More

    ಸ್ವಾಮೀಜಿಗೆ ಸಿಗದ ಬಿಡುಗಡೆ ಭಾಗ್ಯ

    ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ನಗರದ ಶ್ರೀ ಮುರುಘಾ ಮಠದ ಪೀಠಾಧ್ಯಕ್ಷ ಮುರುಘಾ ಶರಣರಿಗೆ ಜಾಮೀನು ನೀಡಿರುವ ಹೈಕೋರ್ಟ್ ಜಾಮೀನು ನೀಡಿರುವ ಹಿನ್ನೆಲೆಯಲ್ಲಿ ಸ್ವಾಮೀಜಿ ಪರ ವಕೀಲರಿಂದ 2ನೇ ಅಪರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯಕ್ಕೆ ಶುಕ್ರವಾರ ಜಾಮೀನು ಪ್ರತಿ,ಸ್ವಾಮೀಜಿ ಅವರ ಪಾಸ್‌ಪೋರ್ಟ್ ಹಾಗೂ ಇಬ್ಬರು ಜಾಮೀನುದಾರರಿಂದ ಶ್ಯೂರಿಟಿ ಸಲ್ಲಿಕೆ.

    ಪರಿಶೀಲಿಸಿದ ನ್ಯಾಯಾಲಯ ವಿಚಾರಣೆಯನ್ನು ನ.15ಕ್ಕೆ ಮುಂದೂಡಿತು. ಶರಣರಿಗೆ ಹೈಕೋರ್ಟ್ ಜಾಮೀನು ನೀಡಿದ್ದು,ಅವರನ್ನು ನ್ಯಾಯಾಂಗ ಬಂಧನ ದಿಂದ ಮುಕ್ತಗೊಳಿಸಬೇಕೆಂಬ ವಕೀಲ ಸಂದೀಪ್ ಪಾಟೀಲ್ ಅವರಿಂದ ಕೋರಿಕೆ. ಸರ್ಕಾರಿ ಅಭಿಯೋಜಕ ಜಗದೀಶ್ ಅವರು ಸ್ವಾಮೀಜಿ ವಿರುದ್ಧ ನಗರದ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿರುವ 2ನೇ ಪ್ರಕರಣದಲ್ಲಿ ಶರಣರ ವಿರುದ್ಧ ನ್ಯಾಯಾಲಯ ಈ ಮುನ್ನ ಹೊರಡಿಸಿದ್ದ ಬಾಡಿ ವಾರೆಂಟ್‌ನ್ನು ನ್ಯಾಯಾಂಗ ಬಂಧನವನ್ನಾಗಿ ಪರಿವರ್ತಿಸ ಬೇಕೆಂದು ಕೋರಿ ಅರ್ಜಿ ಸಲ್ಲಿಕೆ.

    ಇದಕ್ಕೆ ಆಕ್ಷೇಪಣೆ ಸಲ್ಲಿಸುವುದು ಇದೆಯೇ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಸ್ವಾಮೀಜಿ ಪರ ವಕೀಲರು,ಸ್ವಾಮೀಜಿ ವಿರುದ್ಧದ 2ನೇ ಪ್ರ ಕರಣಕ್ಕೆ ಹೈ ಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ ಈ ಕುರಿತು ಆಕ್ಷೇಪಣೆ ಸಲ್ಲಿಸುವುದು ಹೈರ್ಕೋರ್ಟ್ ಆದೇಶದ ಉಲ್ಲಂಘನೆಯಾ ಗುತ್ತದೆ ಎಂದು ತಮ್ಮ ಅಭಿಪ್ರಾಯ ಮಂಡಿಸಿದರು.

    ಸ್ವಾಮೀಜಿಗೆ ಜಾಮೀನು ನೀಡಲು ಕೋರ್ಟಿಗೆ ಹಾಜರಾಗಿದ್ದ ಚಿತ್ರದುರ್ಗ ಕೆ.ಸಿ.ನಾಗರಾಜ್(ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಅವರ ಸಹೋದರ)ಹಾಗೂ ಮಧು ಸೂದನ್ ಅವರು ತಮ್ಮ ಶ್ಯೂರಿಟಿಗೆ ನೀಡಿರುವ ದಾಖಲೆಗಳ ಪರಿಶೀಲನೆ,ಸರ್ಕಾರಿ ಅಭಿಯೋಜಕರ ಅರ್ಜಿ ಹಾಗೂ ಸ್ವಾಮೀಜಿ ಪರ ವಕೀಲರ ಅಭಿಪ್ರಾಯದ ಕುರಿತಂತೆ ಮುಂದಿನ ವಿಚಾರಣೆಯನ್ನು ನ.15ಕ್ಕೆ ಮುಂದೂಡಿದಿರುವುದಾಗಿ ನ್ಯಾಯಾ ಧೀಶೆ ಕೋಮಲ ಅವರು ಪ್ರಕಟಿಸಿದರು.

    ವಿಚಾರಣೆ ವೇಳೆ ಈಗಾಗಲೇ ಜಾಮೀನು ಪಡೆದಿರುವ 3ನೇ ಆರೋಪಿ ಪರಮಶಿವಯ್ಯ ಕೋರ್ಟಿಗೆ ಹಾಜರಾಗಿದ್ದರು. ಸರ್ಕಾರಿ ಅಭಿಯೋಜಕಿ ನಾಗವೇಣಿ,ಸ್ವಾಮೀಜಿ ಪರ ವಕೀಲ ರಾದ ಸಂದೀಪ್‌ಪಾಟೀಲ್,ಬಿಕೆ ಸ್ವಾಮಿ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts