More

    ಸ್ಪರ್ಧಾತ್ಮಕವಾಗಿ ಚುನಾವಣೆ ಎದುರಿಸುತ್ತೇನೆ

    ಶ್ರೀರಂಗಪಟ್ಟಣ: ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಇದು ನನ್ನ ಸಾಧನೆ ಎಂದೇಳಿಕೊಳ್ಳಲು ಸಂಕೋಚವಾಗುತ್ತಿದೆ. ರಾಜಕಾರಣ ನನಗೆ ಹೊಸದಲ್ಲ. ಹೆಚ್ಚು ಸೋಲುಂಡ ಕುಟುಂಬ ನನ್ನದು. ಆದ್ದರಿಂದ ಚುನಾವಣೆಯನ್ನು ಸ್ಪರ್ಧಾತ್ಮಕವಾಗಿ ಎದುರಿಸುವ ಶಕ್ತಿ ನನಗಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿದರು.
    ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ಕೆ.ಶೆಟ್ಟಹಳ್ಳಿ ಹೋಬಳಿ ಮಟ್ಟದ ಜೆಡಿಎಸ್ ಕಾರ್ಯಕರ್ತರ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸಾಮಾನ್ಯ ಹಾಗೂ ಬಡಜನರಿಗೆ ಶಾಶ್ವತವಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಪಂಚರತ್ನ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಬಡವರ್ಗಕ್ಕೆ ಉಚಿತ ಶಿಕ್ಷಣ, ಆರೋಗ್ಯ ಸೇವೆ, ರೈತರ ಅನುಕೂಲಕ್ಕಾಗಿ ರೈತ ಚೈತನ್ಯ, ಯುವ ಹಾಗೂ ಮಹಿಳಾ ಸಬಲೀಕರಣ ಹಾಗೂ ವಸತಿ ಆಸರೆ ಸೇರಿದಂತೆ 5 ಬಹುಮುಖ್ಯ ಯೋಜನೆಗಳನ್ನ ರೂಪಿಸಲು ಮುಂದಾಗಿರುವುದು ಅವರ ದೂರದೃಷ್ಠಿಯ ಯೋಜನೆಗಳಾಗಿವೆ. ಹಾಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
    ಕ್ಷೇತ್ರದಲ್ಲಿ ಒಂದೇ ಕುಟುಂಬದ ಮೂವರು 7 ಬಾರಿ ಶಾಸಕರಾಗಿ ಆಯ್ಕೆ ಮಾಡಿದರೂ ಅಭಿವೃದ್ಧಿ ಮಾತ್ರ ಆಗಿಲ್ಲ. 23ನೇ ಶತಮಾನದ ನನ್ನ ಅವಧಿಯಲ್ಲಿ ಚರಂಡಿ ಹಾಗೂ ರಸ್ತೆಗಳನ್ನ ಇಂದಿಗೂ ಅಭಿವೃದ್ಧಿ ಪಡಿಸುತ್ತಿರುವುದು ಜನಪ್ರತಿನಿಧಿಗಳು ತಲೆ ತಗ್ಗಿಸುವ ವಿಚಾರ. ಇಷ್ಟು ವರ್ಷ ಅವರಿಗೆ ಅಧಿಕಾರ ಕೊಟ್ಟರೂ ಅಭಿವೃದ್ಧಿ ಮಾಡದೆ ಇದೀಗ ಜನರ ಬಳಿ ಕಣ್ಣೀರಿಟ್ಟು ಮತಯಾಚಿಸುವುದು ಅವರಿಗೆ ಶೋಭೆ ತರುವಂತದಲ್ಲ ಎಂದು ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ವಿರುದ್ಧ ಗುಡುಗಿದ ಅವರು, ಸಚಿವ ಕೆ.ಸಿ.ನಾರಾಯಣಗೌಡ ಮಾಜಿ ಪ್ರಧಾನಿ ದೇವೇಗೌಡ ಅವರ ಮನೆಯಿಂದ ಅನ್ಯಾಯವಾಗಿದೆ ಎನ್ನುವ ಜತೆಗೆ ಎಚ್‌ಡಿಕೆ ವಿರುದ್ಧವೂ ಮಾತನಾಡುತ್ತಿರುವುದು ಸರಿಯಲ್ಲ. ಈ ಬಾರಿ ಅವರಿಗೆ ಠೇವಣಿ ಸಹ ದೊರೆಯುವುದಿಲ್ಲ. ಕೇವಲ ಎರಡು-ಮೂರು ವರ್ಷಗಳ ಅಧಿಕಾರದ ಆಸೆಗಾಗಿ ಪಕ್ಷಕ್ಕೆ ದ್ರೋಹ ಬಗೆದು ಹೋದವರಿಗೆ ಜೆಡಿಎಸ್ ವಿರುದ್ಧ ಮಾತನಾಡುವ ನೈತಿಕತೆ ನಿಮಗಿಲ್ಲ. ಇದೇ ರೀತಿ ಮಾತು ಮುಂದುವರಿಸಿದರೆ ನಿಮ್ಮ ಕ್ಷೇತ್ರಕ್ಕೆ ಬಂದು ಹೊಸ ವಿಷಯಗಳ ಬಗ್ಗೆ ಮಾತನಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
    200ಕ್ಕೂ ಹೆಚ್ಚು ಜನರ ಸೇರ್ಪಡೆ: ಸಭೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಯ್ಯ ಸೇರಿದಂತೆ ಕೆ.ಶೆಟ್ಟಹಳ್ಳಿ ಹೋಬಳಿಯ 200ಕ್ಕೂ ಹೆಚ್ಚು ಕಾಂಗ್ರೆಸ್, ಬಿಜೆಪಿ ಹಾಗೂ ರೈತ ಸಂಘದ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು. ಇದೇ ವೇಳೆ ಮಾತನಾಡಿದ ಶ್ರೀಕಂಠಯ್ಯ, ಶಾಸಕರ ಕಾರ್ಯವೈಖರಿ ಮತ್ತು ಅಭಿವೃದ್ಧಿ ಕೆಲಸ ಹಾಗೂ ಅವರ ದೂರದೃಷ್ಟಿ ಕಾರ್ಯಗಳನ್ನ ಮೆಚ್ಚಿ ಪಕ್ಷ ಸೇರ್ಪಡೆ ಗೊಂಡಿದ್ದೇನೆ ಎಂದರು.
    ಜೆಡಿಎಸ್ ತಾಲೂಕು ಅಧ್ಯಕ್ಷ ಪೈ.ಮುಕುಂದ, ಯುವ ಘಟಕ ಅಧ್ಯಕ್ಷ ಕಡತನಾಳು ಸಂಜಯ್, ಟಿಎಪಿಸಿಎಂಎಸ್ ಅಧ್ಯಕ್ಷ ದಿವಾಕರ್, ಪುರಸಭಾ ಸದಸ್ಯ ಎಸ್.ಪ್ರಕಾಶ್, ಎಂ.ಶೆಟ್ಟಹಳ್ಳಿ ಯತೀಶ್, ಬಾಬುರಾಯನಕೊಪ್ಪಲು ತಿಲಕ್, ನೆಲಮನೆ ದಯಾನಂದ್ ಸೇರಿದಂತೆ ಹಲವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts