More

    ಸ್ವಾಧಿಮಠದ ಲಿಂ.ಶಿವಬಸವ ಸ್ವಾಮೀಜಿ ಕೊಡುಗೆ ಅಪಾರ

    ಸವದತ್ತಿ, ಬೆಳಗಾವಿ: ಮನೆಯಲ್ಲಿ ಹಿರಿಯರು ಹಾಗೂ ಮಠದಲ್ಲಿ ಗುರು ಇದ್ದರೆ ಚೆನ್ನ ಎಂದು ಕುಂದರಗಿ ಅಡವಿ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

    ಇಲ್ಲಿನ ಸವಳಬಾವಿ ಓಣಿಯ ಸ್ವಾಧಿಮಠದ ಆವರಣದಲ್ಲಿ ಮಂಗಳವಾರ ಶಂಕರಲಿಂಗ ಯುವಕ ಮಂಡಳದಿಂದ ಪೂಜ್ಯರ ಸಾನ್ನಿಧ್ಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲಿಂ.ಶಿವಬಸವ ಶ್ರೀಗಳ ಶ್ರದ್ಧಾಂಜಲಿ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಶ್ರೀಗಳು ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದರು.

    ಸಂಸಾರಿಗಳಿಂದ ಮಠ ನಡೆಯದು. ಸಮಾಜದಲ್ಲಿ ಮಾರ್ಗದರ್ಶನ ಮಾಡಲು ಗುರು ಬೇಕು. ಸಂಸಾರಿಯಿಂದ ಮಠದ ನಿರ್ವಹಣೆ ಕಷ್ಟ ಸಾಧ್ಯ. ಹುಬ್ಬಳ್ಳಿ ಮೂರುಸಾವಿರ ಮಠದ ಶ್ರೀ, ಮುನವಳ್ಳಿ ಶ್ರೀಗಳ ನೇತೃತ್ವದಲ್ಲಿ ಸಮರ್ಥ ಉತ್ತರಾಧಿಕಾರಿ ನೇಮಿಸಬೇಕು. ಸಮಾಜವನ್ನು ಒಗ್ಗೂಡಿಸಲು ಗುರುವಿನ ಅವಶ್ಯಕತೆ ಇದೆ ಎಂದು ಸ್ಮರಿಸಿದರು.

    ಮುನವಳ್ಳಿ ಮೂರು ಸಾವಿರ ಮಠದ ಮಹಾರಾಜ ನಿರಂಜನ ಜಗದ್ಗುರು, ಡಾ.ಗುರುಸಿದ್ಧ ರಾಜಯೋಗೀಂದ್ರ ಶ್ರೀ, ಡಂಬಳದ ಡಾ.ತೋಂಟದ ಸಿದ್ಧಲಿಂಗ ಶ್ರೀ, ಲೊಂಗರವಾಡದ
    ಮಲ್ಲಿಕಾರ್ಜುನ ಶ್ರೀ, ಮುರಗೋಡದ ನೀಲಕಂಠ ಶ್ರೀ, ನಾಗನೂರಿನ ಅಲ್ಲಮಪ್ರಭು ಶ್ರೀ, ಕಿಲ್ಲಾ ತೋರಗಲ್ಲ ಗಚ್ಚಿನ ಮಠದ ಶ್ರೀ, ಬಿದರಿ ಕಲ್ಮಠದ ಶ್ರೀ, ಮೂಲಿಮಠದ ಶ್ರೀ, ಉಗರಗೋಳದ ನಿರ್ವಾಣೇಶ್ವರ ಮಠದ ಶ್ರೀ, ಶಿವಾನಂದ ಹೂಗಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts