More

    ಸ್ಯಾನಿಟೈಸೇಷನ್ ಬಳಿಕ ರೈಲು ಚುಕುಬುಕು…

    ಹುಬ್ಬಳ್ಳಿ: ಎರಡು ತಿಂಗಳ ಬಳಿಕ ಬೆಂಗಳೂರಿನಿಂದ ಸೋಮವಾರ ಮಧ್ಯಾಹ್ನ ಇಲ್ಲಿಗೆ ಆಗಮಿಸಿ, ವಾಪಸ್ ಹೊರಟ ಜನಶತಾಬ್ದಿ ರೈಲಿನಲ್ಲಿ ಕರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಯಿತು. ಮಾಸ್ಕ್ ಧರಿಸಿದ ಪ್ರಯಾಣಿಕರು ಥರ್ಮಲ್ ಸ್ಕ್ರೀನಿಂಗ್ ಬಳಿಕ ರೈಲು ಹತ್ತಿದರು. ಇದಕ್ಕೂ ಮೊದಲು ಇಡೀ ರೈಲನ್ನು ಸ್ಯಾನಿಟೈಜೇಷನ್ ಮಾಡಲಾಗಿತ್ತು.

    ಬೆಂಗಳೂರಿನಿಂದ ಹುಬ್ಬಳ್ಳಿ ನಿಲ್ದಾಣಕ್ಕೆ ರೈಲು ಬರುತ್ತಿದ್ದಂತೆ ಸುತ್ತಲೂ ಜಮಾಯಿಸಿದ ರೈಲ್ವೆ ಪೊಲೀಸರು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಧರಿಸುವುದು, ಪರಸ್ಪರ ಅಂತರ ಕಾಯ್ದುಕೊಳ್ಳುವ ಕುರಿತು ಜನರಿಗೆ ತಿಳಿಹೇಳಿ ಮುಂದಕ್ಕೆ ಕಳುಹಿಸಿಕೊಟ್ಟರು. ಅದೇ ರೈಲಿನಲ್ಲಿ ಪ್ರಯಾಣಿಸಬೇಕಿದ್ದವರಿಗೆ ರೈಲ್ವೆ ನಿಲ್ದಾಣದ ಒಂದೆಡೆ ಕೂಡ್ರಿಸಲಾಗಿತ್ತು. ನಿಲ್ದಾಣದ ಪ್ರವೇಶಕ್ಕೆ ಮುನ್ನ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಯಿತು.

    ನಿಜಾಮುದ್ದೀನ್ ಓಡಾಟ: ಇದೇ ರೈಲ್ವೆ ನಿಲ್ದಾಣದಿಂದ ಮಧ್ಯಾಹ್ನ 4.15ರ ಸುಮಾರಿಗೆ ನಿಜಾಮುದ್ದೀನ್ ಎಕ್ಸ್​ಪ್ರೆಸ್ ರೈಲು ಹೊರಟಿತು. ಸಾವಿರಾರು ಜನರು ಪ್ರಯಾಣಿಸಿದರು.

    ವೇಟಿಂಗ್ ಇದ್ದರೆ ಇಲ್ಲ: ಟಿಕೆಟ್ ಕಾಯ್ದಿರಿಸಿಕೊಂಡವರನ್ನು ಮಾತ್ರ ನಿಲ್ದಾಣದೊಳಗೆ ಬಿಡಲಾಯಿತು. ವೇಟಿಂಗ್ ಲಿಸ್ಟ್​ನಲ್ಲಿದ್ದವರಿಗೆ ತಿಳಿಹೇಳಿ ಕಳುಹಿಸಿಕೊಡಲಾಯಿತು. ಎಲ್ಲರ ಟಿಕೆಟ್ ಪರಿಶೀಲನೆ ಬಳಿಕವೇ ರೈಲ್ವೆ ನಿಲ್ದಾಣದ ಅಧಿಕಾರಿಗಳು ಈ ನಿರ್ಧಾರ ಕೈಗೊಂಡರು. ಪ್ರಯಾಣಿಕರು ರೈಲಿನಿಂದ ಇಳಿದ ಬಳಿಕ ಎಲ್ಲ ಬೋಗಿಗಳನ್ನು ಸ್ಯಾನಿಟೈಜೇಷನ್ ಮಾಡಲಾಯಿತು. ನಂತರವೇ ಬೆಂಗಳೂರಿಗೆ ತೆರಳುವ ಪ್ರಯಾಣಿಕರು ಬೋಗಿ ಪ್ರವೇಶಿಸಲು ಬಿಡಲಾಯಿತು.</

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts