More

    ಸ್ವಚ್ಛತಾ ಗುತ್ತಿಗೆ ರದ್ದತಿಗೆ ಆಗ್ರಹ – ಇಲ್ಲವಾದಲ್ಲಿ ಡಿಸಿ ಕಚೇರಿ ಬಳಿ ಧರಣಿಗೆ ಎಚ್ಚರಿಕೆ

    ದಾವಣಗೆರೆ :ರಾಯಚೂರಿನ ಏಜೆನ್ಸಿಯೊಂದಕ್ಕೆ ನೀಡಲಾದ ಚಿಗಟೇರಿ ಜಿಲ್ಲಾಸ್ಪತ್ರೆಯ ಡಿ ದರ್ಜೆ ಮತ್ತು ನಾನ್ ಕ್ಲಿನಿಕಲ್ ಸ್ವಚ್ಛತಾ ಕಾರ್ಯದ ಹೊರಗುತ್ತಿಗೆ ರದ್ದುಪಡಿಸಬೇಕು ಎಂದು ಡಾ.ಬಿ.ಆರ್.ಅಂಬೇಡ್ಕರ್ ರಾಜ್ಯ ಸರ್ಕಾರಿ ಆಸ್ಪತ್ರೆಗಳ ಗುತ್ತಿಗೆ ನೌಕರರು ಹಾಗೂ ಇತರೆ ದಿನಗೂಲಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಆಗ್ರಹಿಸಿದೆ.
    ರಾಯಚೂರಿನ ಏಜೆನ್ಸಿಯು ಸ್ವಚ್ಛತಾ ಕಾರ್ಯಕ್ಕೆ ಕೆಲವರಿಗೆ ಉಪ ಗುತ್ತಿಗೆ ನೀಡಿದೆ. ಬೆಂಗಳೂರಿನ ಸ್ವಚ್ಛತಾ ಏಜೆನ್ಸಿಯೊಂದರಿಂದ ಈ ಹಿಂದೆ ಸಬ್ ಲೀಜ್ ಪಡೆದಿದ್ದ ಈ ವ್ಯಕ್ತಿಗಳು 53 ಮಂದಿ ಕಾರ್ಮಿಕರನ್ನು ಕೆಲಸದಿಂದ ಬಿಡಿಸಿ, ಬಂಧುಗಳು ಹಾಗೂ ಹೋಟೆಲ್ ಕೆಲಸಗಾರರ ಹೆಸರುಗಳನ್ನು ಅನಧಿಕೃತವಾಗಿ ಸೇರಿಸಿ ವೇತನ ಪಡೆದು ವಂಚಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ವಂಚನೆ ಆರೋಪದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆಯು ಬೆಂಗಳೂರಿನ ಏಜೆನ್ಸಿ ಗುತ್ತಿಗೆಯನ್ನು ರದ್ದುಪಡಿಸಿ ಕಪ್ಪುಪಟ್ಟಿಗೆ ಸೇರಿಸಿದೆ. ಅದರದ್ದೇ ಸಬ್ ಲೀಸ್ ಪಡೆದವರಿಂದಲೇ ರಾಯಚೂರು ಏಜೆನ್ಸಿ ಹೆಸರಲ್ಲಿ ಟೆಂಡರ್ ಹಾಕಿಸಲಾಗಿದೆ ಎಂದು ಆರೋಪಿಸಿದರು.
    ಏಜೆನ್ಸಿ ಮತ್ತು ಸಬ್ ಲೀಸ್ ಪಡೆದವರು ಕಾರ್ಮಿಕರಿಂದ ಖಾಲಿ ಕಾಗದದ ಸಹಿ ಪಡೆದು ನನ್ನ ವಿರುದ್ಧ ಜಿಲ್ಲಾಧಿಕಾರಿಗೆ ಸುಳ್ಳು ದೂರು ನೀಡಿದ್ದಾರೆ. ನಾನು ತಪ್ಪೆಸಗಿದ್ದರೆ ಯಾವುದೇ ಶಿಕ್ಷೆಗೆ ಸಿದ್ಧನಿದ್ದೇನೆ ಎಂದರು.
    ಕಾರ್ಮಿಕರು 10 ಸಾವಿರ ರೂ. ನೀಡಬೇಕು. ಇಲ್ಲವಾದಲ್ಲಿ ಕೆಲಸದಿಂದ ತೆಗೆದುಹಾಕುವ ಬೆದರಿಕೆ ಒಡ್ಡಲಾಗಿದೆ. ಪ್ರತಿ ತಿಂಗಳು ವೇತನ ಪಡೆದಾಗ ತಲಾ 1 ಸಾವಿರ ರೂ. ನೀಡುವಂತೆ ಏಜೆನ್ಸಿಯವರು ಒತ್ತಡ ಹಾಕುತ್ತಿದ್ದಾರೆ. ಈ ವಿಚಾರವಾಗಿ ತಾವು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಎಡಿಸಿ ಮೂಲಕ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದು ಇದುವರೆಗೆ ಈಡೇರಿಲ್ಲ.
    ಕೂಡಲೆ ಜಿಲ್ಲಾಧಿಕಾರಿ ಕ್ರಮ ವಹಿಸಿ ಗುತಿಗೆ ರದ್ದುಪಡಿಸಬೇಕು. ಇಲ್ಲವಾದಲ್ಲಿ ಸೆ. 29ರಿಂದ ಡಿಸಿ ಕಚೇರಿ ಬಳಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಸಂರ್ಘ ಸಮಿತಿಯ ತಿಪ್ಪೇರುದ್ರಪ್ಪ, ಮೈಲಾರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts