More

    ಸ್ವಾತಂತ್ರೃ ಸೇನಾನಿಗಳ ತ್ಯಾಗ ಮಕ್ಕಳಿಗೆ ತಿಳಿಸಿ

    ಹುಮನಾಬಾದ್: ಸ್ವಾತಂತ್ರೃಕ್ಕಾಗಿ ತ್ಯಾಗ, ಬಲಿದಾನ ಮಾಡಿದ ನಮ್ಮ ಹಿರಿಯರು ಹಾಗೂ ಸೇನಾನಿಗಳ ಬಗ್ಗೆ ಮಕ್ಕಳಿಗೆ ತಿಳಿಸುವ ಕೆಲಸ ನಡೆಯಬೇಕೆಂದು ಶಾಸಕ ರಾಜಶೇಖರ ಪಾಟೀಲ್ ಕರೆ ನೀಡಿದರು.

    ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶನಿವಾರ ತಾಲೂಕು ಆಡಳಿತ ಆಯೋಜಿಸಿದ್ದ ಕಲ್ಯಾಣ ಕನರ್ಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ವಾತಂತ್ರೃ ಸೇನಾನಿಗಳಿಗೆ ಗೌರವಿಸುವ ಕಾರ್ಯ ತಾಲೂಕು ಆಡಳಿತದಿಂದ ನಡೆಯಬೇಕೆಂದು ಸೂಚಿಸಿದರು.

    ಕಲ್ಯಾಣ ಕನರ್ಾಟಕಕ್ಕೆ ಸ್ವಾತಂತ್ರೃ ದೊರಕಿರುವುದರಲ್ಲಿ ಸದರ್ಾರ್ ವಲ್ಲಭಭಾಯಿ ಪಟೇಲ್ ಪಾತ್ರ ಮಹತ್ವದಾಗಿದೆ ಎಂದರು. ಭಗವಾನ್ ವಿಶ್ವಕರ್ಮರ ತತ್ವ, ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

    ಸಾನ್ನಿಧ್ಯ ವಹಿಸಿದ್ದ ಯಾದಗಿರಿ ವಿಶ್ವಕರ್ಮ ಏಕದಂಡಿಗಿ ಮಠ ಹಾಗೂ ಹುಮನಾಬಾದ್ನ ಶ್ರೀ ಶ್ರೀನಿವಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಹಿತಿ ಕಾಶೀನಾಥ ರಡ್ಡಿ ಉಪನ್ಯಾಸ ನೀಡಿದರು.

    ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸದಸ್ಯ ಬಸವರಾಜ ಆರ್ಯ, ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ, ಪುರಸಭೆ ಅಧ್ಯಕ್ಷೆ ನೀತು ಶಮರ್ಾ, ಉಪಾಧ್ಯಕ್ಷೆ ಸತ್ಯಾವತಿ ಮಠಪತಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾಜರ್ುನ ಮಾಶೆಟ್ಟಿ, ತಾಪಂ ಇಒ ಮುರಗೆಪ್ಪ ವಸ್ತ್ರದ, ಬಿಇಒ ವೆಂಕಟೇಶ ಗೂಡಾಳ ಇತರರಿದ್ದರು. ತಹಸೀಲ್ದಾರ್ ಪ್ರದೀಪಕುಮಾರ ಸ್ವಾಗತಿಸಿದರು. ಮಹಾವೀರ ಜಮಖಂಡಿ ನಿರೂಪಣೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts