ್ ಲೋಕೇಷನ್ ಸೇರಿ ಎಲ್ಲ ಆಯಾಮಗಳಿಂದ ಕಾಯರ್ಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಎಸ್ಪಿ ಕಿಶೋರಬಾಬು ಸುದ್ದಿಗಾರರಿಗೆ ತಿಳಿಸಿದರು. ಬಸವಕಲ್ಯಾಣ ತಾಲೂಕಿನ ಗೋಕುಳ ಗ್ರಾಮದವರಾದ ಮೂವರೂ, ದುಶ್ಚಟ ಹಾಗೂ ವಿಲಾಸಿ ಜೀವನಕ್ಕೆ ಬೇಕಾದ ಹಣಕ್ಕಾಗಿ ದರೋಡೆ ನಡೆಸಿದ್ದಾರೆ. ಈ ಕೃತ್ಯಕ್ಕೆ ಬಳಸಿದ ಎರಡು ಬೈಕ್ಗಳು ಕೆಲ ತಿಂಗಳ ಹಿಂದೆ ಕಲಬುರಗಿಯಲ್ಲಿ ಕಳ್ಳತನ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಇವರು ದರೋಡೆ ಮಾಡಿರುವ ಪ್ರಥಮ ಪ್ರಕರಣ ಇದಾಗಿದೆ. ಆರ್ಸಿಸಿ, ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದ ಇವರು ಪಟ್ಟಣಕ್ಕೆ ಆಗಾಗ್ಗೆ ಕೆಲಸಕ್ಕೆ ಬರುತ್ತಿದ್ದರು. ಇಲ್ಲಿ ಮನೆಯವರ ಚಲನವಲನದ ಮೇಲೆ ನಿಗಾ ಇರಿಸಿ ಕೃತ್ಯ ನಡೆಸಿದ್ದಾರೆ. ಇಂಥ ಘಟನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಸಿಸಿ ಕ್ಯಾಮರಾಗಳನ್ನು ಬೀದರ್ ನಗರ ಸೇರಿ ಎಲ್ಲ ತಾಲೂಕು ಕೇಂದ್ರಗಳಲ್ಲಿ ಅಳವಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಹೇಳಿದರು. ವಶಪಡಿಸಿಕೊಳ್ಳಲಾದ ಸ್ವತ್ತು ನ್ಯಾಯಾಲಯದ ಪ್ರಕ್ರಿಯೆ ಮುಗಿಸಿ ವಾರದೊಳಗೆ ದೂರುದಾರಿಗೆ ಒಪ್ಪಿಸಲಾಗುವುದು ಎಂದರು.

    ಸಿಬ್ಬಂದಿ ಕಾರ್ಯಕ್ಕೆ ಶಹಬ್ಬಾಸ್ಗಿರಿ: ಹುಮನಾಬಾದ್ ಠಾಣೆಗೆ ಗುರುವಾರ ಭೇಟಿ ನೀಡಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ್ ಸಹ ಕಾಯರ್ಾಚರಣೆಯಲ್ಲಿ ಭಾಗವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಕರಣ ಪತ್ತೆ ಹಚ್ಚುವುದು ಕ್ಲಿಷ್ಟಕರವಾಗಿತ್ತು. ಆದರೂ ಎಸ್ಪಿ ಮಾರ್ಗದರ್ಶನದಂತೆ ವೈಜ್ಞಾನಿಕ ದೃಷ್ಟಿಕೋನದಿಂದ ಭೇದಿಸುವಲ್ಲಿ ಸಿಬ್ಬಂದಿ ಯಶ್ವಸಿಯಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts