More

    ಸ್ವಸಹಾಯ ಸಂಘದಿಂದ ಆರ್ಥಿಕ ಅಭಿವೃದ್ಧಿ

    ಕೊಡೇಕಲ್: ಸ್ವ ಸಹಾಯ ಸಂಘಗಳ ರಚನೆಯಿಂದಾಗಿ ಮಹಿಳೆಯರು ಮುಖ್ಯವಾಹಿನಿಗೆ ಬರಲು ಸಾದ್ಯವಾಗಿದೆ ಎಂದು ಶ್ರೀ ಗುರು ದುರದುಂಡೇಶ್ವರ ವಿರಕ್ತ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಹೇಳಿದರು.

    ಕೊಡೇಕಲ್ ಶ್ರೀ ಪ್ಯಾಟಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 30 ಸ್ವಸಹಾಯ ಪ್ರಗತಿ ಬಂಧು ಸಂಘಗಳ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಶ್ರೀ ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹಲವಾರು ಯೋಜನೆಗಳನ್ನು ರೂಪಿಸುವ ಮೂಲಕ ಮಹಿಳೆಯರಿಗೆ ಸ್ವಾವಲಂಬಿ ಜೀವನ ನಡೆಸಲು ಉತ್ತೇಜನ ನೀಡುವ ಜತೆಗೆ ಆರ್ಥಿಕವಾಗಿ ಸಬಲೀಕರಣಗೋಳಿಸಲು ಶ್ರಮಿಸಲಾಗುತ್ತಿದೆ ಎಂದರು.

    ಸಂಘದ ತಾಲೂಕು ಯೋಜನಾಧಿಕಾರಿ ಸಂತೊಷ ಮಾತನಾಡಿ, ಸುರಪುರ ಮತ್ತು ಹುಣಸಗಿ ತಾಲೂಕುಗಳಲ್ಲಿ 300ಕ್ಕೂ ಸ್ವ ಸಹಾಯ ಸಂಘಗಳ ರಚನೆ ಮಾಡಿದ್ದು, ಇಂದು ಸಂಘದ ಸಹಾಯದಿಂದ ಸಾವಿರಾರು ಮಹಿಳೆಯರು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಸಂಘ ಅನೇಕ ಅಭಿವೃದ್ದಿ ಕಾರ್ಯಗಳು ಮಾಡುವ ಯೋಚನೆ ಹೊಂದಿದೆ ಎಂದರು.

    ಗ್ರಾಪಂ ಉಪಾಧ್ಯಕ್ಷ ಮಲ್ಲಪ್ಪ ಕಟ್ಟಿಮನಿ, ಶರಣಯ್ಯ ಹೊಸಮಠ, ಸಾನಿಯಾ, ಲಕ್ಷ್ಮೀ, ಸುನಂದಾ ಸೇರಿ ಇತರರಿದ್ದರು. ಮೇಲ್ವಿಚಾರಕ ಮಂಜುನಾಥ ಜೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಸೇವಾ ಪ್ರತಿನಿಧಿಗಳಾದ ಸಂಗಮ್ಮ ಮುದಗಲ್ ಕಾರ್ಯಕ್ರಮ ನಿರೂಪಣೆ ಮಾಡಿದರು. ದೇವಮ್ಮ ಸ್ವಾಗತಿಸಿದರು. ಭೀಮಬಾಯಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts