More

    ಹಕ್ಕಿಪಿಕ್ಕಿ ಕುಟುಂಬಕ್ಕೆ ತಾತ್ಕಾಲಿಕ ಆಶ್ರಯ

    ಬಾಗೇಪಲ್ಲಿ : ಪಾತಬಾಗೇಪಲ್ಲಿಯಲ್ಲಿ ಪ್ರಭಾವಿಗಳು ಒಕ್ಕಲೆಬ್ಬಿಸಿದ ಹಿನ್ನೆಲೆಯಲ್ಲಿ ಬೀದಿಪಾಲಾಗಿದ್ದ ಹಕ್ಕಿಪಿಕ್ಕಿ ಕುಟುಂಬಕ್ಕೆ ಪೊಲೀಸರು ಪರ್ಯಾಯ ವ್ಯವಸ್ಥೆ ಒದಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಹಲವು ವರ್ಷಗಳಿಂದ ಜನಾಂಗ ವಾಸಿಸುತ್ತಿದ್ದ ಇಲ್ಲಿನ ಸರ್ಕಾರಿ ಜಾಗವನ್ನು ಪ್ರಭಾವಿಗಳು ತಮ್ಮ ಜಮೀನು ಎಂದು ಹೇಳಿ ಒಕ್ಕಲೆಬ್ಬಿಸಿದ್ದ ಬಗ್ಗೆ ಸೆ.7ರಂದು ವಿಜಯವಾಣಿ ಗಮನ ಸೆಳೆದಿತ್ತು.

    ಕುಟುಂಬ ಮಕ್ಕಳ ಸಮೇತ ರಸ್ತೆ ಬದಿಯಲ್ಲಿ ಸಾಮಗ್ರಿಗಳೊಂದಿಗೆ ನಿಂತಿರುವ ಮಾಹಿತಿ ಪಡೆದ ಡಿವೈಎಸ್ಪಿ ರವಿಶಂಕರ್ ಮತ್ತು ವೃತ್ತ ನಿರೀಕ್ಷಕ ನಯಾಜ್ ಬೇಗ್, ಸಮಾಜ ಕಲ್ಯಾಣ ಇಲಾಖೆ ನೆರವಿನೊಂದಿಗೆ ಕುಟುಂಬಕ್ಕೆ ಅಂಬೇಡ್ಕರ್ ವಸತಿ ನಿಲಯದಲ್ಲಿ ತಾತ್ಕಾಲಿಕವಾಗಿ ಆಶ್ರಯ ಕಲ್ಪಿಸಿ, ಆರ್ಥಿಕ ನೆರವು ಒದಗಿಸಿದ್ದಾರೆ. ಜತೆಗೆ ಬೇರೆ ಕಡೆ ವಸತಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

    ಮತ್ತೊಂದೆಡೆ ಹಕ್ಕಿಪಿಕ್ಕಿ ಜನಾಂಗದ ಮನೆಯಲ್ಲಿದ್ದ ಆಹಾರ ಪದಾರ್ಥ, ಸಾಮಗ್ರಿಗಳನ್ನು ಹೊರಗಡೆ ಬಿಸಾಡಿದ್ದಲ್ಲದೆ ಜಾಗ ಬಿಡಲು ಒಪ್ಪದ ರತ್ನಮ್ಮ ಮತ್ತು ಲಕ್ಷ್ಮಿದೇವಮ್ಮ ಎಂಬುವರನ್ನು ಎಳೆದಾಡಿ, ದೌರ್ಜನ್ಯವೆಸಗಿದ ಪ್ರಭಾವಿಗಳ ವಿರುದ್ಧ ಕ್ರಮಕ್ಕೂ ಮುಂದಾಗಿದ್ದಾರೆ.

    ಡಿವೈಎಸ್ಪಿ ರವಿಶಂಕರ್ ಮತ್ತು ಬಾಗೇಪಲ್ಲಿ ವೃತ್ತ ನಿರೀಕ್ಷಕ ನಯಾಜ್ ಬೇಗ್ ಅವರು ನೊಂದ ಹಕ್ಕಿಪಿಕ್ಕಿ ಜನಾಂಗದ ಕುಟುಂಬಕ್ಕೆ ಸ್ಪಂದಿಸಿರುವುದು ಶ್ಲಾಘನೀಯ. ವಸತಿ ಸೌಲಭ್ಯ ಕಲ್ಪಿಸಲು ಸಂಬಂಧಪಟ್ಟವರ ಗಮನ ಸೆಳೆಯಲಾಗಿದೆ.
    ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts