More

    ಸ್ವಚ್ಛ ಪರಿಸರ ನಿರ್ಮಾಣಕ್ಕೆ ಆದ್ಯತೆ ನೀಡಿ

    ಚಿಂಚೋಳಿ: ಮೂರು ದಿನದಿಂದ ನಿರಂತರ ಮಳೆಯಾಗುತ್ತಿದ್ದು, ರಸ್ತೆ ಬದಿ ಬೆಳೆದಿರುವ ಹುಲ್ಲು ಹಾಗೂ ಮುಳ್ಳು-ಕಂಟಿ ತೆರವುಗೊಳಿಸಬೇಕು. ಪ್ರತಿ ಬಡಾವಣೆಯಲ್ಲಿ ಬ್ಲೀಚಿಂಗ್ ಪೌಡರ್ ಸಿಂಪಡಿಸುವAತೆ ಪುರಸಭೆ ಮುಖ್ಯಾಧಿಕಾರಿ ಕಾಶೀನಾಥ ಧನ್ನಿ ಹೇಳಿದರು.

    ಚಂದಾಪುರದ ರಾಷ್ಟ್ರಪಿತ ಮಹಾತ್ಮಗಾಂಧಿ ವೃತ್ತದ ಬಳಿ ಕೌಶಲಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಪುರಸಭೆ ಸಹಯೋಗದಡಿ ಭಾನುವಾರ ಹಮ್ಮಿಕೊಂಡಿದ್ದ ಹಸಿ ಮತ್ತು ಒಣ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ ನಿರ್ವಹಣೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಿತ್ಯ ಒಂದು ವಾರ್ಡ್ಗೆ ಪೌರ ಕಾರ್ಮಿಕರು, ಸಿಬ್ಬಂದಿ ಹಾಗೂ ಚುನಾಯಿತ ಪ್ರತಿನಿಧಿಗಳ ಜತೆ ಭೇಟಿ ನೀಡಿ ಶ್ರಮದಾನ ಮಾಡಲಾಗುವುದು. ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.

    ಪುರಸಭೆ ಸದಸ್ಯ ಅಹ್ಮದ್ ಶಬ್ಬೀರ್, ಸಿಬ್ಬಂದಿ ಶ್ರೀಕಾಂತ, ಸಂಗಮೇಶ, ದೇವಿಂದ್ರಪ್ಪ, ಆನಂದ ಕಾಂಬ್ಳೆ, ಶರಣಪ್ಪ, ಗುಂಡಪ್ಪ ಪೂಜಾರಿ, ಅನ್ವರ್, ಸುಮಂತ, ಸಂತೋಷ, ವಿಜ್ಞೇಶ್, ಅವಿನಾಶ, ಗಣೇಶ, ಆನಂದ, ಭಗವಂತ, ಬಸಮ್ಮ, ಸಂಗೀತಾ, ಲಕ್ಷ್ಮೀ, ರೇಷ್ಮಾಬಾಯಿ, ತುಳಜಮ್ಮ, ಇಂದ್ರಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts