More

    ಸ್ಯಾಂಡ್ ಬ್ಯಾಂಕ್​ಆರಂಭಿಸಿ

    ಕಾರವಾರ: ನಿರ್ವಿುತಿ ಕೇಂದ್ರದಿಂದ ಅಗತ್ಯ ಸ್ಥಳದಲ್ಲಿ ಸ್ಯಾಂಡ್ ಬ್ಯಾಂಕ್ ಪ್ರಾರಂಭಿಸಲು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಸೂಚಿಸಿದ್ದಾರೆ.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಸೆ.21ರಿಂದ ಅಘನಾಶಿನಿ, ಗಂಗಾವಳಿ, ಶರಾವತಿ ನದಿಗಳ ಆಯ್ದ ಅಂಗೀಕೃತ ಮರಳು ಪಟ್ಟಿಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಷರತ್ತುಗಳನ್ನು ಉಲ್ಲಂಘಿಸುವ ಉಸುಕು ಗುತ್ತಿಗೆದಾರರ ವಿರುದ್ಧ, ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ವಹಿಸಲಾಗುವುದು. ಸಾರ್ವಜನಿಕರಿಗೆ ಅರ್ಹ ದರಕ್ಕೆ ಮರಳು ಸಿಗುವಂತೆ ಮಾಡಲು ಸ್ಯಾಂಡ್ ಬ್ಯಾಂಕ್ ಪ್ರಾರಂಭಿಸಲಾಗುವುದು ಎಂದು ಹರೀಶ ಕುಮಾರ್ ತಿಳಿಸಿದರು.

    ಯಾವುದೇ ತಾಲೂಕಿನಲ್ಲಿ ಅಕ್ರಮ ಮರಳು ತೆಗೆಯುವುದು ಮತ್ತು ಸಾಗಣೆ ಕಂಡು ಬಂದಲ್ಲಿ ತಾಲೂಕು ಮರಳು ಉಸ್ತುವಾರಿ ಸಮಿತಿಯನ್ನೇ ಜವಾಬ್ದಾರರನ್ನಾಗಿ ಮಾಡಿ ಆ ವ್ಯಾಪ್ತಿಯ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

    24 ಗಂಟೆ ಚೆಕ್​ಪೋಸ್ಟ್: ಎಸ್​ಪಿ ಶಿವ ಪ್ರಕಾಶ ದೇವರಾಜು ಮಾತನಾಡಿ, ಜೊಯಿಡಾ ಮತ್ತು ದಾಂಡೇಲಿಯಲ್ಲಿನ ಚೆಕ್​ಪೋಸ್ಟ್​ಗಳನ್ನು ಬಲ ಪಡಿಸಲಾಗಿದ್ದು, ಸಿಸಿ ಕ್ಯಾಮರಾ ಹಾಗೂ ಟಿವಿ ಅಳವಡಿಸಲು ಸೂಚಿಸಲಾಗಿದೆ. ಹೊನ್ನಾವರ ಮತ್ತು ಕುಮಟಾ ತಾಲೂಕುಗಳಲ್ಲಿ ಅಕ್ರಮ ಮರಳುಗಾರಿಕೆ ಬಗ್ಗೆ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಹಾಲಿ ಚೆಕ್​ಪೋಸ್ಟ್ ಜತೆಗೆ ಹೆಚ್ಚುವರಿ ಚೆಕ್​ಪೋಸ್ಟ್ ತೆರೆಯುವ ಬಗ್ಗೆ ರ್ಚಚಿಸಲಾಗುವುದು ಎಂದರು.

    ಎಲ್ಲ ಚೆಕ್​ಪೋಸ್ಟ್​ಗಳಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸಲು ಪೊಲೀಸ್, ಕಂದಾಯ ಮತ್ತು ಅರಣ್ಯ ಇಲಾಖೆಗಳ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮ ಜರುಗಿಸಲಾಗಿದೆ. ಅಲ್ಲದೆ, ಪ್ರತಿ ದಿನದ ಸಿಸಿ ಟೀವಿ ಫೂಟೇಜ್​ಗಳನ್ನು ಆಯಾ ತಾಲೂಕಿಗೆ ಸಂಬಂಧಿಸಿದ ಡಿವೈಎಸ್​ಪಿ ಹಾಗೂ ಎಸಿ ಅವರು ಪರಿಶೀಲಿಸಿ ಜಿಲ್ಲಾಧಿಕಾರಿ ಹಾಗೂ ಎಸ್​ಪಿಗೆ ವರದಿ ನೀಡಲು ಸೂಚಿಸಲಾಗಿದೆ. ಪ್ರತಿ ತಾಲೂಕಿನಲ್ಲಿ ಮೊಬೈಲ್ ಸ್ಕಾ್ವಡ್ ಕೂಡಾ ನಿಯೋಜಿಸಲಾಗಿದೆ ಎಂದರು.

    ಡಿಎಫ್​ಒ ವಸಂತ ರೆಡ್ಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ, ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ ಡಾ.ಗಣಪತಿ ಹೆಗಡೆ ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts