More

    ಮನ್ನಿಕೇರಿ ಶೈಕ್ಷಣಿಕ ಸೇವೆ ಅಪಾರ

    ಕೊಳವಿ: ತಮ್ಮ ಸೇವಾವಧಿಯಲ್ಲಿ ಅಪಾರ ಶೈಕ್ಷಣಿಕ ಸೇವೆ ನೀಡಿ ಜನಮನ್ನಣೆ ಗಳಿಸಿದವರು ಗಜಾನನ ಮನ್ನಿಕೇರಿ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ಸಮೀಪದ ಮಮದಾಪುರ ಗ್ರಾಮದ ಏಳುಕೋಣೆ ಬಸವೇಶ್ವರ ದೇವಸ್ಥಾನದಲ್ಲಿ ಗಜಾನನ ಮನ್ನಿಕೇರಿ ಅವರು ಶಿಕ್ಷಣ ಇಲಾಖೆ ಅಪರ ಸಹ ನಿರ್ದೇಶಕರಾಗಿ ನಿವೃತ್ತರಾದ ಹಿನ್ನೆಲೆಯಲ್ಲಿ ಭಾನುವಾರ ಅಯೋಜಿಸಿದ್ದ ಸರ್ವ ಜನಾಂಗದ ಸ್ವಾಭಿಮಾನ ಬಳಗದಿಂದ ಶೈಕ್ಷಣಿಕ ಚಿಂತನ ಹಾಗೂ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದರು. ಮಮದಾಪುರ ಗ್ರಾಮದ ಡಿ.ಸಿ. ಪಾವಟೆ, ಬಿ.ಬಿ. ಮಮದಾಪುರ ಅವರಂತಹ ಮಹಾನ್ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿದ ಸಾಲಿನಲ್ಲಿ ಮನ್ನಿಕೇರಿ ಸೇರ್ಪಡೆಯಾಗಿದ್ದಾರೆ. ಅವರ ಶೈಕ್ಷಣಿಕ ಸೇವೆಯಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾರೆ. ಮಮತೆಯ ಮಮದಾಪುರ ಗ್ರಾಮದಲ್ಲಿ ಸರಸ್ವತಿ ಪ್ರತಿಯೊಬ್ಬರ ಮನೆಯಲ್ಲಿ ನೆಲೆಸಿದ್ದಾಳೆ. ಅವರ ನಿವೃತ್ತಿ ಬದುಕು ಸುಖಕರವಾಗಿರಲಿ ಎಂದು ಹಾರೈಸಿದರು. ಶಿವಾನಂದ ಸ್ವಾಮೀಜಿ, ಚರಮೂರ್ತಿಶ್ವರ ಸ್ವಾಮೀಜಿ, ಮೌನ ಮಲ್ಲಿಕಾರ್ಜುನ ಸ್ವಾಮೀಜಿ, ಕೇಶವಾನಂದ ಪುರಿ ಸ್ವಾಮೀಜಿ ಉದ್ಘಾಟಿಸಿದರು. ಗಜಾನನ ಮನ್ನಿಕೇರಿ ದಂಪತಿಯನ್ನು ಪೂಜ್ಯರು ಸನ್ಮಾನಿಸಿದರು. ಗ್ರಾಮದ ನಿವೃತ್ತ ಶಿಕ್ಷಕರನ್ನೂ ಸನ್ಮಾನಿಸಲಾಯಿತು. ಹಿರಿಯ ಪತ್ರಕರ್ತ ಚಂದ್ರಶೇಖರ ಕೊಣ್ಣೂರ ಅಧ್ಯಕ್ಷತೆ ವಹಿಸಿದ್ದರು. ನಿಂಗಪ್ಪ ಫಿರೋಜಿ, ಮಹಾಂತೇಶ ಕಡಾಡಿ, ಬಿ.ಜಿ. ಪಾವಟೆ, ಸಿ.ಐ. ಗಾಣಿಗಿ, ಎಸ್.ಎನ್. ಗುದಗನ್ನವರ, ಎಸ್.ಎಸ್. ಪಟಗುಂದಿ, ಆರ್.ಆರ್. ಪಾಟೀಲ, ಎಂ.ಬಿ. ಪಾಟೀಲ, ಎಂ.ಎನ್. ಗಾಣಿಗಿ, ಎಂ.ಪಿ. ಗಾಣಿಗಿ, ಐ.ಸಿ. ಕೊಣ್ಣೂರ, ಎಂ.ಎಸ್. ಹಿತ್ತಲಮನಿ,
    ಎಂ.ಎನ್. ಗೂದಿಗೊಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts