More

    ಸ್ವಾಭಿಮಾನಿ ಜೀವನ ಕಲ್ಪಿಸಿಕೊಟ್ಟ ನರೇಗಾ

    ಯಾದಗಿರಿ: ಗ್ರಾಮೀಣ ಭಾಗದ ಜನರ ಬದುಕಿಗೆ ಆಸರೆಯಾಗಿರುವ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಿಂದ ದೇಶದ ಕೋಟ್ಯಂತರ ಕುಟುಂಬಗಳು ಸ್ವಾಭಿಮಾನಿ ಜೀವನ ಕಲ್ಪಿಸಿಕೊಂಡಿದ್ದಾರೆ ಎಂದು ಜಿಪಂ ಉಪ ಕಾರ್ಯದರ್ಶಿ ಅಶೋಕ ತೋಟದ ತಿಳಿಸಿದರು.

    ಬುಧವಾರ ತಾಲೂಕಿನ ಮುಷ್ಟೂರು ಗ್ರಾಮದಲ್ಲಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಾಂಘಿಕ ಪ್ರಯತ್ನದಿಂದ ನವೀಕರಣಗೊಂಡ ಅಂಗನವಾಡಿ ಕೇಂದ್ರದ ಕಟ್ಟಡ ಹಾಗೂ ನರೇಗಾ ದಿನದ ಹಿನ್ನೆಲೆಯಲ್ಲಿ ನರೇಗೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಥಿಲಾವಸ್ಥೆಯಲ್ಲಿದ್ದ ಈ ಕಟ್ಟಡ ಇಂದು ನರೇಗಾ ಯೋಜನೆಯಡಿ ಜೀರ್ಣೋದ್ಧಾರಗೊಳಿಸಿರುವುದು ಶ್ಲಾಘನೀಯ ಎಂದರು.

    ಜಿಪಂ ಯೋಜನಾ ನಿರ್ದೇಶಕ ಬಿಎಸ್ ರಾಠೋಡ ಮಾತನಾಡಿ, ಎಲ್ಲರೂ ತಮ್ಮ ಮಕ್ಕಳ ಜನ್ಮದಿನ ಖುಷಿಯಿಂದ ಆಚರಿಸುತ್ತಾರೆ. ಇಂದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ. ಅದರಂತೆ ಸಕರ್ಾರ ಜನರ ಜೀವನೋಪಾಯಕ್ಕಾಗಿ, ಬಡ ಜನರಿಗೆ ಸಹಾಯ ಮಾಡುವ ಯೋಜನೆ ಜಾರಿಯಾದ ನೆನಪಿಗೆ ಪ್ರತಿ ವರ್ಷ 2ರಂದು ನರೇಗೋತ್ಸವ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

    ತಾಪಂ ಇಒ ಬಸವರಾಜ ಶರಬೈ, ಜಗನ್ನಾಥ ಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಪ್ರಭಾಕರ್, ಸಿಡಿಪಿಒ ಅನುರಾಧ ಜಿ ಮಣ್ಣೂರು, ಸಹಾಯಕ ನಿರ್ದೇಶಕರಾದ ಚಂದ್ರಶೇಖರ ಪವಾರ, ರಾಮಚಂದ್ರ ಬಸೂದೆ, ಬಸವರಾಜ್ ಸಜ್ಜನ, ರಾಘವೇಂದ್ರ ಎಚ್.ವಿ., ಸೋಮಶೇಖರ್, ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಗಿರಿಮಲ್ಲಣ್ಣ, ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಬನ್ನಪ್ಪ ಬೈಟಿಪುಲಿ, ಗ್ರಾಪಂ ಅಧ್ಯಕ್ಷ ಶರಣಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts