More

    ಸ್ವಉದ್ಯೋಗದಿಂದ ಮಹಿಳೆಯರು ಆರ್ಥಿಕವಾಗಿ ಸದೃಢ

    ಎಚ್.ಡಿ. ಕೋಟೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಹಿಳೆಯರು ಆರ್ಥಿಕ ಸಹಾಯ ಪಡೆದು ಸ್ವಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ ಎಂದು ಬಿಡಗಲು ಪಡುವಲು ವಿರಕ್ತ ಮಠಾಧ್ಯಕ್ಷ ಶ್ರೀಮಹದೇವಸ್ವಾಮೀಜಿ ತಿಳಿಸಿದರು.


    ತಾಲೂಕಿನ ಕೋಳಗಾಲ ಗ್ರಾಮದ ಮಕ್ಕಳಾಟಿಕೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಗುರುವಾರ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.


    ಮಾನವೀಯ ಮೌಲ್ಯಗಳನ್ನು ಮನುಷ್ಯನಲ್ಲಿ ಸಾಕಾರಗೊಳಿಸುತ್ತಿರುವ ಸಂಸ್ಥೆಯಾಗಿಯೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಹಿಸುತ್ತಿದೆ. ಮದ್ಯ ವರ್ಜನ ಶಿಬಿರಗಳನ್ನು ಆಯೋಜಿಸಿ, ಶಿಬಿರ ಮುಗಿದ ನಂತರವೂ ಶಿಬಿರಾರ್ಥಿಗಳ ಚಲನವಲನಗಳನ್ನು ಗಮನಿಸುತ್ತಾ ಮತ್ತೆ ಮದ್ಯದ ದಾಸರಾಗದಂತೆ ನೋಡಿಕೊಳ್ಳುತ್ತಿರುವುದು ಮೆಚ್ಚುವಂತಹ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.


    ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತಾಯ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಇಬ್ಬರು ಅಂಗವಿಕಲರಿಗೆ ವ್ಹೀಲ್‌ಚೇರ್, ಮೂವರಿಗೆ ಊರುಗೋಲು ಹಾಗೂ ಮೂವರಿಗೆ ನೀರಿನ ಹಾಸಿಗೆ ನೀಡಲಾಯಿತು.


    ಜಿಲ್ಲಾ ಯೋಜನಾಧಿಕಾರಿ ಎಂ.ಲಕ್ಷ್ಮಣ, ತಾಲೂಕು ಯೋಜನಾಧಿಕಾರಿ. ಎಂ. ಶಶಿಧರ್, ಬಿಜೆಪಿ ಮುಖಂಡ ಎಚ್.ವಿ.ಕೃಷ್ಣಸ್ವಾಮಿ, ದೇವಾಲಯ ಸಮಿತಿ ಅಧ್ಯಕ್ಷ ನಾಗರಾಜು, ಪೂಜಾ ಸಮಿತಿ ಅಧ್ಯಕ್ಷ ಎನ್.ಎಸ್.ಪ್ರಕಾಶ್, ಉಪಾಧ್ಯಕ್ಷ ಪಿ.ಎಸ್. ಮಂಜುನಾಥ್, ಮುಖಂಡರಾದ ಶಿವರಾಮೇಗೌಡ, ಮಾಯಿಗೌಡ, ಮುರಳಿಗೌಡ, ಕೆ.ಎಸ್. ಫಣಿಕುಮಾರ ಅರಸ್, ಶಿವಣ್ಣ, ಚಿನ್ನಸ್ವಾಮಿ, ನಾಗರಾಜು, ಸುಧಾ, ನಾಗಮ್ಮ, ದೇವಿರಮ್ಮ, ವಲಯ ಮೇಲ್ವಿಚಾರಕಿ ಮಂಜುಳಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts