More

    ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಕೊಡಿ



    ಯಾದಗಿರಿ: ಲೋಕಾಯುಕ್ತ ಎಸ್ಪಿ ಎ.ಆರ್ . ಕರ್ನೂಲ್ ನೇತೃತ್ವದ ಅಕಾರಿಗಳ ತಂಡ ನಗರದ ಹೊರ ವಲಯದಲ್ಲಿನ ಹೊಸ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

    ನೇತೃತ್ವದ ಅಕಾರಿಗಳ ತಂಡ ನಗರದ ಹೊರ ವಲಯದಲ್ಲಿನ ಹೊಸ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

    ಆಸ್ಪತ್ರೆಯಲ್ಲಿನ ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದ ಕನರ್ೂಲ್, ವೈದ್ಯಾಕಾರಿಗಳು ಮತ್ತು ಕೆಲವು ಸಿಬ್ಬಂದಿ ಸಹಿ ಹಾಕದೇ ಇರುವುದು ಕಂಡು ಬಂದಿತು. ನಿತ್ಯ ಕರ್ತವ್ಯಕ್ಕೆ ಸರಿಯಾದ ಸಮಯಕ್ಕೆ ಹಾಜರಾಗಿ, ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಬೇಕು. ಅಲ್ಲದೆ ಸಿಬ್ಬಂದಿ ಚಲನವಲನಗಳ ಮೇಲೆ ನಿಗಾ ವಹಿಸುವಂತೆ ಸ್ಥಳದಲ್ಲಿದ್ದ ಆರೋಗ್ಯಾಕಾರಿಗಳಿಗೆ ಸೂಚಿಸಿದರು.

    ಆಸ್ಪತ್ರೆಯಲ್ಲಿನ ವಾರ್ಡ್‍ಗಳಿಗೆ ಭೇಟಿ ನೀಡಿ ಸ್ವಚ್ಛತೆಯನ್ನು ಕಾಪಾಡುವಂತೆ ತಿಳಿಸಿದರು. ಮೊದಲ ಮಹಡಿಯ ಪಿಎಮ್ಆರ್ ವಿಭಾಗದ ಹತ್ತಿರ ರೋಗಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕಲ್ಪಿಸಬೇಕು. 4 ಲಿಫ್ಟ್ಗಳ ಪೈಕಿ ಕೇವಲ ಒಂದು ಮಾತ್ರ ಸುಸ್ಥಿತಿಯಲ್ಲಿದೆ. ಇದರಿಂದ ರೋಗಿಗಳು ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ಲಿಫ್ಟ್ ರಿಪೇರಿ ಮಾಡಿಸಬೇಕು ಎಂದು ನಿರ್ದೇಶನ ನೀಡಿದರು.

    ಅದರಂತೆ ಸಿಟಿ ಸ್ಕ್ಯಾನ್ ಕೇಂದ್ರವನ್ನು ಕೂಡಲೇ ಆರಂಭಿಸುವಂತೆ ಸೂಚಿಸಿದ ಅವರು ಆಸ್ಪತ್ರೆಯ ಆವರಣ, ಶೌಚಗೃಹದಲ್ಲಿ ಶುಚಿತ್ವ ಕಾಪಾಡಬೇಕು. ಕೋವಿಡ್ಗೆ ಸಂಬಂಧಪಟ್ಟಂತೆ , ಮುಂಜಾಗೃತಾ ಕ್ರಮ ವಹಿಸಬೇಕು ಎಂದರು.

    ಡಿವೈಎಸ್ಪಿ ಮೊಹಮ್ಮದ ಇಸ್ಮಾಯಿಲ್, ಪೋಲಿಸ್ ನಿರೀಕ್ಷಕ ಮಹಾದೇವ ಎನ್.ಶಿರಹಟ್ಟಿ, ಅರುಣಕುಮಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts