More

    ಸ್ವಾವಲಂಬಿ ಬದುಕಿಗೆ ಆರ್ಥಿಕ ನೆರವು

    ಕೋಲಾರ: ಬಡತನವು ಶಾಪವಲ್ಲ. ಬದುಕು ರೂಪಿಸಿಕೊಳ್ಳಲು ಅನೇಕ ಅವಕಾಶಗಳಿವೆ. ಬ್ಯೂಟೀಷಿಯನ್ ತರಬೇತಿ ಪಡೆದಿರುವವರು ವೃತ್ತಿಯಾಗಿಸಿಕೊಂಡರೆ ಅಗತ್ಯ ಆರ್ಥಿಕ ನೆರವು ನೀಡಲು ಡಿಸಿಸಿ ಬ್ಯಾಂಕ್ ಸಿದ್ಧವಿದೆ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

    ನಗರದ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಸೋಮವಾರ ಕಾರಂಜಿಕಟ್ಟೆಯ ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘದಿಂದ ಬ್ಯೂಟೀಷಿಯನ್ ತರಬೇತಿ ಪಡೆದವರಿಗೆ ಸೋಮವಾರ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

    ಇಂದಿನ ಹೈಟೆಕ್ ಪ್ರಪಂಚದಲ್ಲಿ ಬ್ಯೂಟೀಷಿಯನ್ ಸಮಾಜದ ಅಂಗವಾಗಿ ಬೆಳೆದಿದೆ. ಪ್ರತಿಯೊಬ್ಬರಿಗೂ ಅದರ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ತರಬೇತಿ ಪಡೆದವರು ವ್ಯರ್ಥ ಮಾಡದೆ ಅದನ್ನೇ ವೃತ್ತಿಯಾಗಿಸಿಕೊಂಡಲ್ಲಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯ. ತರಬೇತಿ ಪಡೆದವರು ವೃತ್ತಿಗೆ ಇಳಿದಲ್ಲಿ ಅದಕ್ಕೆ ಅನುಗುಣವಾಗಿ ಬೇಕಾದ ಸಾಲ ಸೌಲಭ್ಯದ ಆರ್ಥಿಕ ನೆರವನ್ನು ನೀಡಲಾಗುವುದು ಎಂದರು.

    ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಅರುಣಮ್ಮ ಮಾತನಾಡಿ, ಎರಡು ತಿಂಗಳ ತರಬೇತಿ ಮುಗಿಸಿದ 50 ಮಂದಿಯಲ್ಲಿ ಪರೀಕ್ಷೆ ಪಾಸಾದವರಿಗೆ ಪ್ರಮಾಣ ಪತ್ರ ನೀಡಲಾಗುತ್ತಿದೆ. ಬ್ಯೂಟೀಷಿಯನ್ ವೃತ್ತಿ ಎಂದಿಗೂ ನಮ್ಮ ಕೈಬಿಡುವುದಿಲ್ಲ. ಕನಿಷ್ಠ 10,00 ರೂ. ಬಂಡವಾಳ ಹಾಕಿ ಕಿಟ್ ಖರೀದಿಸಿದರೆ ಪ್ರತಿದಿನ 300ರಿಂದ 500 ರೂ. ನಂತೆ ಕನಿಷ್ಠ 10,000 ರೂ. ಸಂಪಾದಿಸಬಹುದು ಎಂದರು.

    ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಮೇಶ್ ಕರೊನಾ ಅರಿವು ಮೂಡಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ, ಯೂನಿಯನ್ ನಿರ್ದೇಶಕ ಉರಿಗಿಲಿ ರುದ್ರಸ್ವಾಮಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಶಿಧರ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಹುಸೇನ್ ಸಾಬ್ ದೊಡ್ಡಮನಿ, ನರ್ಮದಾ ಮಹಿಳಾ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷೆ ಅಶ್ವಿನಿ, ನಿರ್ದೇಶಕರಾದ ಅಂಬಿಕಾ, ತಸ್ಲೀಮ್ ಉನ್ನೀಸಾ, ಸಿಇಒ ಸುನಿತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts