More

    ಹಕ್ಕುಗಳಿಗಾಗಿ ಹೋರಾಟ ಅನುವಾರ್ಯ, ರೈತ ಸಂಘದ ಅಧ್ಯಕ್ಷ ಹರಳಾಪುರ ಮಂಜೇಗೌಡ ಅಭಿಮತ

    ದೇವನಹಳ್ಳಿ: ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿಪಡಿಸದೆ ಸರ್ಕಾರ ರೈತ ವಿರೋಧಿ ಧೋರಣೆ ಮುಂದುವರಿಸಿದ್ದು, ನಮ್ಮ ಹಕ್ಕುಗಳಿಗಾಗಿ ಹೋರಾಟ ಅನಿವಾರ್ಯ ಎಂದು ರೈತ ಸಂಘದ ಅಧ್ಯಕ್ಷ ಹರಳಾಪುರ ಮಂಜೇಗೌಡ ಹೇಳಿದರು.

    ಪಟ್ಟಣದ ಹೊಸಬಸ್ ನಿಲ್ದಾಣದ ನಂಜುಂಡಸ್ವಾಮಿ ವೃತ್ತದಲ್ಲಿ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘದ ಹಸಿರು ಸೇನೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರೊ.ನಂಜುಂಡಸ್ವಾಮಿ ಅವರ 86ನೇ ಜನ್ಮದಿನಾಚರಣೆಯಲ್ಲಿ ಮಾತನಾಡಿದರು.

    ರಾಗಿ ಖರೀದಿ ಕೇಂದ್ರ ಕೂಡಲೇ ತೆರೆಯಬೇಕು. ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ರೈತರ ಕೊಳವೆಬಾವಿಗಳ ಟ್ರಾನ್‌ಸ್ಾರ‌್ಮರ್ ಸುಟ್ಟರೆ 24 ಗಂಟೆಯೊಳಗೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ವಿನೋದಕುಮಾರ ಗೌಡ ಮಾತನಾಡಿ, ಸರ್ಕಾರ, ಐಟಿ ಬಿಟಿ ಕೇತ್ರಕ್ಕಷ್ಟೇ ಒತ್ತು ನೀಡುತ್ತಿದೆ. ಇದರಿಂದ ಜನರಿಗೆ ಅನ್ನಕೊಡಲು ಆಗುವುದಿಲ್ಲ. ಕೈಗಾರಿಕಾಭಿವೃದ್ಧಿ ಹೆಸರಲ್ಲಿ ಪ್ರತಿ ವರ್ಷ 500-1000 ಎಕರೆ ಸ್ವಾಧೀನಪಡಿಸಿಕೊಳ್ಳುತ್ತಿದ್ದರೆ ಮುಂದಿನ ದಿನಗಳಲ್ಲಿ ಅನ್ನದಾತ ಭೂಮಿ ಕಳೆದುಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಪರದಾಡುವ ಸ್ಥಿತಿ ಬರುತ್ತದೆ. ಆದ್ದರಿಂದ ಅಭಿವೃದ್ಧಿ ಹೆಸರಲ್ಲಿ ಭೂಕಬಳಿಕೆ ನಿಲ್ಲಿಸಬೇಕು. ರೈತ ಪರ ಯೋಜನೆ ಅನುಷ್ಠಾನವಾಗಬೇಕು ಎಂದರು.

    ಪುರಸಭೆ ಮಾಜಿ ಅಧ್ಯಕ್ಷ ಸಿ.ಜಗನ್ನಾಥ್ ಮಾತನಾಡಿದರು. ಕಾರ್ಯಾಧ್ಯಕ್ಷ ಬಸವಗೌಡ ಪೊಲೀಸ್ ಪಾಟಿಲ್, ಜಿಲ್ಲಾಧ್ಯಕ್ಷ ಎಂ. ವೆಂಕಟೇಶ್, ಉಪಾಧ್ಯಕ್ಷ ಎ.ಎಂ. ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಜಯಶಂಕರ್, ಉಪಾಧ್ಯಕ್ಷ ಗಯಾಜ್ ಪಾಷಾ, ಮಂಗಳೂರು ಜಿಲ್ಲಾಧ್ಯಕ್ಷ ಎಂ. ಗಿರೀಶ್ ಕೋಠಾರಿ, ತಾಲೂಕು ಮಹಿಳಾ ಅಧ್ಯಕ್ಷೆ ಚೈತ್ರಾ ನಾಗರಾಜ್, ಕರವೇ ಗೌರವಾಧ್ಯಕ್ಷ ಎನ್.ಚಂದ್ರಶೇಖರ್, ತಾಲೂಕು ಅಲ್ಪ ಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ನಜೀರ್, ಹೋಬಳಿ ಅಧ್ಯಕ್ಷ ನಸೃಲ್ಲಾ ಷರ್ೀ, ಟೌನ್ ಅಧ್ಯಕ್ಷ ಮಂಜುನಾಥ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts