More

    ಸ್ವಾತಂತ್ರೃ ಯೋಧರನ್ನು ಸ್ಮರಿಸುವುದು ನಮ್ಮ ಕರ್ತವ್ಯ

    ಬೈಲಹೊಂಗಲ ಬೆಳಗಾವಿ: ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲರ ನೇತೃತ್ವದಲ್ಲಿ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ವಿರಚಿತ ವೀರ ಸಾವರ್ಕರ್ ಸಾಹಸ-ಯಾತನೆ-ಅವಮಾನ ಎಂಬ ಪುಸ್ತಕವನ್ನು ಪಟ್ಟಣದ ಗಣಾಚಾರಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಶನಿವಾರ ವಿತರಿಸಲಾಯಿತು.

    ಡಾ. ವಿಶ್ವನಾಥ ಪಾಟೀಲ ಮಾತನಾಡಿ, ನಾವು ಇಂದು ಸ್ವತಂತ್ರವಾಗಿರಲು ಕಾರಣೀಭೂತರಾದ ದೇಶದ ಸ್ವಾತಂತ್ರ್ಯ ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಸಾವರ್ಕರ್ ಅವರು ಬ್ರಿಟಿಷರಿಂದ ಕ್ರೂರ ಶಿಕ್ಷೆ, ಅವಮಾನ ಅನುಭವಿಸಿಯೂ ಸ್ವಾತಂತ್ರ್ಯದ ಮಂತ್ರ ಜಪಿಸುವುದನ್ನು ಬಿಡಲಿಲ್ಲ ಎಂದರು.

    ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಸಿ.ಬಿ.ಗಣಾಚಾರಿ ಮಾತನಾಡಿ, ವೀರ ಸಾವರ್ಕರ್ ಅವರ ತ್ಯಾಗ, ಬಲಿದಾನ ಅವಿಸ್ಮರಣೀಯವಾಗಿದೆ ಎಂದರು. ಉಪನ್ಯಾಸಕ ಬಸವರಾಜ ಪುರಾಣಿಕಮಠ ಮಾತನಾಡಿದರು. ಮಡಿವಾಳಪ್ಪ ಹೋಟಿ, ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ರಾಜು ಕುಡಸೋಮಣ್ಣವರ, ಬಸವರಾಜ ನೇಸರಗಿ, ವಿಜಯ ಪತ್ತಾರ, ರುದ್ರಪ್ಪ ಹೊಸಮನಿ, ಆನಂದ ಮೂಗಿ, ವಿಶಾಲ ಹೊಸೂರ, ಗಂಗಪ್ಪ ಗುಗ್ಗುರಿ, ಬಸವರಾಜ ಜಿಗಜಿನ್ನಿ, ನಾಗಪ್ಪ ಗುಂಡ್ಲೂರ, ಬಸವರಾಜ ಶಿಂತ್ರಿ, ಶಿವಪ್ರಸಾದ ಪಾಟೀಲ, ಸುನೀಲ ಈಟಿ, ಸುನೀಲ ಹಲಗಿ, ಚಂದನ ಕೌಜಲಗಿ, ಮಂಜುನಾಥ ಹರಕುಣಿ, ವೀರು ಗೋಧಿ, ಶಾಂತಾ ಮಡ್ಡಿಕಾರ, ರತ್ನಾ ಗೋಧಿ, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts